ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಹಲಸೂರಲ್ಲಿ ಡೈನೆಸ್ಟಿ

Published:
Updated:

ಪ್ರೆಸ್ಟೀಜ್ ಸಮೂಹ ಈಗ ಹಲಸೂರಿನಲ್ಲಿ `ಪ್ರೆಸ್ಟೀಜ್ ಡೈನೆಸ್ಟಿ~ ಎಂಬ ಅತ್ಯಾಧುನಿಕ ಹಾಗೂ ಉನ್ನತ ಗುಣಮಟ್ಟದ ವಾಣಿಜ್ಯ ಸಂಕೀರ್ಣವನ್ನು ಅನಾವರಣಗೊಳಿಸಿದೆ.

ಇದರಲ್ಲಿ ಆಕರ್ಷಕ ವಾಸ್ತು ವಿನ್ಯಾಸ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಬಲ್ಲ ಉತ್ಪನ್ನಗಳನ್ನು ಬಳಸಲಾಗಿದೆ.ಐಟಿ ಕಚೇರಿಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಂಡಿದೆ. ಬೆಂಗಳೂರು ವಿಶ್ವದಲ್ಲೆೀ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿ ಸ್ಥಾನ ಪಡೆದುಕೊಳ್ಳುತ್ತಿದೆ.ಇಂಥ ಬೆಳವಣಿಗೆ ಭಾಗವಾಗಿ ನಾವು ಜಾಗತಿಕ ದರ್ಜೆಯ ಕೊಡುಗೆಯನ್ನು ಇಲ್ಲಿ ನೀಡಲು ಹೆಮ್ಮೆಯಾಗುತ್ತದೆ ಎನ್ನುತ್ತಾರೆ ಪ್ರೆಸ್ಟೀಜ್ ಸಮೂಹದ ನಿರ್ದೇಶಕರಾದ ಉಜ್ಮಾ ಇರ್ಫಾನ್.ಯೋಜನೆಯು ಎರಡು ಸ್ವತಂತ್ರ ಘಟಕಗಳಾಗಿ ವಿಭಜನೆಯಾಗಿದೆ. ಇವೆರಡು ರಚನೆಗಳ ನಡುವೆ ಮೂರು ಅಂತಸ್ತಿನ ಗಾಜಿನ ಹೊದಿಕೆಯುಳ್ಳ ಸಂಪರ್ಕ ಸೇತುವಿನ ಬೆಸುಗೆ ಇದೆ. ಇದರಲ್ಲಿ ಪಾದಚಾರಿ ಮತ್ತು ವಾಹನ ಪ್ರವೇಶಕ್ಕೆ ಅವಕಾಶವಿದೆ. ಗ್ರಾಂಡ್ ಪ್ಲಾಜಾದ ಮಾದರಿ ಇಲ್ಲಿದೆ.  

 

 

Post Comments (+)