ಸೋಮವಾರ, ಜೂನ್ 14, 2021
27 °C

ಹಾಕಿ:ಟ್ರೋಫಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿರಾಜಪೇಟೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ 18ನೇ ತಾತಂಡ ಕಪ್‌ ಹಾಕಿ ಟೂರ್ನಿಯ ಟ್ರೋಫಿಯನ್ನು ಶನಿವಾರ ಅನಾವರಣ ಮಾಡ ಲಾಯಿತು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ  ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವ ಅಭಯ್‌್ ಚಂದ್ರಜೈನ್‌ ಮತ್ತು ಶಾಸಕ ಬಿ.ಬಿ. ಲಿಂಗಯ್ಯ ಅವರು ಟ್ರೋಫಿ ಅನಾವರಣ ಮಾಡಿದರು. ಏಪ್ರಿಲ್‌ 20ರಿಂದ ಹಾಕಿ ಉತ್ಸವ ನಡೆಯಲಿದೆ. 300ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.ಇದೇ ವೇಳೆ ಬಾಣಸವಾಡಿ ಕೊಡವ ಸಂಘ ಮತ್ತು ತಿಪ್ಪಸಂದ್ರ ಸ್ನೇಹ ಕೂಟಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ನಿಗದಿತ ಅವಧಿಯಲ್ಲಿ ಪಂದ್ಯ 1–1ಗೋಲುಗಳಿಂದ ಡ್ರಾ ಆಗಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಬಾಣಸವಾಡಿ ಗೆಲುವು ಸಾಧಿಸಿತು. ನಟಿ ಹರ್ಷಿಕಾ ಪೂಣಚ್ಚ, ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಮತ್ತು ರಾಜ್ಯ ಜೂನಿಯರ್‌ ತಂಡದ ಮ್ಯಾನೇಜರ್‌ ಎಸ್‌.ಬಿ. ರಮೇಶ್‌ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.