ತರಕಾರಿ - ಹಣ್ಣು ಹಂಪಲು ಆರೋಗ್ಯಕ್ಕೆ ಪೂರಕ ಎಂದು ಭಾವಿಸಿ, ಯಥೇಚ್ಛವಾಗಿ ಸೇವಿಸುವವರಿಗೆ ಇದು ‘ಶಾಕ್’ ಕೊಡುವ ವಿಚಾರ. ಕಾಯಿಪಲ್ಲೆಗಳೆಲ್ಲ ಪೋಷಕಾಂಶಗಳ ಆಗರ ಅಂದುಕೊಂಡವರಿಗೆ ಅದರಲ್ಲಿ ಅಡಗಿರುವ ಅಂಶಗಳು ಬೆಚ್ಚಿ ಬೀಳಿಸುತ್ತಿವೆ. ಕ್ಯಾನ್ಸರ್, ಹೃದಯರೋಗ, ನರಮಂಡಲ, ಶ್ವಾಸಕೋಶಕ್ಕೆ ಧಕ್ಕೆ ತಂದೊಡ್ಡಬಲ್ಲ ಅಪಾಯಕಾರಿ ರಾಸಾಯನಿಕಗಳು ತರಕಾರಿಗಳಲ್ಲಿ ಅಡಗಿವೆ ಎಂಬುದನ್ನು ಸ್ವಯಂಸೇವಾ ಸಂಸ್ಥೆಯೊಂದು ಪತ್ತೆ ಹಚ್ಚಿದ ಬಳಿಕ, ದೆಹಲಿ ಹೈಕೋರ್ಟ್ ಕೂಡ “ಇನ್ನೂ ಏನೇನಿವೆ ಇದರಲ್ಲಿ? ಎಲ್ಲವನ್ನೂ ಪತ್ತೆ ಹಚ್ಚಿಬಿಡಿ” ಎಂದು ಆದೇಶ ನೀಡಿದೆ.

ಅಷ್ಟಕ್ಕೂ ತರಕಾರಿ- ಫಲಗಳಲ್ಲಿ ಏನೇನಿವೆ ಗೊತ್ತೇ? ಅಪಾಯಕಾರಿ ಎಂದು ನಿಷೇಧಿಸಲಾದ ನಾಲ್ಕು ಕೀಟನಾಶಕಗಳಿವೆ. ಇಲಿ ಪಾಷಾಣಕ್ಕೆ ಬಳಸುವ ವಿಷಗಳ ಅಂಶವೂ ಇದರಲ್ಲಿ ಕಂಡುಬಂದಿದೆ. ಈ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ದೇಶದ ರಾಜಧಾನಿಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿರುವ ಹಣ್ಣುಗಳು ಹಾಗೂ ತರಕಾರಿಗಳ ಸ್ಯಾಂಪಲ್ ಅನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ನೀಡುವಂತೆ ಕಳೆದ ವಾರ ಆದೇಶಿಸಿದೆ.

ಯುರೋಪಿಯನ್ ಮಾನದಂಡ ಅನುಮತಿ ನೀಡಿರುವುದಕ್ಕಿಂತ 750 ಪಟ್ಟು ಪ್ರಮಾಣದಷ್ಟು ಕೀಟನಾಶಕದ ಅಂಶಗಳು ತರಕಾರಿ- ಹಣ್ಣು ಹಂಪಲುಗಳಲ್ಲಿವೆ ಎಂಬುದನ್ನು ದೆಹಲಿ ಮೂಲದ ಸ್ವಯಂಸೇವಾ ಸಂಸ್ಥೆ ‘ಕನ್ಸೂಮರ್ ವಾಯ್ಸೆ’ ಪತ್ತೆಹಚ್ಚಿದೆ.

ಕಳೆದ ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ದೆಹಲಿಯ ವಿವಿಧ ಮಾರುಕಟ್ಟೆಗಳಲ್ಲಿ 11,000 ಸ್ಯಾಂಪಲ್ಗಳನ್ನು ತೆಗೆದುಕೊಂಡು ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸಲಾಗಿದೆ. ಇದರ ಅನ್ವಯ, ತರಕಾರಿಗಳಲ್ಲಿ ಅಪಾಯಕಾರಕ ಕೀಟನಾಶಕದ ಅಂಶಗಳು ಇರುವುದನ್ನು ಸಂಸ್ಥೆಯು ಬಹಿರಂಗಪಡಿಸಿದೆ.

ಏನೇನಿವೆ..?
ಆರೋಗ್ಯಕ್ಕೆ ತೀವ್ರ ಧಕ್ಕೆ ತಂದೊಡ್ಡಬಲ್ಲ ಹಲವು ಬಗೆಯ ಪೀಡೆನಾಶಕಗಳ ಅಂಶ ತರಕಾರಿಯಲ್ಲಿ ಪತ್ತೆಯಾಗಿವೆ. ನರಮಂಡಲ ವ್ಯವಸ್ಥೆಯನ್ನು ಹಾಳು ಮಾಡುವ ಕ್ಲೊರ್ಪೈರಿಫಾಸ್, ವರ್ಣತಂತುಗಳ ವ್ಯವಸ್ಥೆ ನಾಶಪಡಿಸುವ ಎಂಡೋಸಲ್ಫಾನ್, ಯಕೃತ್ತು (ಲಿವರ್) ನಾಶಮಾಡುವ ಹೆಪ್ಟಾಕ್ಲೊರ್, ಸಂತಾನೋತ್ಪತ್ತಿ, ಬೆಳವಣಿಗೆ ಕುಂಠಿತಗೊಳಿಸುವ ಕ್ವಿನಾಲ್ಫಾಸ್ ಮತ್ತು ಕ್ಲೊರ್ಫೆನ್ವಿನ್ಫಾಸ್, ಕ್ಯಾನ್ಸರ್ ಹಾಗೂ ಬಂಜೆತನ ಉಂಟುಮಾಡುವ ಆಲ್ಡ್ರಿನ್ ಮತ್ತು ಡಿಡಿಟಿ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ನೇತ್ರದ ಮೇಲೆ ದುಷ್ಪರಿಣಾಮ ಬೀರುವ ಕ್ಲೊರ್ಡೇನ್ ಪೀಡೆನಾಶಕಗಳ ಅಂಶಗಳನ್ನು ಸಂಸ್ಥೆಯು ಕಂಡುಹಿಡಿದಿದೆ.

ಯಾಕೆ ಬಳಕೆ?
ಮಾರುಕಟ್ಟೆಗೆ ಬೇಗನೇ ಕೃಷಿ ಉತ್ಪನ್ನ ಕಳುಹಿಸಬೇಕೆಂದರೆ, ಅದು ಆದಷ್ಟು ಬೇಗನೇ ಮಾಗಬೇಕು. ಕಡಿಮೆ ಸಮಯದಲ್ಲಿ ಇಳುವರಿ ಕೈಗೆ ಬಂದರೆ ಒಂದಷ್ಟು ಹೆಚ್ಚಿನ ಆದಾಯ ಗಳಿಸಬಹುದು. ಇದನ್ನು ಸಾಧಿಸಲು ವಿವಿಧ ಬಗೆಯ ರಾಸಾಯನಿಕಗಳನ್ನು ರೈತರು ಬಳಸುತ್ತಾರೆ. ಗ್ರಾಹಕರ ಅಪೇಕ್ಷೆ ಕೂಡ ಪರೋಕ್ಷವಾಗಿ ಭೀಕರ ಪರಿಣಾಮವನ್ನೇ ಉಂಟು ಮಾಡುತ್ತದೆ. ಕಾಯಿಗಳು ಬೇಗನೇ ಪಕ್ವಗೊಂಡು ಹಣ್ಣುಗಳಾಗಿ ಆಕರ್ಷಕ ಬಣ್ಣ ಬರುವಂತೆ ಮಾಡಲು ಅಪಾಯಕಾರಿ ರಾಸಾಯನಿಕಗಳನ್ನು ರೈತರು ಎಗ್ಗು-ಸಿಗ್ಗಿಲ್ಲದೇ ಬಳಸುತ್ತಾರೆ. ಸ್ವತಃ ಕೃಷಿ ವಿಜ್ಞಾನಿಗಳೇ ಕೆಲವು ಬಗೆಯ ರಾಸಾಯನಿಕ ಸಿಂಪಡಿಸಲು ಹೇಳುತ್ತಾರೆ. ಇಂಥವುಗಳನ್ನು ರೈತರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಬಳಸುವುದರಿಂದ ಅದರ ಅಂಶ ಉತ್ಪನ್ನದಲ್ಲಿ ಉಳಿದುಕೊಂಡು ಬಿಡುತ್ತದೆ.

ಏಷ್ಯಾದಲ್ಲೇ ದೊಡ್ಡ ತರಕಾರಿ ಮಾರುಕಟ್ಟೆ ದೆಹಲಿಯ ಅಜಾದ್ಪುರದಲ್ಲಿ ಇದೆ. ಇಲ್ಲಿ ವಾರ್ಷಿಕ 600 ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಈ ಮಾರುಕಟ್ಟೆಯಿಂದಲೇ ಬಹುತೇಕ ಸಗಟು ಮಾರುಕಟ್ಟೆಗಳಿಗೆ ಉತ್ಪನ್ನ ರವಾನೆಯಾಗುತ್ತದೆ.
‘ವಾಸ್ತವ ಸ್ಥಿತಿ’ಯನ್ನು ಕಂಡುಹಿಡಿಯಲು ದೆಹಲಿಯ ಸಗಟು ಮಾರುಕಟ್ಟೆಗಳಿಗೆ ದಿಢೀರ್ ಭೇಟಿ ಕೊಟ್ಟು, ಅಲ್ಲಿನ ಉತ್ಪನ್ನಗಳ ಅಧ್ಯಯನ ನಡೆಸುವಂತೆ ನ್ಯಾಯಾಧೀಶ ದೀಪಕ್ಕುಮಾರ್ ಹಾಗೂ ಸಂಜೀವ್ ಖನ್ನಾ ಅವರಿದ್ದ ಪೀಠ ಆದೇಶ ನೀಡಿದೆ.

ಈ ಕೆಲಸ ನಿರ್ವಹಿಸುವ ತಂಡದಲ್ಲಿ ಆರು ವಕೀಲರು ಹಾಗೂ ಇಬ್ಬರು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇರಲಿದ್ದಾರೆ. ವರದಿಯನ್ನು ಐದು ವಾರಗಳೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಹೈಕೋರ್ಟ್ ಸೂಚಿಸಿದೆ.

ಇದೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಗಿರುವುದರಿಂದ, ದೆಹಲಿ ಹೈಕೋರ್ಟ್ನ ತೀರ್ಪು ಅಥವಾ ನಿರ್ದೇಶನಗಳನ್ನು ಆಹಾರ ಸುರಕ್ಷತೆ ದೃಷ್ಟಿಯಿಂದ ಇತರ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಬಹುದು. ಕೃಷಿಯಲ್ಲಿ ವಿವೇಚನೆಯಿಲ್ಲದೇ ಬಳಸುತ್ತಿರುವ ಪೀಡೆನಾಶಕಗಳ ಹಾವಳಿಗೆ ಕಡಿವಾಣ ಹಾಕಲು ಕೂಡ ಇದು ನೆರವಾಗಬಹುದು.
(ಸಂಗ್ರಹ) -ಎಟಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.