ಮಂಗಳವಾರ, ಜೂನ್ 22, 2021
22 °C

ಹತ್ತರಲ್ಲಿ ಕಾಣಿಸಿಕೊಳ್ಳದ ರೆಸ್ಟಾ, ನಿಕೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಪಾಂಗ್ (ಪಿಟಿಐ): ಸಹಾರಾ ಫೋರ್ಸ್ ಇಂಡಿಯಾ ತಂಡದ ಇಬ್ಬರೂ ಚಾಲಕರು ಮಲೇಷ್ಯಾ ಗ್ರ್ಯಾಂಡ್ ಪ್ರೀ ಮೋಟಾರ್ ರೇಸ್‌ನ ಪ್ರಧಾನ ಸ್ಪರ್ಧೆಯಲ್ಲಿ ಮೊದಲ ಹತ್ತರಲ್ಲಿ ಸ್ಪರ್ಧೆ ಆರಂಭಿಸುವ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.ಪಾಲ್ ಡಿ ರೆಸ್ಟಾ ಹಾಗೂ ನಿಕೊ ಹಲ್ಕೆನ್‌ಬರ್ಗ್ ಅವರು ಭಾನುವಾರ ಇಲ್ಲಿನ ರೇಸ್ ಟ್ರ್ಯಾಕ್‌ನಲ್ಲಿ ಕ್ರಮವಾಗಿ 14 ಹಾಗೂ 16ನೆಯವರಾಗಿ ಸ್ಪರ್ಧೆ ಆರಂಭಿಸಲಿದ್ದಾರೆ.ಮೂರನೇ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಇವರಿಬ್ಬರೂ ಉತ್ತಮ ವೇಗವನ್ನು ಸಾಧಿಸಲು ಆಗಿರಲಿಲ್ಲ. ಆದರೆ ನಿಕೊ (1:37.890) ಅವರಿಗಿಂತ ರೆಸ್ಟಾ (1.37.877) ಈ ಟ್ರ್ಯಾಕ್‌ನಲ್ಲಿ ಚುರುಕಾಗಿ ತಮ್ಮ ಕಾರ್ ಮುನ್ನುಗ್ಗಿಸುವ ಪ್ರಯತ್ನ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.