ಗುರುವಾರ , ಮೇ 13, 2021
35 °C

ಹವಾಮಾನ ಮಾಹಿತಿಗೆ ಸಹಾಯವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ರೈತರಿಗೆ ಹವಾಮಾನ ವರದಿ ಕುರಿತು ಕಾಲಕಾಲಕ್ಕೆ ಮಾಹಿತಿ ಒದಗಿಸಲು ಕರ್ನಾಟಕ ರಾಜ್ಯ ಪ್ರಕೃತಿ ವಿಪತ್ತು ನಿರ್ವಹಣಾ ಕೇಂದ್ರವು 2 ಸಹಾಯವಾಣಿ ಆರಂಭಿಸಿದೆ. ಕೇಂದ್ರದ ನಿರ್ದೇಶಕ ವಿ.ಎಸ್.ಪ್ರಕಾಶ್ ನೇರ ಮೊಬೈಲ್ ದೂರವಾಣಿ ಮೂಲಕ ಮಾಹಿತಿಗೆ ಲಭ್ಯವಾಗಲಿದ್ದಾರೆ.ಸಹಾಯವಾಣಿಯ ದೂರವಾಣಿ ಸಂಖ್ಯೆ 080- 22745232/ 22745234ಗೆ ಕರೆ ಮಾಡಿ ರೈತರು ಮಾಹಿತಿ ಪಡೆಯಬಹುದು. ಪ್ರಕಾಶ್ ಅವರ ಮೊಬೈಲ್ ಸಂಖ್ಯೆ 97407 77700ಯಿಂದಲೂ ಮಾಹಿತಿ ಪಡೆಯಬಹುದು.ಈ ಕುರಿತು ಮಾಹಿತಿ ನೀಡಿದ ಪ್ರಕಾಶ್, `ಸಹಾಯವಾಣಿಗೆ ಇನ್ನೂ ಹತ್ತು ದೂರವಾಣಿ ಮಾರ್ಗಗಳ ಸಂಪರ್ಕ ಕಲ್ಪಿಸಲಾಗುತ್ತದೆ. ಮುಖ್ಯವಾಗಿ ಮಳೆ ಕುರಿತ ಮಾಹಿತಿ ನೀಡಲು ಈ ಸಹಾಯವಾಣಿ ಆರಂಭಿಸಲಾಗಿದೆ. ಕಳೆದ ವರ್ಷವೂ ಸಹಾಯವಾಣಿ ಮೂಲಕ ರೈತರಿಗೆ ಮಾಹಿತಿ ನೀಡಲಾಗಿತ್ತು~ ಎಂದರು.`ಬರದಿಂದ ರೈತರು ಕಂಗೆಟ್ಟಿದ್ದಾರೆ. ದಿನವೊಂದಕ್ಕೆ ಕನಿಷ್ಠ 40 ರೈತರು ನನಗೆ ಕರೆ ಮಾಡುತ್ತಾರೆ. ಸಹಾಯವಾಣಿಗೆ ಕನಿಷ್ಠ 400 ಕರೆಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರಿಗೆ ಮಾಹಿತಿ ಕೊಡುವುದು ನಮ್ಮ ಕರ್ತವ್ಯ. ವರ್ಷದ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸುವ ಸಹಾಯವಾಣಿ ಆರಂಭಿಸುವ ಯೋಚನೆ ಇದೆ~ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.