ಶನಿವಾರ, ಮೇ 21, 2022
20 °C

ಹಾಕಿ ಇಂಡಿಯಾದ ಕೇಂದ್ರೀಯ ಗುತ್ತಿಗೆ ಒಪ್ಪಂದ: ಕರ್ನಾಟಕದ 9 ಆಟಗಾರರಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಸ್.ವಿ.ಸುನಿಲ್ ಹಾಗೂ ವಿ.ಆರ್.ರಘುನಾಥ್ ಸೇರಿದಂತೆ ಕರ್ನಾಟಕದ ಒಂಬತ್ತು ಆಟಗಾರರು `ಹಾಕಿ ಇಂಡಿಯಾ~ ಪ್ರಕಟಿಸಿರುವ ಕೇಂದ್ರೀಯ ಗುತ್ತಿಗೆ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2012-2013ರ ಅವಧಿಗೆ ಈ ಒಪ್ಪಂದ ರೂಪಿಸಲಾಗಿದ್ದು, ಒಟ್ಟು 32 ಮಂದಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಪುಣೆಯ ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಎರಡು ದಿನಗಳ ಆಯ್ಕೆ ಟ್ರಯಲ್ಸ್ ಬಳಿಕ `ಹಾಕಿ ಇಂಡಿಯಾ~ ಆಟಗಾರರ ಹೆಸರನ್ನು ಅಂತಿಮಗೊಳಿಸಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಆಯ್ಕೆಗಾರರಾದ   ಬಲ್ಬೀರ್ ಸಿಂಗ್, ಬಿ.ಪಿ.ಗೋವಿಂದ, ಸರ್ಕಾರಿ ವೀಕ್ಷಕ ಹರ್ವೀಂದರ್ ಸಿಂಗ್, ಮುಖ್ಯ ಕೋಚ್ ಮೈಕಲ್ ನಾಬ್ಸ್ ಹಾಗೂ ಫಿಜಿಯೋ ಡೇವಿಡ್ ಜಾನ್ ಇದ್ದರು.

ನಾಯಕ ಭರತ್ ಚೆಟ್ರಿ, ಇಗ್ನೇಸ್ ಟರ್ಕಿ, ಎಂ.ಬಿ.ಅಯ್ಯಪ್ಪ, ಎಸ್.ಕೆ.ಉತ್ತಪ್ಪ, ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ ಹಾಗೂ ಎಂ.ಜಿ.ಪೂಣಚ್ಚ ಗುತ್ತಿಗೆ ಒಪ್ಪಂದದಲ್ಲಿ ಸ್ಥಾನ ಪಡೆದ ಕರ್ನಾಟಕದ ಇತರ ಆಟಗಾರರಾಗಿದ್ದಾರೆ.

32 ಆಟಗಾರರ ಪಟ್ಟಿ ಇಂತಿದೆ:

ಗೋಲ್ ಕೀಪರ್ಸ್‌: ಭರತ್ ಚೆಟ್ರಿ, ಪಿ.ಆರ್.ಶ್ರೀಜೇಶ್, ಪಿ.ಟಿ.ರಾವ್. ಡಿಫೆಂಡರ್ಸ್: ವಿ.ಆರ್.ರಘುನಾಥ್, ಇಗ್ನೇಸ್ ಟರ್ಕಿ, ಸಂದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹರ್ಬಿರ್ ಸಿಂಗ್. ಮಿಡ್‌ಫೀಲ್ಡರ್ಸ್: ಸರ್ದಾರ್ ಸಿಂಗ್, ಕೊತಾಜಿತ್ ಸಿಂಗ್, ಗುರ್ಬಜ್ ಸಿಂಗ್, ಬೀರೇಂದ್ರ ಲಾಕ್ರಾ, ಮನ್‌ಪ್ರೀತ್ ಸಿಂಗ್, ಎಂ.ಬಿ.ಅಯ್ಯಪ್ಪ, ಬಿಪಿನ್ ಕರ್ಕೆಟ್ಟಾ, ಪ್ರದೀಪ್ ಮೋರ್, ಗುರ್ಮೇಲ್ ಸಿಂಗ್. ಫಾರ್ವರ್ಡ್ಸ್: ಎಸ್.ವಿ.ಸುನಿಲ್, ಗುರ್ವೀಂದ್ ಸಿಂಗ್ ಚಾಂದಿ, ಸರ್ವಂಜಿತ್ ಸಿಂಗ್, ಚಿಂಗ್ಲೆನ್‌ಸನ ಸಿಂಗ್, ಶಿವೇಂದ್ರ ಸಿಂಗ್, ದನೀಶ್ ಮುಸ್ತಾಬ, ತುಷಾರ್ ಖಾಂಡ್ಕರ್, ಎಸ್.ಕೆ.ಉತ್ತಪ್ಪ, ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ, ಯುವರಾಜ್ ವಾಲ್ಮಿಕಿ, ಧರ್ಮವೀರ್ ಸಿಂಗ್, ಆಕಾಶ್‌ದೀಪ್ ಸಿಂಗ್, ಎಂ.ಜಿ. ಪೂಣಚ್ಚ ಹಾಗೂ ಪ್ರಭ್‌ದೀಪ್ ಸಿಂಗ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.