ಹಾಸನ: ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳ 6.95 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಶನಿವಾರದಿಂದ ಹೆಚ್ಚುವರಿ ನೀರನ್ನು ಆರು ಕ್ರೆಸ್ಟ್ ಗೇಟ್ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ.

ಗರಿಷ್ಠ 2922 ಅಡಿಗಳ ಈ ಜಲಾಶಯದಲ್ಲಿ ಶನಿವಾರ 2921.35 ಅಡಿ ನೀರು ತುಂಬಿದೆ. ಸುಮಾರು 18 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇರುವುದರಿಂದ 8 ಸಾವಿರ ಕ್ಯೂಸೆಕ್ ನೀರನ್ನು ಶನಿವಾರ ನದಿಗೆ ಬಿಡಲಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ತಿಳಿಸಿದ್ದಾರೆ. ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವು ದರಿಂದ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಒಮ್ಮೆ ನೀರಿನ ಸಂಗ್ರಹ ಗರಿಷ್ಠ 2020 ಅಡಿಗೆ ಏರಿದ್ದರೂ ನಂತರ ಮಳೆ ಕಡಿಮೆಯಾಗಿ ನೀರಿನ ಮಟ್ಟ ಕಡಿಮೆಯಾಗಲು ಆರಂಭವಾಗಿತ್ತು. ಇತ್ತ ಬೇಲೂರಿನ ಯಗಚಿ ಜಲಾಶಯವೂ ಶುಕ್ರವಾರ ಭರ್ತಿಯಾಗಿದ್ದು ಜಿಲ್ಲೆಯ ಮೂರೂ ಜಲಾಶಯಗಳು ತುಂಬಿದಂತಾಗಿದೆ.

ಹೇಮಾವತಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಸೋಮವಾರ (ಸೆ.5) ಬೆಳಿಗ್ಗೆ 11.30ಕ್ಕೆ ಜಲಾಶಯಕ್ಕೆ ಬಾಗಿನ ಅರ್ಪಿಸುವರು. ಅದೇ ದಿನ ಸಂಜೆ ಅವರು ಯಗಚಿ ಜಾಲಾಶಯಕ್ಕೂ ಬಾಗಿನ ಅರ್ಪಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.