ಶನಿವಾರ, ಏಪ್ರಿಲ್ 17, 2021
32 °C

ಹುಟ್ಟಿಗೆ ಸಾವು ಅಂಟಿಕೊಂಡ ನಂಟು: ತೋಂಟದ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಪ್ರತಿಯೊಂದು ಜೀವಿಗೂ ಹೊಟ್ಟೆಗೆ ಬೆನ್ನು ಅಂಟಿಕೊಂಡ ರೀತಿಯಲ್ಲಿ ಹುಟ್ಟಿಗೆ ಸಾವು ಕೂಡ ಅಂಟಿಕೊಂಡಿರುತ್ತದೆ. ಆದರೆ, ಸಾಯುವ ಪೂರ್ವದಲ್ಲಿ ನಾವು ಹೇಗೆ ಬದುಕು ಸಾಗಿಸಿದೇವು ಅನ್ನುವುದು ಬಹಳ ಮುಖ್ಯ ಎಂದು ಗದುಗಿನ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.ಸೋಮವಾರ ಇಲ್ಲಿನ ಮೈಸೂರ ಮಠದಲ್ಲಿ ಸ್ಥಳೀಯ ಬಸವ ಕೇಂದ್ರ ಏರ್ಪಡಿಸಿದ್ದ ಉದ್ಯಮಿ ಶರಣಬಸಪ್ಪ ನಂದಿಹಾಳ ಅವರ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹುಟ್ಟು ಆಕಸ್ಮಿಕ. ಸಾವು ನಿಶ್ಚಿತ. ಆದರೆ, ಹುಟ್ಟು ಸಾವುಗಳ ನಡುವೆ ಸಾಗುವ ಜೀವನ ಇತರರಿಗೆ ಮಾದರಿ ಆಗಬೇಕು. ಒಂದು ಊರು ಎಂದರೆ ಕೇವಲ ಅಲ್ಲಿನ ಮಣ್ಣು, ಕಲ್ಲು, ನೀರು, ಗಿಡಗಂಟೆಗಳಲ್ಲ. ಅಲ್ಲಿ ಆದರ್ಶ ಬದುಕು ಸಾಗಿಸಿ ಅನ್ಯರಿಗೆ ಮಾರ್ಗ ದರ್ಶಕವಾಗುವ ಸಚ್ಚಾರಿತ್ರ್ಯವಂತರು. ಅಂಥವರಿಂದ ಊರಿಗೆ ಒಳ್ಳೆಯ ಹೆಸರು ಬರಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಬುದ್ಧ, ಬಸವ, ಗಾಂಧೀ, ಜಯಪ್ರಕಾಶ ನಾರಾಯಣ ಮತ್ತಿತರ ಮಹಾನ್ ವ್ಯಕ್ತಿಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಅವರು ಹೇಳಿದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಚಿಂಚಣಿ ಅಲ್ಲಮಪ್ರಭು ಸ್ವಾಮಿಗಳು ಮಾತನಾಡಿ, ಉದ್ಯಮಿ ಶರಣಬಸಪ್ಪ ನಂದಿಹಾಳ ಅವರು ಸಮಾಜ ಮುಖಿಗಳಾಗಿದ್ದರು. ಸರ್ವ ಧರ್ಮದ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದರು. ಇದೇ ಸಂದರ್ಭದಲ್ಲಿ ಉದ್ಯಮಿ ಶರಣಬಸಪ್ಪ ನಂದಿಹಾಳ ಅವರ ಸ್ಮರಣೋತ್ಸವ ನಿಮಿತ್ತ ಅವರ ಕುಟುಂಬ ವರ್ಗದವರು ಗದುಗಿನ ತೋಂಟದಾರ್ಯ ಮಠದಲ್ಲಿ ಪ್ರತಿ ವರ್ಷ ಒಂದು ದಿನ ಅವರ ಹೆಸರಿನಲ್ಲಿ ಶಿವಾನುಭವ ನಡೆಸಲು ಒಂದು ಲಕ್ಷ ರೂಪಾಯಿಗಳನ್ನು ದೇಣಿಗೆ ಕೊಡುವುದಾಗಿ ಘೋಷಿಸಿದರು.ವೀರಶೈವ ಸಮಾಜದ ಅಧ್ಯಕ್ಷ ಬಿ.ಎಂ.ಸಜ್ಜನರ, ಉಪಾಧ್ಯಕ್ಷ ಸಿದ್ದಣ್ಣ ಬಂಡಿ, ಡಾ.ಬಿ.ಎಂ.ಕಂಬಳ್ಯಾಳ ಮಾತನಾಡಿದರು. ವೇದಿಕೆಯಲ್ಲಿ ದಿ ಲಕ್ಷ್ಮಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಸಂಗನಬಸಪ್ಪ ಹಿರೇಮನಿ, ವೀರೇಶ ನಂದಿಹಾಳ ಉಪಸ್ಥಿತರಿದ್ದರು. ಬಸವರಾಜ ಕೊಟಗಿ ಸ್ವಾಗತಿಸಿದರು. ಮಹಾಂತೇಶ ಮಳಗಿ ವಂದಿಸಿದರು. ಅಶೋಕ ಹೊನವಾಡ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.