ಭಾನುವಾರ, ಮೇ 16, 2021
24 °C

ಹಾರ್ಸ್‌-ಬಾರ್ಡ್ಸ್ ತಂಡಕ್ಕೆ ಪ್ರಥಮ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಫ್ರೀ ಸ್ಕೇಲ್ ಸೆಮಿ ಕಂಡಕ್ಟರ್ ಇಂಡಿಯಾ ಕಂಪೆನಿಯು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಸೆಂಟರ್ ಫಾರ್ ಎಲೆಕ್ಟ್ರಾನಿಕ್ ಡಿಸೈನ್ ಅಂಡ್ ಟೆಕ್ನಾಲಜಿ (ಸಿಇಡಿಟಿ) ಸಹಯೋಗದಲ್ಲಿ ಎಂಜಿನಿಯರ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ `ಫ್ರೀ ಸ್ಕೇಲ್ ಕಪ್ ಇಂಡಿಯಾ-2011~ ಅನನ್ಯವಾದ ಬುದ್ಧಿವಂತ ಕಾರು ರೇಸ್ ಸ್ಪರ್ಧೆಯಲ್ಲಿ ಸೂರತ್‌ನ ಸರ್ದಾರ್ ವಲ್ಲಭಾಯಿ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ `ಹಾರ್ಸ್‌-ಬಾರ್ಡ್ಸ್~ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಒಂದು ಲಕ್ಷ ರೂಪಾಯಿ ಬಹುಮಾನ ತನ್ನದಾಗಿಸಿಕೊಂಡಿತು.ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಸೋಮವಾರ ನಡೆದ ಎರಡನೇ ವರ್ಷದ ಸ್ಪರ್ಧೆಗೆ 35 ಕಾಲೇಜುಗಳ 127 ತಂಡಗಳು ಪ್ರವೇಶ ಪಡೆದಿದ್ದವು. ಅಂತಿಮ ಸುತ್ತಿಗೆ 40 ಸ್ಪರ್ಧಿಗಳು ಅರ್ಹತೆ ಪಡೆದಿದ್ದರು.ಸೂರತ್‌ನ `ಹಾರ್ಸ್‌-ಬಾರ್ಡ್ಸ್~ ತಂಡದಲ್ಲಿನ ಅಮಿತ್ ತಂಕ್, ಅತುಲ್ ಜರಿವಾಲಾ, ವಿವೇಕ್ ಕೋಲಿಯಾ 25.68 ಸೆಕೆಂಡ್‌ಗಳಲ್ಲಿ ನಿಗದಿತ ರೇಸ್ ಪೂರ್ಣಗೊಳಿಸುವ ಮೂಲಕ ಪ್ರಥಮ ಬಹುಮಾನ ಗೆದ್ದುಕೊಂಡರು.ಮಣಿಪಾಲ ವಿಶ್ವವಿದ್ಯಾಲಯದ ಎಂಸಿಐಸ್ ತಂಡ 30.59 ಸೆಕೆಂಡ್‌ಗಳಲ್ಲಿ ನಿಗದಿತ ರೇಸ್ ಪೂರ್ಣಗೊಳಿಸಿ ದ್ವಿತೀಯ ಸ್ಥಾನ ಪಡೆಯುವ ಮೂಲಕ 50 ಸಾವಿರ ರೂಪಾಯಿ ನಗದು ಗೆದ್ದುಕೊಂಡಿತು. ಈ ತಂಡದ ಶಬೀರ್ ಅಲಿ, ಸ್ನೇಹಾ ಜೋಸೆಫ್, ರಾಜೇಂದ್ರ ಬಾಬು ತಂಡವನ್ನು ಪ್ರತಿನಿಧಿಸಿದ್ದರು. ಸೂರತ್‌ನ ಸರ್ದಾರ್ ವಲ್ಲಭಾಯಿ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ `ವಿಶ್ವ~ ತಂಡವು 34.49 ಸೆಕೆಂಡ್‌ಗಳಲ್ಲಿ ನಿಗದಿತ ರೇಸ್ ಪೂರ್ಣಗೊಳಿಸುವ ಮೂಲಕ ತೃತೀಯ ಸ್ಥಾನ ಪಡೆದು 25 ಸಾವಿರ ರೂಪಾಯಿ ನಗದು ಬಹುಮಾನ ಪಡೆಯಿತು. ವಿವೇಕ್‌ಗಾಂಧಿ, ವರುಣ್ ಚಿದ್ದಾರ‌್ವಣ್ ಹಾಗೂ ವಿಶಾಲ್ ಜೈನ್ ಈ ತಂಡದಲ್ಲಿದ್ದರು.ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ `ನೆಬುಲೆ~ ತಂಡ, ತಾಪರ್ ವಿಶ್ವವಿದ್ಯಾಲಯದ `ಎಕ್ಸ್‌ಎಲ್‌ಎನ್‌ಸಿ~ ಹಾಗೂ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ `ಬಿಎಂಎಸ್ ರೇಸಸ್~ ತಂಡಗಳು ಸಮಾಧಾನಕರ ಬಹುಮಾನ ಪಡೆದವು. ಈ ಮೂರು ತಂಡಗಳಿಗೆ ತಲಾ 10 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮುಂದಿನ ಪೀಳಿಗೆಯ ತಂತ್ರಜ್ಞಾನದ ಅವಕಾಶಗಳಿಗೆ ಪೂರಕವಾಗಿ ಹಾಗೂ ತಮ್ಮ ಸೃಜನಾತ್ಮಕ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.