ಹತ್ತಿಯಷ್ಟೇ ಹಗುರ ಈ ಲ್ಯಾಪ್‌ಟಾಪ್!

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಹತ್ತಿಯಷ್ಟೇ ಹಗುರ ಈ ಲ್ಯಾಪ್‌ಟಾಪ್!

Published:
Updated:

ಚೀನಾ ಮೂಲದ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ ಕಂಪೆನಿ ಲೆನೊವೊ ಹೊಸ ತಲೆಮಾರಿನ ಹಾಗೂ ಲಘು ತೂಕದ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಹತ್ತಿಯಂತೆ ಹಗುರವಾದ, ಪುಟ್ಟ ಬೈಂಡ್‌ಬುಕ್‌ನಷ್ಟು ತೆಳುವಾದ ಈ `ಥಿಂಕ್ ಪ್ಯಾಡ್~  ಕಂಪೆನಿಯ 20 ವರ್ಷಗಳ ಆಚರಣೆಯ ಸಂಭ್ರಮದ ಅಂಗವಾಗಿ ಮಾರುಕಟ್ಟೆಗೆ ಬಿಡುಗಡೆಗೊಂಡಿವೆ. ಇದರಲ್ಲಿ `ಥಿಂಕ್‌ಪ್ಯಾಡ್ ಎಕ್ಸ್-1 ಕಾರ್ಬನ್~ ಎನ್ನುವ ಲ್ಯಾಪ್‌ಟಾಪ್‌ನ ತೂಕ ಮೂರು ಪೌಂಡ್‌ಗಿಂತಲೂ ಕಡಿಮೆ. ಅಂದರೆ ಕೇವಲ 1.36 ಕೆ.ಜಿ! ನೋಡಲು `ಅಲ್ಟ್ರಾಬುಕ್~ ಹೋಲುವ ಈ `ಮಡಿಲು ಗಣಕ~ ಸದ್ಯ 14 ಇಂಚಿನ ಮಾನಿಟರ್ ಶ್ರೇಣಿಯಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಲಘು ಭಾರದ ವಾಣಿಜ್ಯ ಬಳಕೆ ಲ್ಯಾಪ್‌ಟಾಪ್ ಎನಿಸಿಕೊಂಡಿದೆ.ಮೂರನೇ ತಲೆಮಾರಿನ ಡ್ಯುಯಲ್ ಕೋರ್ ಪ್ರೊಸೆಸರ್, ಎಲ್‌ಇಡಿ ಪರದೆ, ಎರಡು ಯುಎಸ್‌ಬಿ ಪೋರ್ಟ್ಸ್ ಮತ್ತು  3ಜಿ ಮೊಬೈಲ್ ಬ್ರಾಡ್‌ಬ್ಯಾಂಡ್ ಸೌಲಭ್ಯ ಸೇರಿದಂತೆ ಗರಿಷ್ಠ ಮಟ್ಟದ ತಾಂತ್ರಿಕ ವಿಶೇಷತೆಗಳನ್ನೂ ಒಳಗೊಂಡಿದೆ. ಬೆಲೆ ರೂ. 75 ಸಾವಿರದಿಂದ 85 ಸಾವಿರದವರೆಗೆ ಇದೆ. ಯುವಸಮೂಹದ ವೃತ್ತಿಪರರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಈ ಲ್ಯಾಪ್‌ಟಾಪ್, ಲೆನೊವೊ ಸಂಸ್ಥೆಯ 20 ವರ್ಷಗಳ ಸುದೀರ್ಘ ಅನುಭವ ಮತ್ತು ಸಂಶೋಧನೆಯ ಸಂಕೇತವೂ ಹೌದು ಎನ್ನುತ್ತಾರೆ `ಥಿಂಕ್‌ಪ್ಯಾಡ್~ ತಂಡದ ಮುಖ್ಯಸ್ಥ ಪೀಟರ್ ಹೋರ್ಟೆನ್ಸ್.  ಇದರ ಜತೆಗೆ ಲೆನೊವೊದ `21 ಎಂಎಂ ಟಿಯು 430ಯು~ ಎಂಬ ಮತ್ತೊಂದು ಲ್ಯಾಪ್‌ಟಾಪ್ ಕೂಡ ಮಾರುಕಟ್ಟೆಗೆ ಬಂದಿದೆ. ಬೆಲೆ ರೂ 44 ಸಾವಿರ.

`ಥಿಂಕ್‌ಪ್ಯಾಡ್~ ಸರಣಿಯ ಲ್ಯಾಪ್‌ಟಾಪ್‌ಗಳು ಎಷ್ಟೊಂದು ಹಗುರವಾಗಿವೆ ಎಂದರೆ ಗಗನಯಾತ್ರಿಗಳು ಸಹ ತಮ್ಮ ಬಾಹ್ಯಾಕಾಶ ಯೋಜನೆಗಳಿಗೆ ಇಂಥ ಲ್ಯಾಪ್‌ಟಾಪ್‌ಗಳನ್ನೇ ಬಳಸುತ್ತಿದ್ದಾರೆ ಎನ್ನುತ್ತಾರೆ `ಥಿಂಕ್ ಪ್ಯಾಡ್~ ಮಾರುಕಟ್ಟೆ ಉಪಾಧ್ಯಕ್ಷ ದಿಲೀಪ್ ಭಾಟಿಯಾ.ಬೀಜಿಂಗ್ ಮತ್ತು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಮುಖ್ಯ ಕಚೇರಿಗಳನ್ನು ಹೊಂದಿರುವ `ಲೆನೊವೊ~ ಪ್ರಪಂಚದ 160 ದೇಶಗಳಲ್ಲಿ ಕಾರ್ಯಚಟುವಟಿಕೆ ಹೊಂದಿದೆ. ಹ್ಯೂಲೆಟ್ ಪೆಕಾರ್ಡ್ (ಎಚ್.ಪಿ) ಹೊರತುಪಡಿಸಿದರೆ ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಪ್ರಪಂಚದಲ್ಲಿಯೇ  ಎರಡನೇ ಸ್ಥಾನದಲ್ಲಿದೆ ಲೆನೊವೊ. ಅಂದಹಾಗೆ `ಲೆನೊವೊ~ ಕಂಪೆನಿಯ ಮೊದಲ ಹೆಸರೇನು ಗೊತ್ತಾ? ಲೆಜೆಂಡ್!

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry