ಭಾನುವಾರ, ಮೇ 22, 2022
28 °C

ಹೆರಿಗೆ ಆಸ್ಪತ್ರೆಗೆ ಮಹಿಳಾ ವೈದ್ಯರಿಲ್ಲ

-ವರ್ತೂರು ಎಂ. ಲಚ್ಚಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಒಂದು ಹೋಬಳಿ ಕೇಂದ್ರವಾಗಿದ್ದು, ಈ ಊರಿನ ಜನಸಂಖ್ಯೆ ಸುಮಾರು ಹದಿನೆಂಟು ಸಾವಿರವಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆ ಇದೆ. ಈ ಹೆರಿಗೆ ಆಸ್ಪತ್ರೆಯಲ್ಲಿ ಇದ್ದ ಮಹಿಳಾ ವೈದ್ಯರು ವರ್ಗಾವಣೆಯಾಗಿ ಎರಡು ವರ್ಷಗಳಾದರೂ ಇದುವರೆಗೂ ಹೊಸಬರನ್ನು ನೇಮಿಸಿಲ್ಲ.ಹೀಗಾಗಿ ಪುರುಷ ವೈದ್ಯರೇ ಇಲ್ಲಿನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಅವರು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರೂ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿದ್ದರೆ ಮಹಿಳೆಯರಿಗೆ ಅನುಕೂಲ. ಆದ್ದರಿಂದ ಆರೋಗ್ಯ ಸಚಿವರು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳಾ ವೈದ್ಯರನ್ನು ನೇಮಕ ಮಾಡಬೇಕಾಗಿ ವಿನಂತಿ.

-ವರ್ತೂರು ಎಂ. ಲಚ್ಚಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.