ಶುಕ್ರವಾರ, ಮೇ 14, 2021
21 °C

ಹರ್ಮಿತ್‌ಗೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬಲಗೈ ಮಧ್ಯಮ ವೇಗದ ಬೌಲರ್ ಹರ್ಮಿತ್ ಸಿಂಗ್ ಬನ್ಸಾಲ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಅಧಿಕೃತ ಎಚ್ಚರಿಕೆ ನೀಡುವ ಜೊತೆಗೆ ಛೀಮಾರಿ ಹಾಕಲಾಗಿದೆ.ಪುಣೆ ವಾರೀಯರ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದ ಸಂದರ್ಭದಲ್ಲಿ ಅವರು ಐಪಿಎಲ್ ನೀತಿ ಸಂಹಿತೆಯ 2.1.8ನೇ ಪರಿಚ್ಛೇದದ ಅಡಿಯಲ್ಲಿ ಮೊದಲ ಹಂತದ ತಪ್ಪು ಮಾಡಿದ್ದಾರೆ ಎಂದು ಐಪಿಎಲ್ ಆಡಳಿತವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಪುಣೆ ವಾರೀಯರ್ಸ್ ತಂಡದವರು ಬ್ಯಾಟಿಂಗ್ ಮಾಡುತ್ತಿದ್ದ 19ನೇ ಓವರ್‌ನಲ್ಲಿ ಹರ್ಮಿತ್ ಅವರು ಮುಂಗೈ ಎತ್ತರದಲ್ಲಿ `ಬೀಮರ್~ ಎಸೆತ ಪ್ರಯೋಗಿಸಿದ್ದರು. ಆಗ ಮನೀಷ್ ಪಾಂಡೆ ಕ್ರೀಸ್‌ನಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.