ಕಡೂರು: ತಾಲ್ಲೂಕಿನ ದೇವನೂರಿನ ಹಾಲು ಸಂಗ್ರಹಣಾ ಘಟಕದ ಕಾರ್ಯದರ್ಶಿ ಮತ್ತು ಕೆಎಂಎಫ್ನಿಂದ ನಿಯುಕ್ತಿಗೊಂಡಿರುವ ಮೇಲ್ವಿಚಾರಕ ರೈತ ಮಹಿಳೆಯರನ್ನು ವಂಚಿಸಿ ಲಕ್ಷಾಂತರ ರೂಪಾಯಿ ಹಾಲಿನ ಹಣ ಬಾಕಿ ಇರಿಸಿಕೊಂಡಿದ್ದಾರೆ ಎಂದು ದೇವನೂರು ಹಾಲು ಸಂಗ್ರಹಣಾ ಘಟಕದ ಮುಂದೆ ನೂರಾರು ರೈತರು ಮತ್ತು ಮಹಿಳೆಯರು ಹಾಲಿನ ಟ್ಯಾಂಕರ್ ತಡೆದು ಪ್ರತಿಭಟನೆ ನಡೆಸಿದರು.

ದೇವನೂರು ಸಮೀಪದ ಕಾಮೇನಹಳ್ಳಿ, ಎಸ್.ಕೊಪ್ಪಲು, ಗಣಪತಿಹಳ್ಳಿ, ಹಳ್ಳದಹಳ್ಳಿ ಮತ್ತು ದೇವನೂರಿನ 5 ಸಹಕಾರ ಸಂಘಗಳ ಮಹಿಳೆಯರು ಸೇರಿ ದೇವನೂರಿನಲ್ಲಿ ಹಾಲಿನ ಶೀಥಲೀಕರಣ ಘಟಕ ಸ್ಥಾಪಿಸಿದ್ದರು. ಇಲ್ಲಿ ಸಂಗ್ರಹವಾದ ಹಾಲು ಹಾಸನ ಹಾಲು ಒಕ್ಕೂಟಕ್ಕೆ ರವಾನೆಯಾಗುತ್ತಿತ್ತು. ಈ ಘಟಕದ ಕಾರ್ಯದರ್ಶಿಯಾಗಿ ವಿಜಯಕುಮಾರ್ ಮತ್ತು ಮೇಲ್ವಿಚಾರಕರಾಗಿ ಕೆಎಂಎಫ್ನಿಂದ ನಿಯುಕ್ತಿಗೊಂಡಿರುವ ವೆಂಕಯ್ಯ ಎರಡು ತಿಂಗಳಿನಲ್ಲಿ ಸುಮಾರು 24 ದಿವಸ ತಲಾ 2000ಲೀ ಹಾಲನ್ನು ಕಳಪೆ ಗುಣಮಟ್ಟ ಎಂದು ನಮೂದಿಸಿ ಇದಕ್ಕೆ ಹಣ ಪಾವತಿ ಇಲ್ಲ ಎಂದು ತಿಳಿಸಿದ್ದರು.

ಆದರೆ ಹಾಲಿನ ಗುಣಮಟ್ಟ ಕಡಿಮೆ ಇದ್ದರೆ ತಕ್ಕಷ್ಟು ಹಣ ನೀಡಬೇಕು ಅಥವಾ ಹಾಲು ವಾಪಾಸು ಮಾಡಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದರು. ತಿಂಗಳುಗಳು ಕಳೆದರೂ ಹಾಲಿನ ಹಣ ಸುಮಾರು 8 ರಿಂದ 10 ಲಕ್ಷ ರೂಪಾಯಿ ಬಾಕಿ ನೀಡದೆ ತಾರತಮ್ಯ ಎಸಗಲಾಗುತ್ತಿದೆ. ಇದರಲ್ಲಿ ಅವ್ಯವಹಾರ ನಡೆದಿದ್ದು ಕಾರ್ಯದರ್ಶಿ ಮತ್ತು ಮೇಲ್ವಿಚಾರಕರೇ ಇದಕ್ಕೆ ಹೊಣೆ ಎಂದು ಆರೋಪಿಸಿ ಗುರುವಾರ ತೀವ್ರ ಸ್ವರೂಪದ ಪ್ರತಿಭಟನೆ ನಡೆಯಿತು.

ಹಾಲು ಸಂಗ್ರಹ ಘಟಕಕ್ಕೆ ಹಾಲು ತುಂಬಿಸಲು ಬಂದಿದ್ದ ಟ್ಯಾಂಕರ್ ಅನ್ನು ತಡೆಹಿಡಿದ ಪ್ರತಿಭಟನಾಕಾರ ರೈತರು ಮತ್ತು ಮಹಿಳೆಯರು ಹಾಲಿನ ಹಣ ಪಾವತಿಸುವವರೆಗೆ ಲಾರಿ ಬಿಡುವುದಿಲ್ಲ ಎಂದು ಧರಣಿ ಕುಳಿತರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ವಿ.ನಟರಾಜ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಚಿಕ್ಕದೇವನೂರು ರವಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಘಟಕದ ಮೇಲ್ವಿಚಾರಕರ ವಿರುದ್ಧ ಹರಿಹಾಯ್ದ ಪ್ರತಿಭಟನಾಕಾರರು ಪಟ್ಟು ಬಿಡದೆ ಕುಳಿತಾಗ ಘಟಕದ ಮೇಲ್ವಿಚಾರಕ ವೆಂಕಯ್ಯ ದೂರವಾಣಿ ಮುಖಾಂತರ ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಂಜೇಗೌಡರನ್ನು ಸಂಪರ್ಕಿಸಿ ಪ್ರತಿಭಟನಾಕಾರರ ಜತೆ ಮಾತಾಡಲು ಕೋರಿದರು. ಪ್ರತಿಕ್ರಿಯಿಸಿದ ನಂಜೇಗೌಡ, ರೈತರಿಗೆ ಆಗಿರುವ ನಷ್ಟವನ್ನು ಶೇ 50ರಷ್ಟು ಭರ್ತಿ ಮಾಡಲು ಅಧಿಕಾರವಿದ್ದು ಆ ಹಣವನ್ನು ಬಿಡುಗಡೆ ಮಾಡಲಾಗುವುದು. ಹೆಚ್ಚಿನ ಪರಿಹಾರ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯವಾಗಬೇಕಿದ್ದು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಘಟನೆ ನಡೆಯುವ ವೇಳೆಗೆ ಸ್ಥಳಕ್ಕೆ ಆಗಮಿಸಿದ ಸಖರಾಯಪಟ್ಟಣ ಪೊಲೀಸ್ ಸಬ್ಇನ್ಸ್ಪೆಪೆಕ್ಟರ್ ಗಿರೀಶ್ ಸಮಸ್ಯೆ ಆಲಿಸಿ, ಗ್ರಾ.ಪಂ. ಅಧ್ಯಕ್ಷ ನಟರಾಜ್, ಚಿಕ್ಕದೇವನೂರು ರವಿ ಮತ್ತು ಮಿಲಿಟರಿ ರವಿ ಇವರ ಸಮ್ಮುಖದಲ್ಲಿ ಘಟಕದ ಕಾರ್ಯದರ್ಶಿ ಮತ್ತು ಮೇಲ್ವಿಚಾರಕರನ್ನು ವಿಚಾರಿಸಿ ಅವರಿಂದ ಮುಚ್ಚಳಿಕೆಪತ್ರ ಬರೆಸಿಕೊಂಡ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕದೇವನೂರು ರವಿ, ಈ ಘಟನೆ ಕುರಿತಂತೆ ಸ್ಥಳೀಯ ಶಾಸಕರು, ಸಹಕಾರಿ ಸಂಘದ ಅಧ್ಯಕ್ಷೆ ಮತ್ತು ಕಾರ್ಯದರ್ಶಿ ಮತ್ತು ಮುಖಂಡರ ಜೊತೆ ಹಾಸನ ಒಕ್ಕೂಟದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರದ ಭರವಸೆ ನೀಡಿದರು.

ದೇವನೂರು ಹಾಲು ಸಹಕಾರ ಸಂಘದ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ಉಷಾ, ಮೂರ್ತಪ್ಪ ಲೋಲಾಕ್ಷಮ್ಮ, ಹೇಮಾವತಿ, ಮೀನಾಕ್ಷಿ, ಮಧು ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.