ಬುಧವಾರ, ಜನವರಿ 22, 2020
28 °C
ಮಾಡಿ ನಲಿ ಸರಣಿ 45

ಹಣ್ಣಿನ ವಿದ್ಯುತ್ ಕೋಶ

ಪ್ರೊ. ಸಿ. ಡಿ. ಪಾಟೀಲ್ Updated:

ಅಕ್ಷರ ಗಾತ್ರ : | |

ಹಣ್ಣಿನ ವಿದ್ಯುತ್ ಕೋಶ

ಸಾಮಗ್ರಿಗಳು: ನಿಂಬೆ/ಮೋಸಂಬಿ ಹಣ್ಣುಗಳು, ಸತು ಹಾಗೂ ತಾಮ್ರದ ತುಂಡುಗಳು, ವಿದ್ಯುತ್ ತಂತಿ, ಗ್ಯಾಲ್ವನಾಮೀಟರ್.

ವಿಧಾನ :

೧) ಚಿತ್ರದಲ್ಲಿ ತೋರಿಸಿದಂತೆ ನಿಂಬೆ/ಮೋಸಂಬಿ ಹಣ್ಣನ್ನು ತೆಗೆದುಕೊಳ್ಳಿ.

೨) ಸತು ಹಾಗೂ ತಾಮ್ರದ ಎರಡು ಚಿಕ್ಕ ತುಂಡುಗಳನ್ನು ತೆಗೆದುಕೊಂಡು, ಅವುಗಳ ಒಂದೊಂದು ತುದಿಗೆ ವಿದ್ಯುತ್ ತಂತಿಯನ್ನು ಜೋಡಿಸಿ.

೩) ಸತು ಮತ್ತು ತಾಮ್ರದ ತುಂಡುಗಳನ್ನು ನಿಂಬೆ/ಮೋಸಂಬಿ ಹಣ್ಣಿನಲ್ಲಿ ಸಿಕ್ಕಿಸಿ, ಚಿತ್ರದಲ್ಲಿ ತೋರಿಸಿದಂತೆ ಗ್ಯಾಲ್ವನಾಮೀಟರ್ ಗೆ ಜೋಡಿಸಿ.ಪ್ರಶ್ನೆ : ಗ್ಯಾಲ್ವನಾಮೀಟರಿನ ಮುಳ್ಳಿನಲ್ಲಾದ ಬದಲಾವಣೆ ಏನು? ಯಾಕೆ?

ಉತ್ತರ:  ಗ್ಯಾಲ್ವನಾಮೀಟರ್‌ನ ಮುಳ್ಳು ಕಂಪನಗೊಂಡು ವಿದ್ಯುತ್ ಪ್ರವಾಹವನ್ನು ತೋರಿಸುತ್ತದೆ. ವಿದ್ಯುತ್ ಕೋಶದಲ್ಲಿ ಎರಡು ವಿದ್ಯುತ್ ವಾಹಕಗಳಿವೆ. ಅವು ಬೇರ-ಬೇರೆ ಲೋಹಗಳಿಂದಾಗಿವೆ. ಅವುಗಳಿಗೆ ವಿದ್ಯುದ್ವಾರ ಅನ್ನುತ್ತಾರೆ. ಅವುಗಳನ್ನು ವಿದ್ಯುದ್ವಿಭಾಜದಲ್ಲಿ ಮುಳುಗಿಸಿದಾಗ ಬೇರೆ-ಬೇರೆ ವಿದ್ಯುತ್ ಒತ್ತಡವು ಉಂಟಾಗಿ ಇಲೆಕ್ಟ್ರಾನುಗಳು ಸಂಚರಿಸುತ್ತವೆ. ಇದರಿಂದ ಗ್ಯಾಲ್ವನಾಮೀಟರಿನಲ್ಲಿಯ ಮುಳ್ಳು ಕಂಪನವಾಗುತ್ತದೆ. ಇಲ್ಲಿ ಸತು ಋಣ ಫಲಕ (ಕ್ಯಾಥೋಡ್) ದಂತೆ ಹಾಗೂ ತಾಮ್ರವು ಧನ ಫಲಕ (ಅನೋಡ್) ದಂತೆ ವರ್ತಿಸುತ್ತವೆ. ನಿಂಬೆ/ಮೊಸಂಬಿ ರಸವು ವಿದ್ಯುದ್ವಿಭಾಜ್ಯವಾಗಿ ಕೆಲಸ ಮಾಡುತ್ತದೆ.

ಪ್ರತಿಕ್ರಿಯಿಸಿ (+)