ಶುಕ್ರವಾರ, ಮೇ 7, 2021
19 °C

ಹಾಕಿ: ಮಹಿಳಾ ತಂಡಕ್ಕೆ ಸತತ ಮೂರನೇ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓರ್ಡೊಸ್, ಚೀನಾ (ಪಿಟಿಐ): ಭಾರತದ ಮಹಿಳೆಯರ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದರಿಂದಾಗಿ ಪ್ರಶಸ್ತಿಯ ಕನಸು ಕಾಣುವುದಕ್ಕೂ ಅವಕಾಶ ಇಲ್ಲದಂತಾಗಿದೆ. ಶನಿವಾರ ಮೂರನೇ ಸ್ಥಾನಕ್ಕಾಗಿ ಜಪಾನ್ ವಿರುದ್ಧ ಆಡಬೇಕಾಗಿದೆ.ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್ ಎದುರು ಪರಾಭವಗೊಂಡಿದ್ದ ಭಾರತದ ವನಿತೆಯರು ಗುರುವಾರದ ಲೀಗ್ ಪಂದ್ಯದಲ್ಲಿ 0-4 ಗೋಲುಗಳ ಅಂತರದಿಂದ ಆತಿಥೇಯ ಚೀನಾಕ್ಕೆ ಶರಣಾದರು.ವಿಜಯಿ ತಂಡದ ಯುಡಿಯಾವೊ ಜಾವೊ (6 ಮತ್ತು 66ನೇ ನಿಮಿಷ) ಹಾಗೂ ಯುಬೊ ಮಾ (23 ಮತ್ತು 65ನೇ ನಿ.) ಅವರು ಗೋಲು ಗಳಿಸಿದರು. ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ನಿರಾಸೆಯ ಪ್ರದರ್ಶನ ನೀಡಿದ ಭಾರತ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.