ಸೋಮವಾರ, ಮೇ 10, 2021
21 °C

ಹಾಕಿ: ಎಬಿಎಚ್‌ಎಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಬಿಎಚ್‌ಎ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಸೂಪರ್     ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ದಾಖಲಿಸಿದರು.



ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಬಿಎಚ್‌ಎ 5-0 ಗೋಲುಗಳಿಂದ ಸೆಂಟರ್ ಆಫ್ ಎಕ್ಸಲೆನ್ಸ್ ತಂಡವನ್ನು ಮಣಿಸಿತು. ವಿಜಯಿ ತಂಡದ ವಿನೀತ್ ಮೈಕಲ್ (7ನೇ ಹಾಗೂ 39ನೇ ನಿ.), ಬಸಂತ್ ಟರ್ಕಿ (46ನೇ ನಿ.), ನದೀಮ್ ಉದ್ದಿನ್ (54ನೇ ನಿ.) ಹಾಗೂ ಮುಕೇಶ್ ಮಿಂಜ್ (59ನೇ ನಿ.) ಗೋಲು ಗಳಿಸಿದರು.



ಉಳಿದ ಪಂದ್ಯಗಳಲ್ಲಿ ಎಚ್‌ಎಎಲ್ 2-1 ಗೋಲುಗಳಿಂದ ಪಿಸಿಟಿಸಿ ಎದುರೂ, ಕೆಎಸ್‌ಪಿ 2-1 ಎಂಎಲ್‌ಐ ವಿರುದ್ಧವೂ ಗೆಲುವು ಸಾಧಿಸಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.