ಭಾನುವಾರ, ಜೂನ್ 20, 2021
29 °C
ಲಕ್ಷ ಲಿಂಗಾರ್ಚನೆಗೆ ವಿಶ್ವೇಶ್ವರ ತೀರ್ಥರು

ಹೆಚ್ಚಿದ ಅಶಾಂತಿ: ಪೇಜಾವರ ಶ್ರೀ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮನುಷ್ಯರಲ್ಲಿ ಮಿತಿ ಮೀರಿದ ಆಸೆ ಹೆಚ್ಚುತ್ತಿರುವು­ದರಿಂದ ಸಮಾಜದಲ್ಲಿ ಅಶಾಂತಿ ಹೆಚ್ಚುತ್ತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ರಾಬರ್ಟಸನ್‌ಪೇಟೆ ಆರ್ಯವೈಶ್ಯ ಮಂಡಳಿ ಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಲಕ್ಷ ಲಿಂಗಾರ್ಚನೆ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿ, ದೇವರ ಧ್ಯಾನ ಮತ್ತು ಸಾತ್ವಿಕ ನಡವಳಿಕೆಗಳಿಂದ ಸಮಾಜವನ್ನು ಸರಿದಾರಿಗೆ ತರಬಹುದು. ಮನದಲ್ಲಿ ಶಿವ ಧ್ಯಾನ ಮೂಡಿ ಬರಬೇಕು. ಎಲ್ಲರ ಬದುಕು ಹಸನಾಗಬೇಕು. ದಾನ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಸಂತೃಪ್ತ ಜೀವನ ನಡೆಸಬಹುದು ಎಂದು ಕಿವಿಮಾತು ಹೇಳಿದರು.ಆರ್ಯವೈಶ್ಯ ಮಂಡಳಿಯವರು ಮಣ್ಣು ಮತ್ತು ಸ್ಪಟಿಕದಿಂದ ಮಾಡಿದ ಸುಮಾರು ಒಂದೂವರೆ ಲಕ್ಷ ಶಿವಲಿಂಗಗಳ ದರ್ಶನ ಮಾಡಿದ ಅವರು, ಮಹಾರುದ್ರ ಯಾಗದ ಅಗ್ನಿಗೆ ಪೂರ್ಣಾಹುತಿ ನೀಡಿದರು.ಸುಮಾರು ಎರಡು ತಿಂಗಳಿನಿಂದ ಆರ್ಯವೈಶ್ಯ ಸಮುದಾಯದವರು ಮನೆಗಳಲ್ಲಿಯೇ ಜೇಡಿ ಮಣ್ಣಿನಲ್ಲಿ ರೂಪಿಸಿದ್ದ ಶಿವಲಿಂಗಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.  ಮುಖಂಡರಾದ ಚಂದ್ರಶೇಖರ­ಶೆಟ್ಟಿ, ಕೋದಂಡರಾಮ­ಶೆಟ್ಟಿ, ನರಸಿಂಹಗುಪ್ತ, ವಾಣಿ ಶ್ರೀಧರ್‌, ಕಾರ್ತಿಕ್‌  ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.