ಶನಿವಾರ, ಜನವರಿ 18, 2020
21 °C

ಹೀಗೊಂದು ವಿನೂತನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಪ್ರೇಮದ ಸಂದೇಶ ಸಾರಿದ ಏಸುಕ್ರಿಸ್ತನ ಹುಟ್ಟುಹಬ್ಬ ಹಾಗೂ ಹೊಸ ವರ್ಷಾಚರಣೆಯನ್ನು ಹೊಸೂರು ರಸ್ತೆಯಲ್ಲಿರುವ ಬಾಲ್ಡ್‌ವಿನ್ ಮೆಥಡಿಸ್ಟ್ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ವಿದ್ಯಾರ್ಥಿಗಳು ನಾಟಕ ಹಾಗೂ ರೂಪಕಗಳ ಮೂಲಕ ಶಾಂತಿ ಹಾಗೂ ಪ್ರೀತಿಯ ಮಹತ್ವವನ್ನು ಹೃದಯ ತಟ್ಟುವಂತೆ ಪ್ರಸ್ತುತಪಡಿಸಿದರು.ಸಾಮಾನ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಮನರಂಜನೆ, ಫ್ಯಾಷನ್‌ಗೆ ಹೆಚ್ಚು ಮುಗಿಬೀಳುತ್ತಾರೆ. ಇದಕ್ಕೆ ಭಿನ್ನ ಎಂಬಂತೆ ಇದ್ದಾರೆ ಬಾಲ್ಡ್‌ವಿನ್ ಮೆಥಾಡಿಸ್ಟ್ ಕಾಲೇಜು ವಿದ್ಯಾರ್ಥಿಗಳು.

 

ಜಗತ್ತಿನ ಹಲವೆಡೆ ಇಂದು ಭಯೋತ್ಪಾದನೆ ಜನರ ನೆಮ್ಮದಿ ಕೆಡಿಸಿದೆ. ಮತ್ತೊಂದೆಡೆ ದೇಶ ದೇಶಗಳ ನಡುವೆ ಸಂಘರ್ಷ ಹೆಚ್ಚಲು ಸಹ ಇದೇ ಭಯೋತ್ಪಾದನೆ ಕಾರಣವಾಗುತ್ತಿದೆ. ಇದಕ್ಕೆಲ್ಲ ಮೂಲ ಬೇಕಿರುವುದು ನಮ್ಮಲ್ಲಿ ಶಾಂತಿ ಮನೋಭಾವ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಮನಮುಟ್ಟುವಂತೆ ಸಾರಿದರು.ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುವುದು ಇಂದಿನ ಜಾಯಮಾನ. ಇಲ್ಲಿ ಅದಕ್ಕೆ ವಿಶೇಷ ಮಹತ್ವ ಸಿಗಲಿಲ್ಲ. ವಿವಿಧ ವಿನ್ಯಾಸದಲ್ಲಿ ಕ್ರಿಸ್ಮಸ್ ಟ್ರೀ ಪ್ರದರ್ಶನ, ಸಾಂತಾಕ್ಲಾಸ್ ಮೊದಲಾದ ಆಕರ್ಷಣೆಗಳೂ ಇದ್ದವು. 

 

 

 

ಪ್ರತಿಕ್ರಿಯಿಸಿ (+)