ಹರೆಯ... ಏನೀ ಹರೆಯ!

7

ಹರೆಯ... ಏನೀ ಹರೆಯ!

Published:
Updated:
ಹರೆಯ... ಏನೀ ಹರೆಯ!

ದೆಹಲಿಯ ಇಳಿ ವಯಸ್ಸಿನ ಅಜ್ಜ ಮಾಸಿದ ಕ್ಯಾನ್‌ವಾಸ್ ಶೂಗಳನ್ನು ಸರಿಪಡಿಸಿಕೊಂಡು ಓಟಕ್ಕೆ ಅಣಿಯಾದದ್ದೇ ಅವರ ಕಣ್ಣಲ್ಲಿ ಮಿಂಚು. ಎತ್ತರ ಜಿಗಿತಕ್ಕೆ ಪೋಲ್ ಹಿಡಿದುಕೊಂಡು ಓಡೋಡಿ ಬಂದ ಅಜ್ಜನಲ್ಲಿ ಯುವೋತ್ಸಾಹ.

ಗುರಿ ಹತ್ತಿರ ಬರುತ್ತಿದ್ದಂತೆ ಅವರ ಮುಖಭಾವದಲ್ಲಿ ಆಗುತ್ತಿದ್ದ ಬದಲಾವಣೆ ಆ ವಯಸ್ಸಿನಲ್ಲೂ ಅವರಲ್ಲಿ ಇರುವ ಹುಮ್ಮಸ್ಸಿಗೆ ಕನ್ನಡಿ ಹಿಡಿಯಿತು. ನಲವತ್ತೈದು ವಯಸ್ಸಿನ ಸ್ಪರ್ಧಿಗಳನ್ನು ನೋಡಿ ಮೂವತ್ತೈದು ವರ್ಷದವರು `ಹಳೆಯ ಹುಲಿಗಳು' ಎಂದುಕೊಂಡರೆ, ಐವತ್ತರ `ಹರೆಯ'ದವರಿಗೆ ಎಂಬತ್ತು ದಾಟಿದವರನ್ನು ನೋಡಿ `ಅಬ್ಬಾ' ಎಂಬಂಥ ಭಾವ.

ಹುಕ್ಕಾ ಎಳೆದು ಹೊಗೆಯ ಸುಖ ಉಂಡ ಇನ್ನೊಬ್ಬ ಅಜ್ಜ ಸಹಸ್ಪರ್ಧಿಗಳ ಜೊತೆ ಕುಳಿತು ಸ್ಪರ್ಧೆಗಳ ಕ್ಷಣಗಳನ್ನು ಕಣ್ತುಂಬಿಕೊಂಡರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಮಾಸ್ಟರ್ಸ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಕೆಲವು ಅಪರೂಪದ ಚಿತ್ರವತ್ತಾದ ಕ್ಷಣಗಳಿವು.

ಚಿತ್ರಗಳು: ಸವಿತಾ ಬಿ.ಆರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry