ಭಾನುವಾರ, ಮೇ 16, 2021
22 °C

ಹಗರಣದ ರೂವಾರಿ ಹೆಸರನ್ನು ಬಹಿರಂಗ ಪಡಿಸಲಿ: ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): `ವೋಟಿಗಾಗಿ ನೋಟು~ ಹಗರಣದ ಹಿಂದೆ ಇರುವ ವ್ಯಕ್ತಿಗಳ ಹೆಸರನ್ನು  ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಸಮಾಜವಾದಿ ಪಕ್ಷದ ಮಾಜಿ ಮುಖಂಡ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರು ಬಹಿರಂಗಪಡಿಸಬೇಕು ಎಂದು ಬಿಜೆಪಿ ಹೇಳಿದೆ.`ಈ ಹಗರಣದಲ್ಲಿ ಯಾರ ಹೆಸರು ಬಂದರೂ, ಹಗರಣದ ಪ್ರಯೋಜನ ಪಡೆದಿರುವುದು ಯುಪಿಎ ಸರ್ಕಾರ~ ಎಂದು ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಡಿ ಸುದ್ದಿಗಾರರಿಗೆ  ತಿಳಿಸಿದರು.`ಹಗರಣದಿಂದ ಪ್ರಯೋಜನ ಪಡೆದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹೇಗೆ? ಈ ಹಗರಣದ ಸಂಬಂಧ ಸ್ಪಷ್ಟನೆ ನೀಡಲು ಮತ್ತು ರೂವಾರಿಗಳ ಹೆಸರನ್ನು ಬಹಿರಂಗ ಪಡಿಸಲು ಅಮರ್ ಸಿಂಗ್ ಅವರಿಗೆ ಇದು ಸೂಕ್ತ ಸಮಯ~ ಎಂದು  ರೂಡಿ ಹೇಳಿದರು.ಲೋಕಸಭೆಯಲ್ಲಿ 2008ರಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಡೆದಿದ್ದ  `ಓಟಿಗಾಗಿ ನೋಟು~ ಹಗರಣದ ಲ್ಲಿ ಭಾಗಿಯಾದ ಆರೋಪದಲ್ಲಿ ಅಮರ್ ಸಿಂಗ್ ಮತ್ತು ಇಬ್ಬರು ಬಿಜೆಪಿ ಸಂಸತ್ ಸದಸ್ಯರನ್ನು ಮಂಗಳವಾರ ಬಂಧಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ಈ ಮಧ್ಯೆ, ಹಗರಣದಲ್ಲಿ ಬಳಕೆಯಾದ ಹಣದ ಮೂಲ ವಿಚಾರ ಅತ್ಯಂತ ಪ್ರಮುಖವಾದುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.`ಅಷ್ಟೊಂದು ಹಣ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿಲ್ಲ. ಇವುಗಳು ಅತ್ಯಂತ ಪ್ರಮುಖ ವಿಚಾರವಾಗಿದ್ದು, ಸಿಬಿಐ ಈ ಬಗ್ಗೆ ಗಮನ ಹರಿಸಬೇಕು~ ಎಂದು ಪ್ರಸಾದ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.