ಕಲ್ಯಾಣಿ (ಪಶ್ಚಿಮ ಬಂಗಾಳ): ಅಖಿಬ್ ನಬಿ ಅವರ ಸ್ಮರಣೀಯ ಆಲ್ರೌಂಡ್ ಆಟದಿಂದ ಜಮ್ಮು ಮತ್ತು ಕಾಶ್ಮೀರ ತಂಡ ಚಾರಿತ್ರಿಕ ಫೈನಲ್ ತಲುಪುವ ಹೊಸ್ತಿಲಲ್ಲಿದೆ. ಪಶ್ಚಿಮ ಬಂಗಾಳ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಗೆಲುವಿಗೆ 126 ರನ್ಗಳ ಗುರಿ ಎದುರಿಸಿರುವ ತಂಡ ಮೂರನೇ ದಿನದಾಟದ ಕೊನೆಗೆ 2 ವಿಕೆಟ್ಗೆ 43 ರನ್ ಗಳಿಸಿದೆ.

ತಂಡ ಎಂಟು ವಿಕೆಟ್ಗಳನ್ನು ಹೊಂದಿದ್ದು, ಗೆಲುವಿಗೆ ಇನ್ನು 83 ರನ್ ಗಳಿಸಬೇಕಾಗಿದೆ. ಜಮ್ಮು –ಕಾಶ್ಮೀರ ತಂಡ ಹಿಂದೆಂದೂ ಫೈನಲ್ ತಲುಪಿಲ್ಲ.

ಕೆಳ ಕ್ರಮಾಂಕದಲ್ಲಿ ಆಕ್ರಮಣಕಾರಿ 42 ರನ್ ಗಳಿಸಿದ ನಬಿ, ನಂತರ 36 ರನ್ನಿಗೆ 4 ವಿಕೆಟ್ (ಪಂದ್ಯದಲ್ಲಿ ಒಟ್ಟಾರೆ 9 ವಿಕೆಟ್) ಪಡೆದು ತಮ್ಮ ತಂಡಕ್ಕೆ ನಿರ್ಣಾಯಕ ಮೇಲುಗೈ ಒದಗಿಸಿದರು.

ಭಾರತ ತಂಡದ ಮಾಜಿ ವೇಗಿ ಮೊಹಮ್ಮದ್ ಶಮಿ ಅವರ ಅಮೋಘ ಬೌಲಿಂಗ್ (22.1–3–90–8) ನೆರವಿನಿಂದ ಬಂಗಾಳ ತಂಡ, ಎದುರಾಳಿಯನ್ನು 302 ರನ್ಗಳಿಗೆ ಆಲೌಟ್ ಮಾಡಿ 26 ರನ್ಗಳ ಮುನ್ನಡೆ ಪಡೆದಿತ್ತು. ಆದರೆ ಜಮ್ಮು ಕಾಶ್ಮೀರ ತಿರುಗೇಟು ನೀಡಿ ಬಂಗಾಳವನ್ನು 99 ರನ್ಗಳಿಗೆ ಉರುಳಿಸಿತು. ನಬಿ ಜೊತೆಗೆ ಎಡಗೈ ವೇಗಿ ಸುನೀಲ್ ಕುಮಾರ್ 27 ರನ್ಗಳಿಗೆ 4 ವಿಕೆಟ್ ಪಡೆದರು. ಬಂಗಾಳ 25.1 ಓವರುಗಳಲ್ಲಿ ಕುಸಿಯಿತು.

ಸಂಕ್ಷಿಪ್ತ ಸ್ಕೋರು: ಪಶ್ಚಿಮ ಬಂಗಾಳ: 328 ಮತ್ತು 25.1 ಓವರುಗಳಲ್ಲಿ 99 (ಶಾಬಾಜ್ ಅಹ್ಮದ್ 24; ಅಖಿಬ್ ನಬಿ 36ಕ್ಕೆ4, ಸುನೀಲ್ ಕುಮಾರ್ 27ಕ್ಕೆ4. ಯುದ್ಧವೀರ ಸಿಂಗ್ 29ಕ್ಕೆ2); ಜಮ್ಮು ಮತ್ತು ಕಾಶ್ಮೀರ: 302 (ಅಖಿಬ್ ನಬಿ 42, ಯುದ್ಧವೀರ್ ಸಿಂಗ್ 33; ಮೊಹಮ್ಮದ್ ಶಮಿ 90ಕ್ಕೆ8, ಮುಕೇಶ್ ಕುಮಾರ್ 78ಕ್ಕೆ2) ಮತ್ತು 13 ಓವರುಗಳಲ್ಲಿ 2ಕ್ಕೆ 43 (ಆಕಾಶ್ ದೀಪ್ 12ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.