ಹುಬ್ಬಳ್ಳಿಯಲ್ಲಿ ವಿಮಾನ ಅಪಹರಣದ ಸಂಚು?

7

ಹುಬ್ಬಳ್ಳಿಯಲ್ಲಿ ವಿಮಾನ ಅಪಹರಣದ ಸಂಚು?

Published:
Updated:
ಹುಬ್ಬಳ್ಳಿಯಲ್ಲಿ ವಿಮಾನ ಅಪಹರಣದ ಸಂಚು?

ಹುಬ್ಬಳ್ಳಿ: ಉಗ್ರರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಮಾನ ಅಪಹರಿಸಲು ಸಂಚು ನಡೆಸಿದ್ದಾರೆ ಎಂಬ ಸುಳಿವು ಸಿಕ್ಕಿದ್ದರಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.ಉಗ್ರರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಮಾನವೊಂದನ್ನು ಅಪಹರಿಸಿ, ಅದರಿಂದ ಮುಂಬೈನ ಛತ್ರಪತಿ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಸಂಚು ನಡೆಸಿದ್ದಾರೆಂಬ ಕೇಂದ್ರ ಗುಪ್ತಚರ ಮೂಲಗಳು ತಿಳಿಸಿದ ಹಿನ್ನೆಲೆಯಲ್ಲಿ ಈ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಕಳೆದ ಒಂದು ವಾರದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಿಗಿ ಬಂದೂಬಸ್ತ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಪ್ರಜಾವಾಣಿಗೆ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry