ಬುಧವಾರ, ಮೇ 19, 2021
22 °C

ಹಾಕಿ: ಭಾರತ ಮಹಿಳಾ ತಂಡಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ತಂಡನ್ಯೂಜಿಲೆಂಡ್‌ನ ಪಾಕುರಂಗಾದಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ನಡುವಣ ಮಹಿಳಾ ಹಾಕಿಯ ಎರಡನೇ ಹಂತದ  ಟೂನಿರ್ಯ ಬುಧವಾರದ ಪಂದ್ಯದಲ್ಲಿ ಅಮೆರಿಕಾ ಎದುರು 0-3 ಗೋಲುಗಳಿಂದ ಸೋಲು ಕಂಡರು.ಅಮೆರಿಕಾದ ಆಟಗಾರ್ತಿಯರು ಮೇಲುಗೈ ಸಾಧಿಸಿದ್ದು, ಭಾರತದ ಆಟಗಾರ್ತಿಯರು ಪದೇ ಪದೇ ಎಸಗುತ್ತಿದ್ದ ಹಲವು ಅನಗತ್ಯ ತಪ್ಪುನಡೆಗಳ ಲಾಭ ಪಡೆದರು.ಮಿಡ್‌ಫೀಲ್ಡರ್ ಅಸುಂತಾ ಲಾಕ್ರ ಕುತ್ತಿಗೆಯ ಸ್ನಾಯು ಸೆಳೆತ ತೊಂದರೆಯಿಂದ ಬಳಲುತ್ತಿರುವುದರಿಂದ ಈ ಪಂದ್ಯದಲ್ಲಿ ಆಡಲಿಳಿಯಲಿಲ್ಲ. ಹೀಗಾಗಿ ಅಮೆರಿಕಾದ ಫಾರ್ವರ್ಡ್ ಆಟಗಾರ್ತಿಯರು ಭಾರತದ ಆವರಣದೊಳಗೆ ನುಗ್ಗಲು ತೀರಾ ಪ್ರಯಾಸ ಪಡಬೇಕಿರಲಿಲ್ಲ. ಹೀಗಾಗಿ ರಕ್ಷಣಾ ಆಟಗಾರ್ತಿಯರಾದ ಜಯ್‌ದೀಪ್ ಕೌರ್ ಮತ್ತು ಕಿರಣ್‌ದೀಪ್ ಕೌರ್ ಮೇಲೆ ಹೆಚ್ಚಿನ ಒತ್ತಡ ಇತ್ತು. ಆದರೆ ಅವರಿಂದಲೂ ಎಂದಿನ ಆಟ ಕಂಡು ಬರಲಿಲ್ಲ.

ಅಮೆರಿಕಾದ ಶಾನನ್ ಟೇಲರ್ (14ನೇ.ನಿ.), ಪೇಯ್‌ಜ್ ಸೆಲೆಂಕ್ಸಿ (30ನೇ.ನಿ.) ಮತ್ತು ಮಿಷೆಲ್ ಸೆಸಾನ್ (47ನೇ.ನಿ.)  ತಲಾ ಒಂದು ಗೋಲು ತಂದಿತ್ತರು.ಭಾರತ ಆರಂಭದಲ್ಲೇ ಮುನ್ನಡೆಯ ಗೋಲು ಗಳಿಸಬಹುದಿತ್ತು. ಪೂನಮ್ ರಾಣಿ ನೀಡಿದ ಚೆಂಡನ್ನು ಅನುರಾಧಾ ಥೊಕ್‌ಚೊಮ್ ಪಡೆದು, ಗೋಲು ಆವರಣದ ಬಳಿ ಇದ್ದ ರಿತು ರಾಣಿ ಅವರತ್ತ ಕರಾರುವಾಕ್ಕಾಗಿ ತಳ್ಳಿದರು. ಆದರೆ ರಿತು ರಾಣಿ ಅದನ್ನು ಗುರಿ ಮುಟ್ಟಿಸುವಲ್ಲಿ ಎಡವಿದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಪೂನಮ್ ರಾಣಿ ಏಕಾಂಗಿಯಾಗಿ ಚೆಂಡಿನೊಡನೆ ಮುನ್ನುಗ್ಗಿ ಮುಕ್ತ ಅವಕಾಶದಲ್ಲಿ ಹೊಡೆದ ಚೆಂಡನ್ನು ಗೋಲ್‌ಕೀಪರ್ ಅಮಿ ಸ್ವೆನ್ಸನ್ ತಡೆದರು.ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಶಾನನ್ ಚೆಂಡನ್ನು ಗುರಿ ಮುಟ್ಟಿಸಿದ ಕೆಲವೇ ಕ್ಷಣಗಳಲ್ಲಿ ಗೋಲುಗಳ ಅಂತರವನ್ನು ಸಮಗೊಳಿಸಲು ಭಾರತ ಸತತ ಪ್ರಯತ್ನಗಳನ್ನು ನಡೆಸಿತು. ಆಗ ಭಾರತಕ್ಕೆ ಸಿಕ್ಕಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳೂ ವ್ಯರ್ಥಗೊಂಡವು. ಎರಡನೇ ಪೆನಾಲ್ಟಿ ಕಾರ್ನರ್‌ನಲ್ಲಿ ದೀಪಿಕಾ ಬಲವಾಗಿ ಗುರಿ ಇಟ್ಟು ಹೊಡೆದ ಚೆಂಡನ್ನು ಗೋಲು ಕಂಬಗಳ ನಡುವೆ ನಿಂತಿದ್ದ ಮಿಷೆಲ್ ಡಾಸನ್ ಅತ್ಯುತ್ತಮವಾಗಿ ತಡೆದರು.ಭಾರತ ತನ್ನ ಎರಡನೇ ಪಂದ್ಯವನ್ನು ಗುರುವಾರ ಆಸ್ಟ್ರೇಲಿಯಾದ ವಿರುದ್ಧ ಆಡಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.