ಭಾನುವಾರ, ಜೂನ್ 13, 2021
24 °C

ಹಿರಿಯರ ಅಥ್ಲೆಟಿಕ್ಸ್‌ ಕೂಟದಲ್ಲಿ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ:   ಕೊಯ­ಮತ್ತೂರಿ­ನಲ್ಲಿ ಇತ್ತೀಚೆಗೆ ನಡೆದ 35ನೇ ರಾಷ್ಟ್ರ­ಮಟ್ಟದ ಹಿರಿಯರ ಅಥ್ಲೆಟಿಕ್ಸ್ ಕೂಟ­ದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಪಟ್ಟಣದ ಹಿರಿಯ ಕ್ರೀಡಾಪಟು ಕೆ. ಮಂಜುನಾಥ 60 ವರ್ಷಕ್ಕಿಂತ ಅಧಿಕ ವಯೋಮಾನದವರ ವಿಭಾಗದಲ್ಲಿ 5 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ. ವಿವಿಧ ವಯೋಮಾನದವರ ಸ್ಪರ್ಧೆ­ಗ­ಳಲ್ಲಿ ಪಟ್ಟಣದ ಎಚ್.ಆರ್. ಶಂಕರ್ ಷಾಟ್‌ಪಟ್‌ನಲ್ಲಿ, ಪೂಜಮ್ಮ 5 ಕಿ.ಮೀ. ನಡಿಗೆಯಲ್ಲಿ ಹಾಗೂ ಸುಶೀಲಾಮೂರ್ತಿ ಡಿಸ್ಕಸ್ ಥ್ರೋದಲ್ಲಿ ಕಂಚಿನ ಪದಕ ಪಡೆ­ದಿದ್ದಾರೆ.ವಿಜೇತ­ರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಿರಿಯ ಕ್ರೀಡಾಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಷಣ್ಮುಗಂ ಅಭಿನಂದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.