ಮಂಗಳವಾರ, ಜೂನ್ 15, 2021
24 °C

ಹಂದಿ, ನಾಯಿಗಳಿಗೆ ವಿಷಪ್ರಾಶನ, ಅಂಬೇಡ್ಕರ್ ಪುತ್ಥಳಿ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರೂ. 9.55 ಲಕ್ಷ ಮೊತ್ತದ ನಿರೀಕ್ಷಿತ ಉಳಿತಾಯ ವನ್ನೊಳಗೊಂಡ 2012- 13ನೇ ಸಾಲಿನ ಬಾಗಲಕೋಟೆ ನಗರಸಭೆಯ ಬಜೆಟ್‌ಗೆ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅನುಮೋದನೆ ನೀಡಿದರು.ನಗರಸಭೆ ಅಧ್ಯಕೆ ಜ್ಯೋತಿ ಭಜಂತ್ರಿ ಅಧ್ಯಕ್ಷೆಯಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತ ಎ.ಬಿ.ಶಿಂಧೆ ಅವರು  ರೂ. 24,38 ಕೋಟಿ ಆದಾಯ ಮತ್ತು ರೂ.24,29 ಕೋಟಿ ಖರ್ಚನ್ನು ಒಳಗೊಂಡ ಬಜೆಟ್ ಅನ್ನು ಮಂಡಿಸಿದರು.ನಿರೀಕ್ಷಿತ ಆದಾಯ: ಆಸ್ತಿ ತೆರಿಗೆಯಿಂದ ರೂ. 2 ಕೋಟಿ, ನೀರಿನ ತೆರಿಗೆಯಿಂದ ರೂ. 70 ಲಕ್ಷ, ಮಳಿಗೆಗಳ ಬಾಡಿಗೆ ಯಿಂದ ರೂ.25 ಲಕ್ಷ, ಮುಳುಗಡೆ ಪರಿಹಾರಧನದಿಂದ ರೂ. 4 ಕೋಟಿ, ಕಟ್ಟಡ, ಉದ್ದಿಮೆ ಪರವಾನಗಿಯಿಂದ ರೂ.61,60 ಲಕ್ಷ, ಬ್ಯಾಂಕ್ ಬಡ್ಡಿಯಿಂದ ರೂ. 56,60 ಲಕ್ಷ ಮತ್ತು ಇತರೆ ಮೂಲಗಳಿಂದ ರೂ.66,21 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.ರಾಜ್ಯ ಸರ್ಕಾರದ ಎಸ್‌ಎಫ್‌ಸಿ, ವೇತನ, ವಿದ್ಯುಚ್ಛಕ್ತಿ ಅನುದಾನದಿಂದ ರೂ.10,40 ಲಕ್ಷ, ಕೇಂದ್ರ ಮತ್ತು ರಾಜ್ಯ ಸರ್ಕಾರದ 13ನೇ ಹಣ ಕಾಸು ಆಯೋಗದಿಂದ ರೂ. 2,19 ಕೋಟಿ ಹಾಗೂ ಅಸಾಮಾನ್ಯ ಸ್ವೀಕೃತಿಯಿಂದ ರೂ.2,99 ಕೋಟಿ ಸೇರಿದಂತೆ ಒಟ್ಟು 24,38 ಕೋಟಿ ಆದಾಯ ನಿರೀಕ್ಷಿಸಲಾಗಿದೆ.ಖರ್ಚು-ವೆಚ್ಚ: ನೌಕರರ ವೇತನ, ಪಿಂಚಣಿಗಾಗಿ ರೂ.4,78 ಲಕ್ಷ, ನೀರು ಸರಬರಾಜು ಮತ್ತು ಬೀದಿ ದೀಪದ ವಿದ್ಯುತ್ ಶುಲ್ಕಕ್ಕಾಗಿ ರೂ. 1.5 ಕೋಟಿ, ನಗರವನ್ನು ಮಾದರಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನೀರು ಸರಬರಾಜು, ರಸ್ತೆ, ಬೀದಿ ದೀಪ, ಚರಂಡಿ ಹಾಗೂ ಘನತ್ಯಾಜ್ಯ ವಿಲೇವಾರಿಯನ್ನು ಅಚ್ಚುಕಟ್ಟಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಲು ರೂ.2.22 ಕೋಟಿ ಹಾಗೂ ನೀರು ಸರಬರಾಜು, ರಸ್ತೆ, ಬೀದಿ ದೀಪ, ಚರಂಡಿ, ಕಟ್ಟಡ ಹಾಗೂ ಘನತ್ಯಾಜ್ಯ ನಿರ್ವಹಣಾ ಘಟಕ ಇತ್ಯಾದಿಗಳ ಹೊಸ ಕಾಮಗಾರಿಗಳನ್ನು ಸ್ಥಾಪಿಸಲು ರೂ. 5,64 ಕೋಟಿ, ನಗರದಲ್ಲಿ ಹೊಸ ಮಾದರಿಯ ಶಾಪಿಂಗ್ ಮಾಲ್, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ರೂ. 4,67 ಕೋಟಿ ಖರ್ಚು ನಿರೀಕ್ಷಿಸಲಾಗಿದೆ.ನಗರಸಭೆ ವಾಹನಗಳ ಇಂಧನ, ವಿಮೆ, ದುರಸ್ಥಿ ಹಾಗೂ ಇತರೆ ಸಾಮಾನ್ಯ ಆಡಳಿತ ವೆಚ್ಚಗಳಿಗಾಗಿ ರೂ.1,24 ಕೋಟಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಇತರೆ ಬಡಜನರ, ಅಂಗವಿಕಲರ ಕಲ್ಯಾಣಕ್ಕಾಗಿ ಮತ್ತು ಕ್ರೀಡಾ ಚಟುವಟಿಕೆಯ ಉತ್ತೇಜನಕ್ಕಾಗಿ ರೂ. 1,62 ಲಕ್ಷ ಮತ್ತು ಅಸಾಮಾನ್ಯ ಪಾವತಿಗಾಗಿ ರೂ.1,99ಕೋಟಿ ಸೇರಿದಂತೆ ಒಟ್ಟು ರೂ.24,29 ಕೋಟಿ ವೆಚ್ಚವನ್ನು ನಿಗದಿಪಡಿ ಸಲಾಗಿದೆ.ಅಂಬೇಡ್ಕರ್ ಪುತ್ಥಳಿ ಸ್ಥಳಾಂತರ: ಬಜೆಟ್ ಬಳಿಕ ನಡೆದ ಚರ್ಚೆಯಲ್ಲಿ ಹಳೆ ಬಾಗಲಕೋಟೆಯ ಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಯನ್ನು ನವನಗರದ ಜಿಲ್ಲಾಡಳಿತ ಭವನದ ಮುಂಭಾಗದ ಉದ್ಯಾನವನಕ್ಕೆ ಸ್ಥಳಾಂತ ರಿಸಲು ಸಭೆಯಲ್ಲಿ ತೀರ್ಮಾನಿಸ ಲಾಯಿತು.ಬಸ್ ನಿಲ್ದಾಣ ನಿರ್ಮಾಣ: ನಗರದ ರೈಲು ನಿಲ್ದಾಣದ ಮುಂಭಾಗ ಬಸ್ ತಂಗುದಾಣ ನಿರ್ಮಿಸಲು ಸಾರ್ವಜನಿ ಕರಿಂದ ಬಂದ ಅರ್ಜಿಯನ್ನು ಪರಿಶೀಲಿಸಿ, ಈ ಸಂಬಂಧ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆಯಲು ಶಾಸಕ ಚರಂತಿಮಠ ಸೂಚಿಸಿದರು.ವಿಷ ಪ್ರಾಶನ: ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿ, ಹಂದಿಗಳ ಉಪ ಟಳ ಹೆಚ್ಚಿರುವುದರಿಂದ ನಗರಸಭೆ ಯಿಂದ ಅವುಗಳಿಗೆ ವಿಷಪ್ರಾಸನ ಮಾಡಲು ಕ್ರಮಕೈಗೊಳ್ಳುವಂತೆ ಹಾಗೂ  ಬಿಡಾಡಿ ದನಕರುಗಳನ್ನು ಹಿಡಿದು ಗೋಶಾಲೆಗೆ ಬಿಟ್ಟುಬರಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿ ಪ್ಲಾಸ್ಟಿಕ್ ಕೈಚೀಲಗಳ ಬಳಕೆ ನಿಷೇಧಿಸಿದರೂ ಕೂಡ ಸಮರ್ಪ ಕವಾಗಿ ಅನುಷ್ಠಾನ ವಾಗದಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದ ಶಾಸಕರು, ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ನವನಗರ, ವಿದ್ಯಾಗಿರಿ ಮತ್ತು ಹಳೆ ಬಾಗಲಕೋಟೆಯಲ್ಲಿ ರಸ್ತೆ, ಪಾದಾಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಗೂಡಂಗಡಿ, ತಳ್ಳುಗಾಡಿ ನಿಲ್ಲಿಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ತಡೆಯುವಂತೆ ತಿಳಿಸಿದರು.

ಏಪ್ರಿಲ್ 2ರಿಂದ `ನಾಗರಿಕ ಸನ್ನದು~ ಜಾರಿಯಾಗುತ್ತಿದ್ದು, ಈ ಬಗ್ಗೆ ಅಗತ್ಯ ಪ್ರಚಾರ ಕೈಗೊಳ್ಳಬೇಕೆಂದು ಪೌರಾಯುಕ್ತರಿಗೆ ಸಲಹೆ ಮಾಡಿದರು.ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಗುಳೇದ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಯಮನಾಳ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಸೇರಿಸಂತೆ ಸದಸ್ಯರು, ನಗರಸಭೆ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.