ಭಾನುವಾರ, ಸೆಪ್ಟೆಂಬರ್ 27, 2020
27 °C

ಹಾಕಿ: ಮೂರನೇ ಸುತ್ತಿಗೆ ಎಚ್‌ಎಎಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಮೂರನೇ ಸುತ್ತಿಗೆ ಎಚ್‌ಎಎಲ್ಬೆಂಗಳೂರು: ರಾಜ್ಯದ ಅನುಭವಿ ತಂಡಗಳಲ್ಲಿ ಒಂದಾದ ಬೆಂಗಳೂರಿನ ಎಚ್.ಎ.ಎಲ್. ತಂಡದವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಮೂರನೇ ಸುತ್ತು ತಲುಪಿದ್ದಾರೆ.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಚ್.ಎ.ಎಲ್. ತಂಡ 8-1 ಗೋಲುಗಳಿಂದ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಮೇಲೆ ಸುಲಭ ವಿಜಯ ಸಾಧಿಸಿತು. ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಹುಬ್ಬಳ್ಳಿ ತಂಡದವರು ಟೂರ್ನಿಯಿಂದ ಹೊರಬಿದ್ದರು.ಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಎಚ್.ಎ.ಎಲ್. ತಂಡದವರು ತಮ್ಮ ಖ್ಯಾತಿಗೆ ತಕ್ಕಂತೆ ಆಟವಾಡಿ ಪ್ರೇಕ್ಷಕರ ಮನಗೆದ್ದರು. ವಿರಾ ಮದ ವೇಳೆಗೆ 6-1 ಗೋಲುಗಳಿಂದ ಮುಂದಿದ್ದ ವಿಜಯಿ ತಂಡದ ನಾಗಸೇನಿ, ಲೋಕರಾಜ್, ಅಭಿನವ್ ಗಣಪತಿ, ನಾಣಯ್ಯ, ರಮೇಶ್, ಮಹಮದ್ ನಯೀಮ್, ವಿನೀತ್ ಮೈಕೆಲ್ (2) ಹಾಗೂ ಎದುರಾಳಿ ತಂಡದ ಮಂಜುನಾಥ್ ಚೆಂಡನ್ನು ಗುರಿಮುಟ್ಟಿಸಿದರು.ನಾಳೆ (ಶುಕ್ರವಾರ) ಮಧ್ಯಾಹ್ನ 2-45ಕ್ಕೆ ಪೋಸ್ಟಲ್-ಆರ್.ಡಬ್ಲ್ಯು.ಎಫ್. ಆನಂತರ ಮಧ್ಯಾಹ್ನ 4-00ಕ್ಕೆ ಪಿ.ಸಿ.ಟಿ.ಸಿ-ಆತಿಥೇಯ ಬೆಂಗಳೂರು ಕೊಡವ ಸಮಾಜ ನಡುವೆ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.