ಹಾಸನ: ಹೊಸ ಮರಳು ನೀತಿ ಜಾರಿಮಾಡಿದ ಮೊದಲ ಕೆಲವು ಜಿಲ್ಲೆಗಳಲ್ಲಿ ಹಾಸನವೂ ಒಂದು. ಜತೆಗೆ, ಈ ದಂಧೆಗೆ ಪೂರ್ಣ ಪ್ರಮಾಣದಲ್ಲಿ ಮಾಫಿಯಾ ರೂಪ ನೀಡಿರುವ ಜಿಲ್ಲೆಯೂ ಇದೇ.

ಯಗಚಿ, ಹೇಮಾವತಿ ಹಾಗೂ ಕಾವೇರಿ ಮೂರು ನದಿಗಳು ಜಿಲ್ಲೆಯ ರೈತರು ಮಾತ್ರವಲ್ಲ ಮರಳು ದಂಧೆಯವರಿಗೂ ವರದಾನವಾಗಿವೆ. ಹಲವು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಅವ್ಯಾಹತವಾಗಿ ಮೂರೂ ನದಿಗಳ ಒಡಲನ್ನು ಬಗೆಯಲಾಗುತ್ತಿದೆ. ಈ ಅಕ್ರಮವನ್ನು ತಡೆಯುವ ಗುಂಡಿಗೆ ಯಾವ ಅಧಿಕಾರಿಗೂ ಇಲ್ಲ.

ಹಾಸನದ ಹಿಂದಿನ ತಹಶೀಲ್ದಾರ ಮಥಾಯಿ ಇಂಥ ಸಣ್ಣ ಪ್ರಯತ್ನವನ್ನೇನೋ ಮಾಡಿದ್ದರು. ಆ ಪ್ರಯತ್ನ ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರರ ನಡುವೆ ಘರ್ಷಣೆಗೂ ಕಾರಣವಾಗಿತ್ತು. ಪೊಲೀಸ್ ಇಲಾಖೆ ಎಷ್ಟರಮಟ್ಟಿಗೆ ಈ ದಂಧೆಯಲ್ಲಿ ಶಾಮೀಲಾಗಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಯಿತು ಎನ್ನುತ್ತಾರೆ ಸಾರ್ವಜನಿಕರು.

ಕಾವೇರಿ ನದಿಯ ಮೊದಲ ಅಣೆಕಟ್ಟು ಇರುವುದು ಅರಕಲಗೂಡು ತಾಲ್ಲೂಕಿನ ಕಟ್ಟೇಪುರದಲ್ಲಿ. ಇಲ್ಲಿ ನಿರಂತರವಾಗಿ ತೆಪ್ಪಗಳನ್ನು ಬಳಸಿ ಮರಳು ತೆಗೆಯಲಾಗುತ್ತಿದೆ. ಇಲ್ಲಿಗೆ ಹೋಗುವ ಧೈರ್ಯ ಯಾವ ಅಧಿಕಾರಿಗೂ ಇಲ್ಲ. ಪತ್ರಿಕೆಯವರು ಹಲವು ಬಾರಿ ಸುದ್ದಿ ಬರೆದರೆ ಒಂದಿಬ್ಬರು ಪೊಲೀಸರು ಹೋಗಿ ಎರಡು ತೆಪ್ಪ ವಶಪಡಿಸಿಕೊಂಡು ಬರುತ್ತಾರೆ.

ಆ ತೆಪ್ಪಗಳು ಪೊಲೀಸ್ ಠಾಣೆಯ ಹೊರಗೆ ಬಿದ್ದಿರುತ್ತವೆ. ಮರುದಿನ ನಾಲ್ಕು ಹೊಸ ತೆಪ್ಪಗಳು ನದಿಗೆ ಇಳಿದಿರುತ್ತವೆ. ಮಧ್ಯರಾತ್ರಿ ಬಳಿಕ ಈ ಭಾಗದಲ್ಲಿ ಸಾಲುಸಾಲು ಮರಳು ಲಾರಿಗಳು ಬೆಂಗಳೂರು ಕಡೆಗೆ ಹೋಗುತ್ತವೆ.

ಸಕಲೇಶಪುರ ತಾಲ್ಲೂಕು ಆಲೆಬೇಲೂರು, ಒಡೂರು, ಯಸಳೂರು... ಹೀಗೆ ಕೆಲವು ಪ್ರಮುಖ ಕೇಂದ್ರಗಳಲ್ಲಿ ಇದೇ ದಂಧೆ ನಡೆಯುತ್ತಿದೆ. ಬೇಲೂರಿನಲ್ಲಿ ಯಗಚಿ, ಹೇಮಾವತಿ ಎರಡೂ ನದಿಗಳು ಹರಿಯುತ್ತಿವೆ. ನಲಿಕೆ ಹಾಗೂ ನಾರ್ವೆ ಗ್ರಾಮಗಳಲ್ಲಿ ಹೇಮಾವತಿ ನದಿಯಿಂದ ಹಾಗೂ ಯಗಚಿಯ ಹಿನ್ನೀರು ಪ್ರದೇಶವಾದ ಯಮಸಂದಿ, ಶೆಟ್ಟಿಗೆರೆ, ಕೂಡ್ಲೂರು, ಗೋವಿನಹಳ್ಳಿ ಸುತ್ತಮುತ್ತ ಬೋಟ್ಗಳನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ. ಬೇಲೂರಿನಿಂದಲೂ ದಿನಕ್ಕೆ ಕನಿಷ್ಠ 60ರಿಂದ70 ಲಾರಿಗಳಷ್ಟು ಮರಳು ಸಾಗಾಣಿಕೆಯಾಗುತ್ತದೆ.

ಬೆದರಿಕೆ: ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಸುದ್ದಿ ಬರೆಯಲು ಹೋದವರಿಗೂ ಬೆದರಿಕೆ ಬರುತ್ತದೆ. ಛಾಯಾಚಿತ್ರ ತೆಗೆಯಲು ಹೋದರೆ, `ನಿಮ್ಮ ಕೆಲಸ ನೋಡ್ಕೊಳ್ಳಿ, ನಮ್ಮ ತಂಟೆಗೆ ಬರಬೇಡಿ' ಎನ್ನುತ್ತಾರೆ. ಹಾಸನ ತಾಲ್ಲೂಕಿನಲ್ಲಿ ಕೆಲವು ತಿಂಗಳ ಹಿಂದೆ ತಹಶೀಲ್ದಾರರು ಅಕ್ರಮ ಮರಳು ಸಂಗ್ರಹ ಕೇಂದ್ರವೊಂದಕ್ಕೆ ದಾಳಿ ನಡೆಸಿದ್ದರು.

ಕೆಲವೇ ಕ್ಷಣದಲ್ಲಿ ತಹಶೀಲ್ದಾರರ ಜೀಪ್ ಸುತ್ತ ಜನ ಸೇರಿದ್ದರು. ಇನ್ನೂ ಒಂದಷ್ಟು ಜನರು ಪತ್ರಕರ್ತರನ್ನೂ ಮುತ್ತಿಕೊಂಡರು. ಅಪಾಯದ ವಾಸನೆ ಹಿಡಿದ ಪತ್ರಕರ್ತರು ನಿಧಾನಕ್ಕೆ ಜಾರಿಕೊಂಡರೆ, ಊರಿಂದ ಆಚೆ ಬರುವವರೆಗೂ ಬೈಕ್ನಲ್ಲಿ ಕೆಲವರು ಅವರನ್ನು ಹಿಂಬಾಲಿಸಿದ್ದರು. ತಹಶೀಲ್ದಾರರೂ ಅದೇ ರೀತಿ ತಪ್ಪಿಸಿಕೊಂಡು ಬರಬೇಕಾಯಿತು. ಅಕ್ರಮ ದಂಧೆಕೋರರ ಜತೆಗೆ ಗ್ರಾಮದ ಜನರೂ ಕೈ ಜೋಡಿಸಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

ರಕ್ಷಣೆ ಇಲ್ಲ: ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ನಿಯಂತ್ರಿಸಲು ಸಿದ್ಧವಿದ್ದರೂ, ಅವರಿಗೆ ರಕ್ಷಣೆ ಯಾರು ಕೊಡಬೇಕು ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಒಂದಿಬ್ಬರು ಪೊಲೀಸರನ್ನು ಕಳುಹಿಸಿದರೆ ಅವರು ಸುರಕ್ಷಿತವಾಗಿ ಮರಳಿ ಬರುವ ಸ್ಥಿತಿ ಜಿಲ್ಲೆಯಲ್ಲಿಲ್ಲ. ಸಶಸ್ತ್ರ ಪೊಲೀಸರನ್ನು ಯಾವಾಗಲೂ ಕೊಡುವ ಸ್ಥಿತಿಯಲ್ಲಿ ಪೊಲೀಸ್ ಇಲಾಖೆಯೂ ಇಲ್ಲ.

ಆರಂಭದ ಕೆಲವು ದಿನಗಳಲ್ಲಿ ಹೋಮ್ಗಾರ್ಡ್ ಸಿಬ್ಬಂದಿ ನೆರವು ನೀಡಿದರೂ ನಂತರದ ದಿನಗಳಲ್ಲಿ ಅವರು ಮರಳು ದಾಳಿಗೆ ತಮ್ಮನ್ನು ಕಳುಹಿಸದಂತೆ ತಾಕೀತು ಮಾಡಿದರು.ಹೋಮ್ಗಾರ್ಡ್ ಸಿಬ್ಬಂದಿ ಸ್ಥಳೀಯರೇ ಇರುತ್ತಾರೆ. ದಾಳಿ ನಡೆದ ಬಳಿಕ ಅವರು ತಮ್ಮ ಊರಿಗೆ ಹೋಗಬೇಕು. ಆ ಸಂದರ್ಭದಲ್ಲಿ ಘರ್ಷಣೆಯ ಸಾಧ್ಯತೆ ಇರುತ್ತದೆ ಎಂಬುದು ಅವರ ಭೀತಿ.

ಗುತ್ತಿಗೆ ವಿಸ್ತರಣೆ: ಐದು ಬ್ಲಾಕ್ಗಳನ್ನು ಗುತ್ತಿಗೆ ಪಡೆದವರ ಗುತ್ತಿಗೆ ಅವಧಿ ಮುಗಿದಿದ್ದರೂ, ಜಿಲ್ಲಾಡಳಿತ ಹೊಸದಾಗಿ ಟೆಂಡರ್ ಕರೆಯುವ ಬದಲು ಈ ಮಳೆಗಾಲ ಮುಗಿಯುವವರೆಗೆ ಹಿಂದಿನವರನ್ನೇ ಮುಂದುವರಿಸುವ ತೀರ್ಮಾನ ಕೈಗೊಂಡಿದೆ.

ಜನ ಎಚ್ಚೆತ್ತುಕೊಳ್ಳಲಿ: ತಾಲ್ಲೂಕಿನ ಹೇಮಾವತಿ ಹಾಗೂ ಕಾವೇರಿ ನದಿ ಪಾತ್ರಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ತಡೆಯದಿದ್ದಲ್ಲಿ ಮುಂದಿನ

ದಿನಗಳಲ್ಲಿ ಅಪಾಯ ತಪ್ಪಿದ್ದಲ್ಲ. ನದಿಯಲ್ಲಿ ಮರಳು ತೆಗೆಯುತ್ತಿರುವುದರಿಂದ ಅಲ್ಲಿ ಗುಂಡಿ ಬಿದ್ದು ನದಿಯ ಹರಿವು ದಿಕ್ಕು ತಪ್ಪುವ ಸಂಭವವಿದೆ. ಅಕ್ರಮ ಮರಳು ದಂಧೆಯಿಂದಾಗಿ ಕಟ್ಟೇಪುರ ಅಣೆಕಟ್ಟೆ ಅಪಾಯ ಎದುರಿಸಬೇಕಾಗಿದೆ. ನೈಸರ್ಗಿಕ ಸಂಪತ್ತಿನ ಲೂಟಿಯಿಂದ ಆಗಬಹುದಾದ ಅಪಾಯಗಳ ಬಗ್ಗೆ ಜನರೂ ಎಚ್ಚೆತ್ತುಕೊಳ್ಳಬೇಕಿದೆ ಎನ್ನುತ್ತಾರೆ ಪೊಟ್ಯಾಟೊ ಕ್ಲಬ್ ಅಧ್ಯಕ್ಷ ಎಚ್. ಯೋಗಾರಮೇಶ್.

ಧ್ವನಿ ಎತ್ತಿದವರಿಗೆ ಮರಳು ಇಲ್ಲ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಬಗ್ಗೆ ಧ್ವನಿ ಎತ್ತಿದರೆ ಅಂಥವರು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸಲೇಬೇಕು. ಕೆಲವು ತಿಂಗಳ ಹಿಂದೆ ಪತ್ರಿಕೆಯೊಂದು ಈ ದಂಧೆಯ ಬಗ್ಗೆ ಲೇಖನ ಪ್ರಕಟಿಸಿತ್ತು. ಅದರಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರೊಬ್ಬರ ಅಭಿಪ್ರಾಯವನ್ನೂ ಪ್ರಕಟಿಸಿತ್ತು.

ದಂಧೆಯ ವಿರುದ್ಧ ಮಾತನಾಡಿದ್ದಕ್ಕೆ ಆ ಗುತ್ತಿಗೆದಾರರಿಗೆ ಸುಮಾರು ಒಂದು ತಿಂಗಳ ಕಾಲ ಯಾರೂ ಮರಳನ್ನು ಕೊಟ್ಟಿಲ್ಲ. ಮನೆ, ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ಕೈಗೆತ್ತಿಕೊಂಡಿದ್ದ ಆ ಗುತ್ತಿಗೆದಾರರು ಸಕಾಲದಲ್ಲಿ ಅವುಗಳನ್ನು ಮುಗಿಸಲಾಗದೆ ಒದ್ದಾಡುವಂತಾಗಿತ್ತು. ಈಗ ಯಾವ ಗುತ್ತಿಗೆದಾರರೂ ಈ ದಂಧೆಯ ಬಗ್ಗೆ ಚಕಾರವೆತ್ತುತ್ತಿಲ್ಲ.

ಐದು ಬ್ಲಾಕ್ನಿಂದ ಸಂಗ್ರಹ
ಜಿಲ್ಲೆಯಲ್ಲಿ ಮರಳು ಸಂಗ್ರಹಕ್ಕೆ ಒಟ್ಟು 33 ಬ್ಲಾಕ್ಗಳನ್ನು ನಾವು ಗುರುತಿಸಿದ್ದೆವು. ಅದರಲ್ಲಿ ಐದು ಬ್ಲಾಕ್ಗಳನ್ನು ಗುತ್ತಿಗೆ ನೀಡಲಾಗಿದೆ. ಬೇಲೂರು ಬ್ಲಾಕ್ ಗುತ್ತಿಗೆ ಪಡೆದಿರುವವರು ಇನ್ನೂ ಯಂತ್ರೋಪಕರಣ ಹಾಕಿಲ್ಲ. ಉಳಿದಂತೆ ಎರಡು ಬ್ಲಾಕ್ಗಳನ್ನು ಮರಳು ಸಾಗಾಣಿಕೆಗೆ ಹಾಗೂ ಇನ್ನೆರಡು ಬ್ಲಾಕ್ಗಳನ್ನು ಮರಳು ಸಂಗ್ರಹಕ್ಕಾಗಿ ಬಳಸುತ್ತಿದ್ದೇವೆ.

ಕೆಲವು ಕಡೆ ರಾತ್ರಿ ವೇಳೆಯಲ್ಲಿ ಮರಳು ಸಾಗಾಣಿಕೆ ನಡೆಯುತ್ತದೆ. ಗ್ರಾಮಸ್ಥರೂ ಅವರಿಗೆ ಸಹಾಯ ಮಾಡುವುದರಿಂದ ಸಮಸ್ಯೆಯಾಗುತ್ತಿದೆ. ನಿಯಂತ್ರಣಕ್ಕೆ ಸ್ಕ್ವಾಡ್ ರಚಿಸಿದ್ದರೂ ಅವರಿಗೇ ರಕ್ಷಣೆ ಇಲ್ಲದಿರುವುದರಿಂದ ದಾಳಿ ನಡೆಸಲು ಸ್ವಲ್ಪ ಹಿಂಜರಿಕೆಯಾಗುತ್ತದೆ
-ಹನುಮಂತ ರೆಡ್ಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ .

ಅಕ್ರಮವಾಗಿ ನದಿಯ ಒಡಲು ಬಗೆದು...
ಅಕ್ರಮ ಮರಳು ಗಣಿಗಾರಿಕೆಗೆ ಸರ್ಕಾರದ ಹೊಸ ಮರಳು ನೀತಿಯೇ ನೇರ ಕಾರಣ. ಕ್ಯೂಬಿಕ್ ಮೀಟರ್ ಲೆಕ್ಕದಲ್ಲಿ ಲಾರಿಗಳಿಗೆ ಮಾತ್ರ ಮರಳು ತುಂಬಿಸಿ ಬೆಂಗಳೂರು, ಮೈಸೂರಿನಂಥ ದೊಡ್ಡ ದೊಡ್ಡ ನಗರಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸ್ಥಳೀಯವಾಗಿ ಕಟ್ಟಡ ನಿರ್ಮಾಣ ಹಾಗೂ ಇತರ ಕಾಮಗಾರಿಗೆ ಈ ಲಾರಿಗಳು ಮರಳು ಪೂರೈಕೆ ಮಾಡುತ್ತಿಲ್ಲ.

ಟ್ರ್ಯಾಕ್ಟರ್ ಮೂಲಕವೂ ಮರಳು ಸರಬರಾಜಿಗೆ ಅವಕಾಶ ನೀಡಿಲ್ಲ. ಸ್ಥಳೀಯರ ಬೇಡಿಕೆ ಪೂರೈಸಲು ಕೆಲವು ಪ್ರಭಾವಿಗಳು ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಶಾಮೀಲಾಗಿ ರಾತ್ರಿ ಸಮಯದಲ್ಲಿ ಅಕ್ರಮ ನಡೆಸುತ್ತಿದ್ದಾರೆ.

ಹೇಮಾವತಿ ನದಿಯಿಂದ ಮರಳು ತೆಗೆಯುವುದಕ್ಕೆ ಸರ್ಕಾರದಿಂದ ಗುತ್ತಿಗೆ ಪಡೆದ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಸೇರಿಕೊಂಡು ದೊಡ್ಡ ದೊಡ್ಡ ಯಂತ್ರಗಳ ಮೂಲಕ ಅಕ್ರಮವಾಗಿ ನದಿಯ ಒಡಲು ಬಗೆದು ಮರಳು ತೆಗೆಯುತ್ತಿದ್ದಾರೆ.
- ಅರುಣ್ ರಕ್ಷಿದಿ, ಸಕಲೇಶಪುರದ ಜನಸ್ಪಂದನ ವೇದಿಕೆ ಅಧ್ಯಕ್ಷ .

ದಿನಕ್ಕೊಂದು ಬೆಲೆ
ಜಿಲ್ಲಾಡಳಿತ ನಿಗದಿ ಮಾಡಿರುವ ದರಕ್ಕೆ ಒಂದು ಲೋಡ್ ಮರಳನ್ನೂ ತರಲು ಸಾಧ್ಯವಿಲ್ಲ. ಮರಳಿಗೆ ದಿನಕ್ಕೊಂದು ಬೆಲೆ, ಗುಣಮಟ್ಟ ಕೇಳುವಂತಿಲ್ಲ.
ಇದರಿಂದಾಗಿ ಒಪ್ಪಿಕೊಂಡ ದರಕ್ಕೆ ಯಾವ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗದೆ, ಕಾಮಗಾರಿ ಗುತ್ತಿಗೆ ನೀಡಿದವರು ಮತ್ತು ನಮ್ಮ ನಡುವೆ ಸಂಘರ್ಷವಾಗುತ್ತಿದೆ. ಮರಳಿನ ದರದ ಬಗ್ಗೆಯಾಗಲಿ, ಗುಣಮಟ್ಟದ ಬಗ್ಗೆಯಾಗಲಿ ಪ್ರಶ್ನಿಸುವ ಸ್ಥಿತಿಯಲ್ಲಿ ನಾವ್ಯಾರೂ ಇಲ್ಲ. ಎಲ್ಲ ತಿಳಿದಿದ್ದರೂ ಜಿಲ್ಲಾಡಳಿತ ಸುಮ್ಮನಿದೆ
- ರವಿ ಎಂ.ಆರ್, ಸಿವಿಲ್ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.