ಔರಾದ್: ವನಮಾರಪಳ್ಳಿ ಗಡಿಯಿಂದ ಔರಾದ್ವರೆಗೆ ತೀವ್ರವಾಗಿ ಕೆಟ್ಟುಹೋದ ರಸ್ತೆಯನ್ನು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಗುರುವಾರ ಪರಿಶೀಲಿಸಿದರು.

ಇಷ್ಟೊಂದು ಕೆಟ್ಟುಹೋದ ರಸ್ತೆ ಮೇಲೆ ಪ್ರಯಾಣಿಕರು ಹೇಗೆ ಸಂಚರಿಸಬೇಕೆಂದು ತಬ್ಬಿಬ್ಬಾದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದರು. ಮಹಾರಾಷ್ಟ್ರ ಗಡಿಯಿಂದ ಕೌಠಾ ವರೆಗೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ನಾನು ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.

ಅದರೂ ಕೆಲಸ ಆಗುತ್ತಿಲ್ಲ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು. ನೀವು ಸರ್ಕಾರದ ಸಂಬಂಧಿತ ಇಲಾಖೆ ಮುಖ್ಯಸ್ಥರಿಗೆ ಈ ರಸ್ತೆಯ ಸ್ಥಿತಿಗತಿ ಮನವರಿಗೆ ಮಾಡಿಕೊಡುವಂತೆ ಶಾಸಕರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡರು. ಬೋರಾಳ ಎತ್ತರ ಪ್ರದೇಶದ ಬಳಿ ಅಪಾಯಕಾರಿ ಸಂಚಾರದ ಬಗ್ಗೆ ತಮಗೂ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಲೋಕೋಪಯೊಗಿ ಇಲಾಖೆಯವರು ಅಗತ್ಯ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದರು.

ನಾವು ರಸ್ತೆ ಮಾಡಲು ಹೋದರೆ ಕೆಲವರು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಕಾರಣ ಬೋರಾಳ ರಸ್ತೆ ಕಾಮಗಾರಿ ನಿಂತು ಹೋಗಿದೆ. ಆದಾಗ್ಯೂ ಪ್ರಯಾಣಿಕರ ತೊಂದರೆ ತಪ್ಪಿಸಲು ಗುತ್ತಿಗೆದಾರರ ಜೊತೆ ಮಾತನಾಡಿ ಕಾಮಗಾರಿ ಆರಂಭಿಸಲಾಗುವುದು.

ಈ ವಿಷಯದಲ್ಲಿ ತಾವು ನಮಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀರಂಗ ಪರಿಹಾರ, ಮುಖ್ಯಾಧಿಕಾರಿ ಅಶೋಕ ಕಾಳಗಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ, ತಹಸೀಲ್ದಾರ್ ಶಿವಕುಮಾರ ಶೀಲವಂತ, ಶರಣಪ್ಪ ಪಂಚಾಕ್ಷಿರೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.