ನವದೆಹಲಿ (ಪಿಟಿಐ): 4.4 ಮೆಗಾಹರ್ಟ್ಸ್ಗಿಂತ ಮೇಲ್ಪಟ್ಟ ತರಂಗಾಂತರ ಹಂಚಿಕೆಯನ್ನು ಇನ್ನು ಮುಂದೆ ಹರಾಜಿನ ಮೂಲಕ ನಡೆಸಲು ಸರ್ಕಾರ ನಿರ್ಧರಿಸಿದ್ದು, ಈ ಕ್ರಮದಿಂದ ಹಿಂದಿನ ಜಿಎಸ್ಎಂ ನಿರ್ವಾಹಕರಿಗೆ ಭಾರಿ ಲಾಭವಾಗಲಿದೆ.

ದೂರಸಂಪರ್ಕ ಆಯೋಗವು ಹೊಸ ನಿರ್ವಾಹಕರಿಗೆ ಶುಲ್ಕ ವಿಧಿಸಲು ನಿರ್ಧರಿಸಿದೆ. 4.4 ಮೆಗಾಹರ್ಟ್ಸ್ಗಿಂತ ಮೇಲ್ಪಟ್ಟ ಹೆಚ್ಚುವರಿ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಬೇಕಾಗುತ್ತದೆ. ಟಾಟಾಸ್, ಆರ್ಕಾಂ, ಸಿಸ್ಟೆಮಾ ಶ್ಯಾಂ, ಯುನಿನಾರ್ ಹಾಗೂ ಇತರ ಹೊಸ ನಿರ್ವಾಹಕರು ಈ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರಿಗೆ ಪತ್ರ ಬರೆದಿದ್ದರು.

4.4 ಮೆಗಾಹರ್ಟ್ಸ್ ಮೇಲ್ಪಟ್ಟ ಹೆಚ್ಚುವರಿ ತರಂಗಾಂತರಗಳಿಗೆ ಶುಲ್ಕ ವಿಧಿಸುವುದು ತಾರತಮ್ಯದ ಕ್ರಮವಾಗುತ್ತದೆ ಎಂದು ಆಕ್ಷೇಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.