ಚುನಾವಣೆ ಇಲ್ಲದೆ ಪ್ರಜಾಪ್ರಭುತ್ವ ಇಲ್ಲ. `ಒಬ್ಬನಿಗೆ ಒಂದೇ ಓಟು~ ಎನ್ನುವುದು ಚುನಾವಣೆಯ ಸಮಾನತೆಯ ತತ್ವ. ಪ್ರಜಾಪ್ರಭುತ್ವ ಯಶಸ್ವಿ ಯಾಗಬೇಕೆಂದರೆ ಸಜ್ಜನರು, ನಿಸ್ವಾರ್ಥ ಬುದ್ಧಿವಂತರು ಮತ್ತು ಕ್ರಿಯಾಶೀಲರು- ಶಾಸಕರು, ಸಂಸದರಾಗಿ ಚುನಾವಣೆ ಮೂಲಕ ಆಯ್ಕೆ ಆಗಬೇಕು. ಅವರಲ್ಲೇ ಇನ್ನಷ್ಟು ಉತ್ತಮರು ಸಚಿವರಾಗಬೇಕು. ಎಲ್ಲರೂ ಒಟ್ಟು ಸೇರಿ ಸಾಮುದಾಯಿಕ ಅಭಿವೃದ್ಧಿಗೆ ಶ್ರಮಿಸಬೇಕು.

ಆದರೆ ಈಗ ಆಗುತ್ತಿರುವುದೇನು? ಸಜ್ಜನಿಕೆಯ ಸುಳಿವೂ ಇಲ್ಲದವರು, ಸ್ವಾರ್ಥ- ಸ್ವಜನ ಪಕ್ಷಪಾತವೇ ಅಭಿವೃದ್ಧಿ ಎಂದು ತಿಳಿದುಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು, ಸಂಸದರು, ಸಚಿವರಾಗುತ್ತಿದ್ದಾರೆ. ಚುನಾವಣೆ ಗೆಲ್ಲಲು ನೂರೆಂಟು ತಂತ್ರಗಳನ್ನು ಅವರು ಮಾಡುತ್ತಾರೆ.

ಈ ತಂತ್ರಗಳನ್ನು `ರಾಜಕೀಯ ಚಾಣಾಕ್ಷತೆ~ ಎಂದು ನಮ್ಮ ಬಹುತೇಕ ಮಾಧ್ಯಮಗಳು ಕೊಂಡಾಡುತ್ತವೆ. ರಾಜಕೀಯದಲ್ಲಿ `ಜನರ ತೀರ್ಪು~ ಎನ್ನುವುದೀಗ ಜನಪ್ರಿಯ, ಗೌರವಾನ್ವಿತ ಶಬ್ದ! ಆತ ವೈಯಕ್ತಿಕವಾಗಿ ಎಷ್ಟೇ ದುಷ್ಟನಾಗಿದ್ದರೂ ಚುನಾವಣೆಯಲ್ಲಿ ಗೆದ್ದರೆ, `ಬಾರಾ ಖೂನ್ ಮಾಫಿ~ ಆಗುತ್ತಿದೆ. `ಜನರ ತೀರ್ಪೇ ಅಂತಿಮ~ ಎನ್ನುವುದು ಗೆದ್ದು ಬಂದವರ ಜನಪ್ರಿಯ ಸ್ಲೋಗನ್.

ಹಾಗೆ ಚುನಾವಣೆ ಗೆಲ್ಲಲು ಅನುಸರಿಸುವ ರಾಜಕೀಯ ತಂತ್ರಗಳಲ್ಲಿ ಇವತ್ತು ಹಣ ಮತ್ತು ಜಾತಿಗೆ ಬಹಳ ಮುಖ್ಯ ಸ್ಥಾನವಿದೆ. ಉತ್ತರದ ರಾಜ್ಯಗಳಲ್ಲಿ ಕ್ರಿಮಿನಲ್ ಹಿನ್ನೆಲೆಯವರೂ ಸರಾಗವಾಗಿ ಶಾಸಕರು, ಸಂಸದರಾಗಿ ಆಯ್ಕೆ ಆಗುತ್ತಿದ್ದಾರೆ. ಗೆದ್ದವನು ಎಷ್ಟು ಪರ್ಸೆಂಟ್ ಮತಗಳನ್ನು ಗಳಿಸಿದ್ದಾನೆ ಎನ್ನುವುದು ಮುಖ್ಯವೇ ಅಲ್ಲ.

ವಿಧಾನಸಭಾ ಕ್ಷೇತ್ರವೊಂದರಲ್ಲಿ 2 ಲಕ್ಷ ಮತದಾರರಿದ್ದರೆ, ಅವರಲ್ಲಿ ಒಂದು ಲಕ್ಷ ಮತದಾರರು ಮತ ಹಾಕಲು ಬರುವುದೇ ಇಲ್ಲ. ಒಂದು ಕ್ಷೇತ್ರದಲ್ಲಿ ಸರಾಸರಿ ಏಳರಿಂದ ಎಂಟು ಅಭ್ಯರ್ಥಿಗಳು ಸ್ಪರ್ಧೆಗೆ ನಿಲ್ಲುವುದು ಸಾಮಾನ್ಯ. ಚಲಾವಣೆಯಾದ ಒಂದು ಲಕ್ಷ ಮತ ಎಲ್ಲರ ಮಧ್ಯೆ ಹಂಚಿ ಹೋಗಿ ಕೇವಲ 30 ಸಾವಿರ ಮತ ಸಿಕ್ಕಿದವನೂ ಜಯಶಾಲಿಯಾಗುವುದಿದೆ. ಅಂದರೆ ಕ್ಷೇತ್ರದಲ್ಲಿ ಆತನಿಗೆ ಇರುವ ಜನಬೆಂಬಲ ಶೇಕಡಾ 15 ಅಷ್ಟೆ! ಆತನೂ `ಜನರ ತೀರ್ಪೇ ಅಂತಿಮ~ ಎಂದು ಘೋಷಿಸುತ್ತಾನೆ!

ಕರ್ನಾಟಕದ ರಾಜಕೀಯವಂತೂ ಇತ್ತೀಚೆಗೆ ಭ್ರಷ್ಟಾಚಾರ ಮತ್ತು ಜಾತೀಯತೆಯ ವಿಷವರ್ತುಲದಲ್ಲಿ ಸಿಕ್ಕು ದುರ್ವಾಸನೆ ಹೊಡೆಯುತ್ತಿದೆ. `10-12 ಕೋಟಿ ರೂಪಾಯಿಗಳನ್ನು ವ್ಯವಸ್ಥಿತವಾಗಿ ಖರ್ಚು ಮಾಡಲು ಸಾಧ್ಯವಿದ್ದರೆ ಶಾಸಕನಾಗಿ ಖಂಡಿತಾ ಗೆದ್ದು ಬರಬಹುದು~ ಎಂದು ರಾಜಕಾರಣಿಗಳು ನಂಬಿಕೊಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಉಪಚುನಾವಣೆಗಳಲ್ಲಿ ಈ `ಹಣದ ಪ್ರಯೋಗ~ಗಳನ್ನು ಮಾಡಿ ಯಶಸ್ವಿಯಾದವರೂ ಇದ್ದಾರೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಸುಮಾರು 20ರಿಂದ 25 ಕ್ಷೇತ್ರಗಳನ್ನು ಈ ರೀತಿ `ಹಣದ ಬಲ~ದಿಂದಲೇ ಗೆಲ್ಲಲಾಗಿದೆ!

ಹಾಗೆಂದು ಈ ಹಣವನ್ನು ಚುನಾವಣೆ ಘೋಷಣೆಯಾದ ಬಳಿಕ ಒಮ್ಮೆಲೇ ಸುರಿಯುವುದಲ್ಲ. ಹಾಗೆ ಖರ್ಚು ಮಾಡಲು ಚುನಾವಣೆಯ ನೀತಿಸಂಹಿತೆ ಅಡ್ಡಬರುತ್ತದೆ.

ಅನುಭವಿ ಶಾಸಕರೊಬ್ಬರು ಇದನ್ನು ಹೀಗೆ ವಿವರಿಸುತ್ತಾರೆ- `ಕನಿಷ್ಠ ಎರಡು ವರ್ಷಕ್ಕೆ ಮುಂಚೆಯೇ ನಮ್ಮ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವ ಕೆಲಸ ಶುರುವಾಗುತ್ತದೆ. ಪ್ರತಿ ಹಳ್ಳಿಗೂ ಸಂಚರಿಸಿ ಬೆಂಬಲಿಗರನ್ನು ಒಟ್ಟು ಸೇರಿಸುತ್ತೇವೆ. ಅಲ್ಲಲ್ಲಿ ಯುವಕ ಸಂಘ, ಸ್ತ್ರೀಶಕ್ತಿ ಸಂಘಗಳವರನ್ನು ಒಟ್ಟು ಸೇರಿಸಿ ಅಭಿವೃದ್ಧಿ ಕೆಲಸಗಳಿಗೆ ಹಣ ಖರ್ಚು ಮಾಡುತ್ತೇವೆ.

ಜಾತಿ ಸಂಘಟನೆಗಳಿಗೆ ಹಣ ಕೊಡುತ್ತೇವೆ. ಕೊಳವೆಬಾವಿ ತೋಡಿಸುವುದು, ಹೊಲಿಗೆ ಯಂತ್ರಗಳನ್ನು ಕೊಡುವುದು, ಪುಸ್ತಕಗಳನ್ನು ವಿತರಿಸುವುದು, ಸೀರೆ ಹಂಚುವುದು, ರಕ್ತದಾನ ಶಿಬಿರ- ಎಲ್ಲವೂ ಇದರಲ್ಲಿ ಸೇರಿದೆ.

ಯಾವುದೇ ಊರಿನಲ್ಲಿ ಮದುವೆ, ಮುಂಜಿ, ಸಾವು, ತಿಥಿಗಳಾದರೆ ಖುದ್ದಾಗಿ ಹಾಜರಾಗಬೇಕು. ಸಣ್ಣದೊಂದು `ಕವರ್~ ಆ ಮನೆಯಾತನ ಜೇಬಿಗೆ ತುರುಕಬೇಕು. ಜತೆಗೆ ಬಾಡೂಟವೂ ಮುಖ್ಯ.

ಬೆಂಬಲಿಗರ ತೋಟದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಒಟ್ಟು 5-6 ಸಲ ಬಾಡೂಟ ಏರ್ಪಡಿಸುತ್ತೇವೆ. ಹೀಗೆ ಕಾರ್ಯಕ್ರಮಗಳು ನಡೆದಾಗ ಹಲವಾರು ಬೆಂಬಲಿಗರ ಚಿತ್ರಗಳನ್ನೂ ಸೇರಿಸಿ ಹತ್ತಾರು ಕಟೌಟ್ಗಳನ್ನು ನಿಲ್ಲಿಸಬೇಕು.

ಸದಾ ಕಾಲ ಊರಲ್ಲಿ ಇಂತಹ ಕಟೌಟ್ಗಳಿದ್ದರೆ ಈ ಬೆಂಬಲಿಗರು ಚುನಾವಣೆ ಘೋಷಣೆಯಾದ ಬಳಿಕ ವಿರೋಧಿಗಳಿಂದ ಹಣ ಪಡೆದು ಪಕ್ಷಾಂತರ ಮಾಡಲು ಸಾಧ್ಯವಾಗುವುದಿಲ್ಲ..~!

ನಮ್ಮ ಚುನಾವಣಾ ವ್ಯವಸ್ಥೆಯ ತಮಾಷೆ ಹೇಗಿದೆ ನೋಡಿ- ಚುನಾವಣಾ ಆಯೋಗದ ಪ್ರಕಾರ ಅಭ್ಯರ್ಥಿಯೊಬ್ಬ ಹದಿನೈದು ಲಕ್ಷ ರೂಪಾಯಿಗಿಂತ ಹೆಚ್ಚು ಖರ್ಚು ಮಾಡುವಂತಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಟಿಕೆಟ್ ಸಿಕ್ಕು ಸ್ಪರ್ಧೆ ನಡೆಸುವ ದೊಡ್ಡ ಪಕ್ಷದ ಅಭ್ಯರ್ಥಿಗಳಿಗೆ ಈ 15 ಲಕ್ಷ ಈಗ ಏನೇನೂ ಅಲ್ಲ. ಅವರದ್ದು 4-5 ಕೋಟಿಯಷ್ಟು ಅಧಿಕೃತ ಖರ್ಚೇ ಆಗುತ್ತದೆ.

`ಒಂದು ಕ್ಷೇತ್ರದಲ್ಲಿ 150ರಿಂದ 200ರವರೆಗೆ ಬೂತ್ಗಳಿರುತ್ತವೆ. ಪ್ರತಿಯೊಂದು ಬೂತ್ಗೂ ದಿನಕ್ಕೆ ಸರಾಸರಿ 10 ಸಾವಿರ ರೂಪಾಯಿ ಖರ್ಚು ಮಾಡಬೇಕು. ಇಲ್ಲದಿದ್ದರೆ ಪ್ರಚಾರಕ್ಕೆ ಕಾರ್ಯಕರ್ತರೇ ಸಿಗುವುದಿಲ್ಲ.

15 ದಿನಗಳ ಕಾಲ ಪ್ರಚಾರ ಅಂದರೆ, ಪ್ರತಿ ಬೂತ್ಗೆ ಸುಮಾರು 1.5 ಲಕ್ಷ ರೂಪಾಯಿ. 200 ಬೂತ್ಗಳಿಗೆ ಒಟ್ಟು 3 ಕೋಟಿ ರೂಪಾಯಿ ಆಗುತ್ತೆ. ಅದರಲ್ಲೂ ಚುನಾವಣೆಯ ಹಿಂದಿನ ರಾತ್ರಿ ಈ ಖರ್ಚು ದುಪ್ಪಟ್ಟಾಗುತ್ತದೆ.

ಎದುರಾಳಿ ಹೆಚ್ಚು ದುಡ್ಡು ಹಾಕಿದಷ್ಟೂ ನಮ್ಮ ಬಂಡವಾಳವನ್ನೂ ಏರಿಸಬೇಕಾಗುತ್ತದೆ~ ಎನ್ನುತ್ತಾರೆ ಕಳೆದ ಚುನಾವಣೆಯಲ್ಲಿ ಗೆದ್ದಿರುವ ಇನ್ನೊಬ್ಬ ಶಾಸಕ. `ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ಬೂತ್ಗೂ ದಿನಕ್ಕೆ ಒಂದು ಲಕ್ಷ ರೂಪಾಯಿ ಖರ್ಚಾಗಿದೆ. ಅಂತಹ ವಿಶೇಷ ಕ್ಷೇತ್ರಗಳ ಸಂಖ್ಯೆ ನಮ್ಮಲ್ಲೆಗ ಏರುತ್ತಿದೆ~ ಎಂದು ಹೇಳಲು ಅವರು ಮರೆಯುವುದಿಲ್ಲ.

ಸಾಮಾನ್ಯವಾಗಿ ಜಾತಿ ಆಧಾರಿತವಾಗಿ ಪಕ್ಷದ್ದೇ ಎನ್ನಬಹುದಾದ ಮತಗಂಟು ಎಲ್ಲ ಕ್ಷೇತ್ರಗಳಲ್ಲೂ ಇರುತ್ತದೆ. ಆದರೆ ಇದರ ಪ್ರಮಾಣ ಒಟ್ಟು ಮತಗಳ ಶೇಕಡಾ 25ರಷ್ಟು ಮಾತ್ರ. ಉಳಿದ ಮತಗಳನ್ನು ಒಟ್ಟು ಸೇರಿಸಲೇಬೇಕು. ಅದಕ್ಕಿಂತ ಮುಖ್ಯವಾಗಿ ವಿರೋಧಿ ಅಭ್ಯರ್ಥಿಯ ಜಾತಿಯ ಇಡುಗಂಟಿನ ಮತಗಳನ್ನು ಒಡೆಯುವ ಕೆಲಸವೂ ಮುಖ್ಯ.

ಇದನ್ನು ಮಾಡಲು ಮುಖ್ಯವಾಗಿ ಕಳೆದ ಚುನಾವಣೆಯಲ್ಲಿ ಕೆಲವು ತಂತ್ರಗಳನ್ನು ಅನುಸರಿಸಲಾಯಿತು. ಅಧಿಕಾರಿಗಳನ್ನು ಹಿಡಿದು ಮತಪಟ್ಟಿಯಲ್ಲಿ ಎದುರಾಳಿಯ ಪ್ರದೇಶದ ಅಥವಾ ಕುಟುಂಬದ ಅಥವಾ ಜಾತಿಯ ಮತದಾರರ ಹೆಸರುಗಳನ್ನು 100-200ರ ಸಂಖ್ಯೆಯಲ್ಲಿ ಎಗರಿಸಿಬಿಡುವುದು ಮೊದಲ ತಂತ್ರ!

ಇನ್ನೊಂದು ತಂತ್ರವೆಂದರೆ, ಯಾತ್ರೆಗಳನ್ನು ಏರ್ಪಡಿಸುವುದು. ಮೈಸೂರಿನ ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಕ್ಷೇತ್ರವೊಂದರಲ್ಲಿ ಕಳೆದ ಚುನಾವಣೆಯ ವೇಳೆಗೆ ಮತದಾನದ ದಿನ ಪಕ್ಷವೊಂದರ ನೂರಾರು `ಇಡುಗಂಟು ಮತದಾರರು~ ಕಣ್ಮರೆಯಾಗಿದ್ದರು. ವಿಚಾರಿಸಿದರೆ ಹಿಂದಿನ ದಿನ 20 ಬಸ್ಗಳಲ್ಲಿ ಅವರೆಲ್ಲ `ಅಜ್ಮೀರ್ ಯಾತ್ರೆ~ ಹೊರಟಿದ್ದರು! ಈ ಯಾತ್ರೆಯನ್ನು ಪ್ರಾಯೋಜಿಸಿದ್ದು ಎದುರಾಳಿ ಪಕ್ಷದ ಅಭ್ಯರ್ಥಿ. ಅಷ್ಟೂ ಮಂದಿಗೆ ಐಶಾರಾಮಿ ಬಸ್ ವ್ಯವಸ್ಥೆ ಮಾಡಿ, ಲಕ್ಷಾಂತರ ರೂಪಾಯಿ ದಾರಿ ಖರ್ಚನ್ನೂ ಅವರು ನೀಡಿದ್ದರು. ಹೀಗೇ ತಿರುಪತಿ, ಧರ್ಮಸ್ಥಳ ಯಾತ್ರೆಗಳನ್ನು ಸಂಘಟಿಸುವವರೂ ಇದ್ದಾರೆ.

ಹಾಗೆಯೇ ಒಂದು ಕೊಳೆಗೇರಿ ಪ್ರದೇಶದಲ್ಲಿ ಚುನಾವಣೆಯ ಹಿಂದಿನ ರಾತ್ರಿ ಬಂದ ಎದುರಾಳಿ ಪಕ್ಷದ ಕಾರ್ಯಕರ್ತರು ಮತದಾನಕ್ಕೆ ಬಾರದಂತೆ ಮನ ಒಲಿಸಲು ಪ್ರತಿ ಓಟಿಗೂ ಒಂದು ಸಾವಿರ ರೂಪಾಯಿ ನೀಡಿದ್ದರು. ಒಂದು ಸಾವಿರ ರೂಪಾಯಿ ನೀಡಿ ಅವರ ಬೆರಳಿಗೆ ಶಾಯಿ ಹಾಕುವುದು ಹೊಸ ರೀತಿಯ ತಂತ್ರ. ಬೆರಳಿಗೆ ಶಾಯಿ ಹಾಕಿಸಿಕೊಂಡವರು ಮರುದಿನ ಮತಗಟ್ಟೆಗೆ ಬರುವುದಿಲ್ಲ!

ಎದುರಾಳಿಗೆ ಸಿಗುವ ಮತ ಕಡಿಮೆಯಾದಷ್ಟೂ ನಾವು ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವುದು ಇವರ ಯಶಸ್ಸಿನ ಗುಟ್ಟು. ಹೀಗಾಗಿ ತಮ್ಮ ಪಕ್ಷದ ಇಡುಗಂಟು ಮತಗಳನ್ನು ರಕ್ಷಿಸಲೂ ಇವತ್ತು ಅಭ್ಯರ್ಥಿಗಳು ಹಣ ಚೆಲ್ಲಬೇಕಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಚುನಾವಣೆಯ ಸಮಯದಲ್ಲಿ ಸ್ತ್ರೀ ಶಕ್ತಿ ಸಂಘಗಳಂತೂ `ಸಗಟು ಮಾರಾಟ~ಕ್ಕೆ ಸಿದ್ಧವಾಗಿ ನಿಂತಿರುತ್ತವೆ!

ಹೀಗೆ ಹಣ ಚೆಲ್ಲಬೇಕಾದರೆ ಗೆದ್ದಾತ ಹಣ ಮಾಡಲೇಬೇಕು. ಅದಕ್ಕೆ ಸುಲಭ ದಾರಿ ಎಂದರೆ ಕಾಮಗಾರಿಗಳಲ್ಲಿ ಕಮೀಶನ್ ಪಡೆಯೋದು ಮತ್ತು ಅಧಿಕಾರಿಗಳಿಂದ ಹಫ್ತಾ ವಸೂಲಿ ಮಾಡುವುದು!

ಸರಕಾರದ ಬೊಕ್ಕಸದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಹಣ ಬಂದಷ್ಟೂ ಶಾಸಕರಿಗೆ ಲಾಭ ಹೆಚ್ಚು. ತಮ್ಮ ಬೆಂಬಲಿಗರಿಗೆ ವಹಿಸಿಕೊಡುವ ಕಾಮಗಾರಿಗಳಲ್ಲಿ ಇಂತಿಷ್ಟು ಪರ್ಸೆಂಟ್ ಕಮೀಶನ್ ಬರಲೇಬೇಕು. ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡರೆ ತಿಂಗಳಿಗೆ ಇಂತಿಷ್ಟು ವಸೂಲಿ ನಡೆಸುವುದು ಸುಲಭ.

ಈ ಮಧ್ಯೆ ಅಧಿಕಾರಿಗಳನ್ನು ಪ್ರತಿವರ್ಷವೂ ವರ್ಗಾವಣೆ ಮಾಡುತ್ತಿದ್ದರೆ, ಅದರಲ್ಲೂ ಹಣ ವಸೂಲಿ ಸಾಧ್ಯವಾಗುತ್ತದೆ. ಎಸ್ಐ, ಸಿಪಿಐ, ಅಬ್ಕಾರಿ ದಳದ ಇನ್ಸ್ಪೆಕ್ಟರ್, ಆರ್ಟಿಓ, ವಾಣಿಜ್ಯ ತೆರಿಗೆ ಠಾಣೆ- ಮುಂತಾದವು ರಾಜಕಾರಣಿಗಳ ಪಾಲಿಗೆ ಇವತ್ತಿಗೂ ತಿಂಗಳ ಹಫ್ತಾ ಸಿಗುವ ಫಲವತ್ತಾದ ಪ್ರದೇಶಗಳಾಗಿ ಉಳಿದಿವೆ.

ಒಬ್ಬ ಎಸ್ಐ ಪೋಸ್ಟಿಂಗ್ಗೆ 5ರಿಂದ 10 ಲಕ್ಷ ರೂಪಾಯಿ ಹಫ್ತಾ ಈಗಲೂ ನಡೆಯುತ್ತಿದೆ. ವರ್ಗಾವಣೆ ಸಲುವಾಗಿ ಪ್ರತ್ಯೇಕ ಮಂಡಳಿ ರಚಿಸಿದ್ದರೂ ಮಂತ್ರಿಗಳ ಮೂಲಕ ನಡೆಯುವ ವರ್ಗಾವಣೆಗಳು ನಿಂತಿಲ್ಲ ಎನ್ನುವುದು ವಾಸ್ತವ. ಈ ಬಗ್ಗೆ ಪ್ರಶ್ನಿಸಿದರೆ `ಚುನಾವಣೆ ಖರ್ಚಿಗೆ ಹಣ ಬೇರೆ ಎಲ್ಲಿಂದ ತರೋಣ?~ ಎನ್ನುವುದು ಅವರ ಮರುಪ್ರಶ್ನೆ.

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕಳೆದ ವಾರ ಸಾವಿರಾರು ಜನರಿಗೆ ಉಚಿತ ಫ್ರಿಜ್, ಟೀವಿ, ಹೊಲಿಗೆ ಯಂತ್ರ, ಮಿಕ್ಸಿ, ಓವನ್, ಹಸುಕರುಗಳನ್ನು ವಿತರಣೆ ಮಾಡಿದರು. `ಬಡತನ ನಿವಾರಣೆಯ ಕಾರ್ಯಕ್ರಮಗಳಿವು. ರಾಜ್ಯದ 15 ಲಕ್ಷ ಕುಟುಂಬಗಳಿಗೆ ಈ ಕಾರ್ಯಕ್ರಮಗಳನ್ನು ವಿಸ್ತರಿಸುತ್ತೇನೆ~ ಎಂದೂ ಅವರು ಸಮಾರಂಭದಲ್ಲಿ ಹೇಳಿದರು.

ಹಿಂದಿನ ಸರ್ಕಾರವೂ ಇದನ್ನೇ ಮಾಡಿತ್ತು. ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಮನೆಯಲ್ಲಿ ಬಳಸುವ ವಸ್ತುಗಳ ಉಚಿತ ವಿತರಣೆ ಸಾಂಗೋಪಸಾಂಗವಾಗಿ ನಡೆಯುತ್ತಿದೆ. ಅರ್ಧಕ್ಕರ್ಧ ಮತದಾರರು ಮತದಾನ ಮಾಡಲು ಹೋಗದೆ ಭ್ರಷ್ಟರಾಗಿದ್ದರೆ, ಉಳಿದರ್ಧದಲ್ಲಿ ಅರ್ಧದಷ್ಟು ಮತದಾರರು ನೇರವಾಗಿ ಭ್ರಷ್ಟರಾಗಿದ್ದಾರೆ.

`ಅಭಿವೃದ್ಧಿ ಎಂದರೆ ಭ್ರಷ್ಟಾಚಾರ~ ಎಂದಾಗಿದೆ. ಚುನಾವಣಾ ಸುಧಾರಣೆಯನ್ನು ತಳಮಟ್ಟದಿಂದ ಆರಂಭಿಸಬೇಕು ಎನ್ನುವುದರಲ್ಲಿ ಎರಡು ಮಾತೇ ಇಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.