ಬೀದರ್: ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆಯ ವಿದ್ಯಾರ್ಥಿಗಳು ಸ್ಥಿರ ಮಲ್ಲಗಂಬ ಮತ್ತು ರೋಪ್ ಮಲ್ಲಗಂಬ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದರು.

20 ಬಾಲಕರು 15 ಭಂಗಿಗಳನ್ನು ಪ್ರದರ್ಶಿಸಿದರು. ಹಾವಿನಂತೆ ಮಲ್ಲಕಂಬಕ್ಕೆ ಅಪ್ಪಿಕೊಂಡು ಸರಸರ ಮೇಲೇರಿ ಅಷ್ಟೇ ವೇಗದಲ್ಲಿ ಪ್ರದರ್ಶನ ನೀಡಿ ಕಂಬದಿಂದ ಜಾರಿ ಬರುವ ದೃಶ್ಯ ಅತಿಥಿಗಳ ಮನ ಗೆದ್ದಿತು. ಬಾಲಕನೊಬ್ಬ ಮಲ್ಲಗಂಬದ ಮೇಲೆ ಒಂದೇ ಕಾಲಿನ ಮೇಲೆ ಬಿಲ್ಲಿನಂತೆ ಬಾಗಿಕೊಂಡು ಬಹಳ ಹೊತ್ತಿನವರೆಗೆ ನಿಂತುಕೊಂಡಿದ್ದ ದೃಶ್ಯ ಸಾರ್ವಜನಿಕರನ್ನು ಬೆರಗುಗೊಳಿಸಿತು.

ಬಾಲಕರು ಮಲ್ಲಗಂಬ ಮೇಲೆ ನಿಂತು ಸಮತೋಲನ ಕಾಯ್ದುಕೊಂಡು ಸೂರ್ಯ ನಮಸ್ಕಾರ, ಬ್ಯಾಕ್ ಬಾಲೆನ್ಸ್, ಕೂರ್ಮಾಸನ, ಪದ್ಮಾಸನ ಮತ್ತಿತರ ಆಸನಗಳ ಪ್ರದರ್ಶನ ನೀಡಿದರು.

ಮಕ್ಕಳು ಸದಾ ಲವಲವಿಕೆಯಿಂದ ಇರಲು, ಏಕಾಗ್ರತೆ ಹೆಚ್ಚಿಸಲು, ದೈಹಿಕ ಸದೃಢತೆಗೆ ಮಲ್ಲಗಂಬ ವ್ಯಾಯಾಮ ಅನುಕೂಲ. ಈ ಪ್ರದರ್ಶನದಿಂದ ಹೊಟ್ಟೆ, ತೋಳು ಮತ್ತು ತೊಡೆಗಳು ಅತ್ಯಂತ ಬಲಿಷ್ಠವಾಗುತ್ತವೆ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅನಿಲಕುಮಾರ ಪಾಟೀಲ್ ಹೇಳಿದರು.

ಬಾಲಕಿಯರ ಸಾಹಸ: ನೆಹರೂ ಕ್ರೀಡಾಂಗಣದಲ್ಲಿ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆಯ 11 ಬಾಲಕಿಯರು ರೋಪ್ ಮಲ್ಲಗಂಬದ ಮೇಲೆ ಒಟ್ಟು 14 ಭಂಗಿಗಳನ್ನು ಪ್ರದರ್ಶಿಸಿದರು.

ಮುಜುಗರ ಹಾಗೂ ಆತಂಕ ಪಟ್ಟುಕೊಳ್ಳದೇ ಸರಸರನೇ ಹಗ್ಗದ ಮೇಲೇರಿದರು. ವ್ಯಾಯಾಮಗಳನ್ನು ಪ್ರದರ್ಶಿಸಿದ ನಂತರ ಅಷ್ಟೇ ಸಲೀಸಾಗಿ ಕೆಳಗಿಳಿದರು. ಹಗ್ಗದ ಆಸರೆಯಿಂದ ಯೋಗಾಸನ ಪ್ರದರ್ಶಿಸಿದರು.

ಶವಾಸನ, ಶಿರಸಾಸನ, ಪದ್ಮಾಸನ, ಚಕ್ರಾಸನ, ಪದ್ಮಾಸನ– ಪರ್ವತಾಸನ, ಗುರುಡಾಸನ, ಪಶ್ಚಿಮೋತ್ತಾಸನ, ಚಕ್ರಾಸನಗಳು ಗಮನ ಸೆಳೆದವು. ಬಾಲಕಿಯರ ಸಾಹಸ ಕಂಡು ಬೆರಗಾದ ಜಿಲ್ಲಾಧಿಕಾರಿ ಅನುರಾಗ ತಿವಾರಿ ಪ್ರದರ್ಶನದ ನಂತರ ಮಕ್ಕಳನ್ನು ವೇದಿಕೆಗೆ ಕರೆದು ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರು ತರಬೇತುದಾರ ಅನಿಲಕುಮಾರ ಪಾಟೀಲ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಜಿಲ್ಲಾಧಿಕಾರಿ ಅನುರಾಗ ತಿವಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಮ್ ಹಾಗೂ ಡಿಡಿಪಿಐ ಚಂದ್ರೇಗೌಡ ತರಬೇತುದಾರರ ಬೆನ್ನು ತಟ್ಟಿದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕರಾಟೆ ಪ್ರದರ್ಶಿಸಿದರು. ಕೆಲವರು ಕೈಮೇಲೆ ಟ್ಯೂಬ್ಲೈಟ್ ಒಡೆದುಕೊಂಡರೆ, ಕೆಲವರು ಬಲಿಷ್ಠ ಕೈಗಳಿಂದ ಪಾಟಿಕಲ್ಲುಗಳನ್ನು ಒಡೆದು ಹಾಕಿದರು. ಶಾಲಾ ವಿದ್ಯಾರ್ಥಿಗಳು ಸಮೂಹ ನೃತ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.