ಶುಕ್ರವಾರ, ಏಪ್ರಿಲ್ 23, 2021
23 °C

ಹಾಕಿ: ಆರ್‌ಡಿಟಿ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಸ್ವಂತ್ ತಂದಿತ್ತ ಮೂರು ಗೋಲುಗಳ ನೆರವಿನಿಂದ ಆರ್‌ಡಿಟಿ ಇನ್‌ಕ್ಲೂಸಿವ್ ಹೈಸ್ಕೂಲ್ ತಂಡ ಇಲ್ಲಿ ನಡೆಯುತ್ತಿರುವ ಜೂಡ್ ಫೆಲಿಕ್ಸ್ ಹಾಕಿ ಅಕಾಡೆಮಿ ಅಂತರ ಶಾಲಾ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಪಡೆಯಿತು.ಕೆಎಸ್‌ಎಚ್‌ಎ ಹಾಕಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಡಿಟಿ 8-0 ಗೋಲುಗಳಿಂದ ಮರಿಯಾ ನಿಕೇತನ್ ಶಾಲಾ ತಂಡವನ್ನು ಮಣಿಸಿತು. ಆಕರ್ಷಕ ಪ್ರದರ್ಶನ ನೀಡಿದ ಜಸ್ವಂತ್ ಪಂದ್ಯದ 1, 2 ಮತ್ತು 14ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು.ಶಿವ (8 ಮತ್ತು 28ನೇ ನಿ.) ಹಾಗೂ ಶ್ರೀರಂಗ (19 ಮತ್ತು 21ನೇ ನಿ.) ತಲಾ ಎರಡು ಗೋಲುಗಳನ್ನು ತಂದಿತ್ತರೆ, ಇನ್ನೊಂದು ಗೋಲನ್ನು ಕಮಲ್ (13) ಗಳಿಸಿದರು.ದಿನದ ಮತ್ತೊಂದು ಪಂದ್ಯದಲ್ಲಿ ಕೂಡಿಗೆ ಕ್ರೀಡಾ ಶಾಲೆ ತಂಡ 9-2 ಗೋಲುಗಳಿಂದ ಬಿಷಪ್ ಕಾಟನ್ಸ್ ಹೈಸ್ಕೂಲ್ ವಿರುದ್ಧ ಸುಲಭ ಜಯ ಸಾಧಿಸಿತು. ನಾಲ್ಕು ಗೋಲುಗಳನ್ನು ತಂದಿತ್ತ ರವಿ ಕುಮಾರ್ (6, 12, 23 ಮತ್ತು 29) ಕೂಡಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.