ಹಟ್ಟಿ ಚಿನ್ನದ ಗಣಿ: ಇಲ್ಲಿನ ಚಿನ್ನದ ಗಣಿಯಲ್ಲಿ 2011-12ನೇ ಸಾಲಿನಲ್ಲಿ ಒಟ್ಟು 2,208 ಕೆ.ಜಿ ಚಿನ್ನ ಉತ್ಪಾದನೆ ಆಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 48 ಕೆ.ಜಿಗಳಷ್ಟು ಹೆಚ್ಚಿಗೆ ಇರಲಿದೆ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಂ.ಎಲ್. ಪಾಟೀಲ್ ಗುರುವಾರ ತಿಳಿಸಿದರು.

`ಪ್ರಜಾವಾಣಿ~ ಜತೆ ಮಾತನಾಡಿದ ಅವರು, ಪ್ರಸ್ತುತ ಆರ್ಥಿಕ ವರ್ಷದ ಆರಂಭದಲ್ಲಿ ಯಾಂತ್ರಿಕ ಅಡತಡೆಗಳಿಂದಾಗಿ ಉತ್ಪಾದನೆಗೆ ಸ್ವಲ್ಪ ಹಿನ್ನಡೆಯಾಗಿತ್ತು. ಆ ಕೊರತೆಯನ್ನು ಈಗ ಸರಿದೂಗಿಸಿಕೊಳ್ಳಲಾಗಿದೆ. ಗಣಿಯಲ್ಲಿ ಮೊದಲು ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ನಂತರ ಉತ್ಪಾದನೆಯತ್ತ ಗಮನ ಕೊಡಲಾಗುತ್ತದೆ. ಉತ್ಪಾದನೆಗಿಂತ ಕಾರ್ಮಿಕರ ಸುರಕ್ಷತೆ ಮುಖ್ಯ ಎಂದು ಹೇಳಿದರು.

ವೇತನ ಒಪ್ಪಂದ: ಕಾರ್ಮಿಕರ ಹೊಸ ವೇತನ ಒಪ್ಪಂದದ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಕಾರ್ಮಿಕ ವೇತನ ಮತ್ತು ಭತ್ಯೆ ಸೇರಿಸಿ ಒಟ್ಟು ಶೇ 23ರಷ್ಟು ವೇತನ ಹೆಚ್ಚಳವಾಗಲಿದೆ.
ಈ ಒಪ್ಪಂದಕ್ಕೆ ನಿರ್ದೇಶಕರ ಮಂಡಳಿ ಹಾಗೂ ರಾಜ್ಯ ಸರ್ಕಾರದ ಅನುಮೋದನೆ ಪಡೆಯಬೇಕಾಗಿದೆ ಎಂದರು.

150 ಜನ ಕುಶಲ ಕಾರ್ಮಿಕರ ಹುದ್ದೆಗೆ ಸುಮಾರು 3 ಸಾವಿರ ಜನ ಅರ್ಜಿ ಹಾಕಿದ್ದಾರೆ. ಅರ್ಜಿಗಳನ್ನು ಪರಿಷ್ಕರಿಸಿ ಮಾರ್ಚ್ ಕೊನೆಯ ವಾರದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. 2007ರ ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್ (ಎನ್ಪಿಸಿ) ವರದಿ ಪ್ರಕಾರ ಗಣಿಗೆ ಇನ್ನೂ 590 ಜನ ಕಾರ್ಮಿಕರು ಬೇಕಾಗಿದ್ದಾರೆ. ಹಂತ ಹಂತವಾಗಿ ಕಂಪೆನಿಯ ನೇಮಕಾತಿ ನಿಯಮದಂತೆ ನೇಮಿಸಲಾಗುವುದು. ಡಿಪ್ಲೊಮಾ, ಪದವಿ ಪಡೆದ 18 ಜನ ಹಿರಿಯ ಸಿಬ್ಬಂದಿಗೆ ಕಿರಿಯ ಅಧಿಕಾರಿಗಳಾಗಿ ಮುಂಬಡ್ತಿ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.