ಶನಿವಾರ, ಜನವರಿ 18, 2020
27 °C

ಹಡಗು ದುರಂತ: ಕಂಪೆನಿ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಮ್ (ಪಿಟಿಐ): `ಕೋಸ್ಟಾ ಕಾನ್‌ಕಾರ್ಡಿಯಾ~ ಹಡಗನ್ನು ಕಿನಾರೆಗೆ ಸಮೀಪ ತರುವಂತೆ ಹಡಗು ಕಂಪೆನಿಯ ವ್ಯವಸ್ಥಾಪಕರು ತಮ್ಮ ಮೇಲೆ ಒತ್ತಡ ತಂದಿದ್ದರು ಎಂದು ಈ ಹಡಗಿನ ಕ್ಯಾಪ್ಟನ್ ಪ್ರಾನ್ಸ್‌ಸ್ಕೊ ಶೆಟ್ಟಿನೊ ತನ್ನ ಸ್ನೇಹಿತರೊಬ್ಬರ ಬಳಿ ಹೇಳಿಕೊಂಡಿದ್ದಾರೆ ಎಂದು ಇಟಲಿಯ ಮಾಧ್ಯಮ ವರದಿ ಮಾಡಿದೆ.`ಹಡಗು ಕಂಪೆನಿಯವರು ಆದೇ ಮಾರ್ಗದಲ್ಲಿ  ಬರುವಂತೆ ಒತ್ತಡ ತಂದರು. ಆದರೆ, ತಮ್ಮ ಬಳಿಯಿದ್ದ ಉಪಕರಣಗಳಿಂದ ಆ ಮಾರ್ಗದಲ್ಲಿ ಬಂಡೆಗಳಿದ್ದದ್ದು ಗೋಚರಿಸಲಿಲ್ಲ. ಹಾಗಾಗಿ ನಾವು ಅದೇ ಮಾರ್ಗದಲ್ಲಿ ಹಡಗನ್ನು ನುಗ್ಗಿಸಿದೆವು~ ಎಂದು ಶೆಟ್ಟಿನೊ ಹೇಳಿದ್ದಾರೆ.ಈ ಹಡಗು ಜ. 13ರಂದು ದುರಂತಕ್ಕೀಡಾದ ಕಾರಣ 16 ಮಂದಿ ಸಾವನ್ನಪ್ಪಿದ್ದರು.

 

ಪ್ರತಿಕ್ರಿಯಿಸಿ (+)