ಮಂಗಳವಾರ, ಜೂನ್ 15, 2021
23 °C

ಹಳ್ಳಿಯ ಜನಜೀವನದಿಂದ ಬದುಕು ವಿಸ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೇವಲ ಪುಸ್ತಕಗಳನ್ನು ಓದುವುದರಿಂದ ಪರಿಪೂರ್ಣ ವಿದ್ಯೆ ಸಂಪಾದಿಸಲಾಗುವುದಿಲ್ಲ. ಗ್ರಾಮೀಣ ನೆಲೆಯ ಜನಪದ ಸಾಹಿತ್ಯ, ಸಂಸ್ಕೃತಿ, ಕಲೆ, ಪ್ರಕೃತಿಯ ವಿಸ್ಮಯಗಳನ್ನು ಕುತೂಹಲಕಾರಿಯಾಗಿ ಆಸ್ವಾದನೆ ಮಾಡುವುದರಿಂದ ಬದುಕು ಪರಿಪೂರ್ಣವಾಗುತ್ತದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ ಅಭಿಪ್ರಾಯಪಟ್ಟರು.ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೋಮವಾರ ಕನ್ನಡ ಭಾರತಿ ಸಾಹಿತ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಗ್ರಾಮೀಣ ಜನರ ಒಡನಾಟಗಳಿಂದ ಪರಿಪೂರ್ಣ ವಿದ್ಯೆಯನ್ನು ಕಲಿತು, ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಬಾಲ್ಯದ ಬದುಕು ನಮ್ಮಗಳ ವ್ಯಕ್ತಿತ್ವವನ್ನು ವಿಕಾಸಗೊಳಿಸಲು ತಳಹದಿಯಾಗುತ್ತದೆ. ಹಳ್ಳಿಯ ಜನಜೀವನವು ಬದುಕನ್ನು ವಿಸ್ತಾರಗೊಳಿಸುತ್ತದೆ ಎಂದರು.ಅನುಭವವಿಲ್ಲದೆ ಹೋದರೆ ಮನುಷ್ಯತ್ವ ಇರುವುದಿಲ್ಲ. ಜೀವಂತ ಇರುವವರೆಗೂ ಕಲಿಯುತ್ತಿರಬೇಕು ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಆಧ್ಯಕ್ಷತೆಯನ್ನು ಕನ್ನಡ ಭಾರತಿ ನಿರ್ದೇಶಕ ಡಾ.ಸಣ್ಣರಾಮ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಕುಮಾರಚಲ್ಯ, ಡಾ.ಜಿ. ಪ್ರಶಾಂತ ನಾಯಕ, ಡಾ.ಶಿವಾನಂದ ಕೆಳಗಿನಮನಿ ಉಪಸ್ಥಿತರಿದ್ದರು.ಪುರುಷೋತ್ತಮ ಪ್ರಾರ್ಥಿಸಿದರು. ಸಾಹಿತ್ಯ ಸಂಘದ ಉಪಾಧ್ಯಕ್ಷ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಅನಿಲ್ ಸಾಗರ್ ವಂದಿಸಿದರು. ಎಸ್.ಎಂ. ನಿಲೇಶ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.