ಹಟ್ಟಿ: ಯೋಗ ಶಿಬಿರ ಆರಂಭ

7

ಹಟ್ಟಿ: ಯೋಗ ಶಿಬಿರ ಆರಂಭ

Published:
Updated:

ಹಟ್ಟಿ ಚಿನ್ನದ ಗಣಿ: ಸ್ಥಳೀಯ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಯೋಗ ಶಿಬಿರ ಶುಕ್ರವಾರ ಟ್ರಸ್ಟ್ ಅಧ್ಯಕ್ಷ ಡಾ. ಮಾವಿನಕಟ್ಟಿ ಉದ್ಘಾಟಿಸಿದರು.ಯೋಗ ಸಾಧಕ ಆನಂದ ಪತ್ತಾರ ಸಿಂಧನೂರ ಶಿಬಿರಾರ್ಥಿಗಳಿಗೆ ಪ್ರಾಣಾಯಾಮ ಮತ್ತು ಯೋಗ ವಿವಿಧ ಆಸನಗಳ ಕುರಿತು ವಿವರಿಸಿದರು.ದೈಹಿಕ ಮತ್ತು ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆಯಲು ಯೋಗಾಭ್ಯಾಸ ಅವಶ್ಯಕ. ದೈಹಿಕ ಮತ್ತು ಮಾನಸಿಕ ರೋಗಗಳು ಬರಲು ಅಜ್ಞಾನವೇ ಕಾರಣ. ಆದುದರಿಂದ ರೋಗದಿಂದ ಮುಕ್ತವಾಗಿರಲು ಯೋಗ, ಪ್ರಾಣಾಯಮ ಮಾಡಬೇಕೆಂದರು.ಡಾ. ಪ್ರಶಾಂತ, ಡಾ. ಎಲ್.ಪಿ ಕುಲಕರ್ಣಿ, ರತ್ನ ಅಂಗಡಿ, ಎನ್.ಸ್ವಾಮಿ ಸೇರಿದಂತೆ ನೂರಾರು ಜನ ಈ ಶಿಬಿರದಲ್ಲಿ ಭಾಗವಹಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry