ಗುರುವಾರ , ಜೂನ್ 24, 2021
28 °C

ಹಳೇ ಅಣಗಳ್ಳಿ: ಸಮಸ್ಯೆಗಳೂ ಹಳೆಯವು!

ಪ್ರಜಾವಾಣಿ ವಾರ್ತೆ/ ಡಿ. ವೆಂಕಟಾಚಲ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಕಳೆದ ಹಲವಾರು ತಿಂಗಳುಗಳಿಂದಲೂ ಕೆಲವೆಡೆ ಚರಂಡಿಯಲ್ಲಿ ನೀರು ಮಡುಗಟ್ಟಿ ನಿಂತಿದೆ, ಮತ್ತೆ ಕೆಲವೆಡೆ  ರಸ್ತೆ ಮಧ್ಯದಲ್ಲಿಯೇ ಚರಂಡಿ ನೀರು ಹರಿಯುತ್ತದೆ. ಜತೆಗೆ ರಸ್ತೆಯ ಇಕ್ಕೆಲಗಳು ಗಿಡಗಂಟಿಗಳಿಂದ ಆವೃತವಾಗಿ ವಿಷಜಂತುಗಳ ವಾಸಸ್ಥಾನವಾಗಿವೆ...ಇವು ತಾಲ್ಲೂಕಿನ ಹಳೇ ಅಣಗಳ್ಳಿಯ ನಿತ್ಯ ಸಮಸ್ಯೆಗಳು. ಗ್ರಾಮದ ಕೆಲವು ಕಡೆಗಳಲ್ಲಿ ಮಾತ್ರ ಸಿಮೆಂಟ್ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ಕೊಳಚೆ ನೀರು ಸಮರ್ಪಕವಾಗಿ ಹೊರಹೋಗುವ ವ್ಯವಸ್ಥೆ ನಿರ್ಮಿಸಿಲ್ಲ. ಇಲ್ಲಿನ ಮೋರಿಗಳಲ್ಲಿ ಹೂಳೆತ್ತಿ ತಿಂಗಳುಗಳೇ ಕಳೆದಿದ್ದು, ಇವೆಲ್ಲಾ ಗಬ್ಬುನಾರುತ್ತಿವೆ. ಕೆಲವು ಬೀದಿಗಳಲ್ಲಿ ಚರಂಡಿಯನ್ನೇ ನಿರ್ಮಿಸಿಲ್ಲ.ಇಲ್ಲಿನ ದಲಿತರ ಬಡಾವಣೆಯ ಚರಂಡಿಗಳಲ್ಲಿ ನೀರು ಹೊರ ಹೋಗದೆ ಅನೈರ್ಮಲ್ಯ ತಾಂಡವವಾಡುತ್ತಿದೆ. ಚರಂಡಿ ನೀರಿನ ಕೆಟ್ಟ ವಾಸನೆ ಮತ್ತು ಸೊಳ್ಳೆಗಳ ಕಾಟದಿಂದ ಇಲ್ಲಿನ ನಿವಾಸಿಗಳು ನರಳುವಂತಾಗಿದೆ.ಮುಂದಿನ ದಿನಗಳಲ್ಲಿ ಮಳೆ ಬಿದ್ದಲ್ಲಿ ಚರಂಡಿ ನೀರೆಲ್ಲಾ ಮನೆಗಳ ಒಳಗೆ ನುಗ್ಗಿ ಅನೇಕ ಮನೆಗಳು ಜಲಾವೃತಗೊಳ್ಳುವ ಸ್ಥಿತಿ ಇದೆ.ಕೆಲವು ರಸ್ತೆಗಳ ಮಧ್ಯದಲ್ಲೇ ಚರಂಡಿ ನೀರು ಹರಿಯತೊಡಗಿ ಜನತೆ ರಸ್ತೆಯಲ್ಲಿ ಓಡಾಡಲು ಅಸಹ್ಯಪಡುವ ದುಸ್ಥಿತಿ ಇದೆ.ಗ್ರಾಮದಲ್ಲಿ ಚರಂಡಿ ಮತ್ತು ಸ್ವಚ್ಛತೆ ಸಮಸ್ಯೆಯ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ.ಗ್ರಾ.ಪಂ. ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಮುಖಂಡ ಬಸವರಾಯು ಮತ್ತು ಇತರ ಗ್ರಾಮಸ್ಥರ ಒತ್ತಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.