ಶನಿವಾರ, ಮೇ 15, 2021
29 °C

ಹವಾಮಾನ ಎಚ್ಚರಿಕೆ ಕಡೆಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಪತನವಾದ ವಿಮಾನಕ್ಕೆ ಇಲ್ಲಿನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನೀಡಬಾರದಿತ್ತು ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಹೇಳಿದೆ.ಹವಾಮಾನ ಇಲಾಖೆಯು ಪ್ರತಿಕೂಲ ವಾತಾವರಣದ ವರದಿಯನ್ನು ನಾಗರಿಕ ವಿಮಾನಯಾನ ಸಂಸ್ಥೆಗೆ ಶುಕ್ರವಾರ ಎರಡು ಸಾರಿ ನೀಡಿತ್ತು. ಗಾಳಿ ಒತ್ತಡ ತೀವ್ರವಾಗಿರುವುದರಿಂದ ವಿಮಾನಗಳ ಆಗಮನ ಮತ್ತು ನಿರ್ಗಮನದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿತ್ತು. ಹಾಗಾಗಿ ವಿಮಾನವನ್ನು ಇಸ್ಲಾಮಾಬಾದ್ ನಿಲ್ದಾಣದಲ್ಲಿ ಇಳಿಸುವ ಬದಲು  ಲಾಹೋರ್ ನಿಲ್ದಾಣದಲ್ಲಿ ಇಳಿಸಲು ಸೂಚಿಸಬೇಕಿತ್ತು ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕರು ಹೇಳಿದ್ದಾರೆ.ಮಧ್ಯಾಹ್ನ 3 ಗಂಟೆಗೆ ನೀಡಿದ್ದ ಮೊದಲ ಎಚ್ಚರಿಕೆಯಲ್ಲೇ ಅಪಘಾತಗಳು ಸಂಭವಿಸಬಹುದು ಎಂದು ಹೇಳಿದ್ದ ಹವಾಮಾನ ಇಲಾಖೆ, ಸಂಜೆ 6ಕ್ಕೆ ನೀಡಿದ್ದ ಮತ್ತೊಂದು ಎಚ್ಚರಿಕೆಯಲ್ಲೂ ಇದನ್ನೇ ಸೂಚಿಸಿತ್ತು.ಕರಾಚಿಯಿಂದ ಸಂಜೆ 5ಗಂಟೆಗೆ ಹೊರಟ ವಿಮಾನವು 6.40ರ ಹೊತ್ತಿಗೆ ನಿಯಂತ್ರಣ ಗೋಪುರದ ಸಂಪರ್ಕ ಕಳೆದುಕೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.