ಹೈದರಾಬಾದ್-ಕೊಲ್ಲಾಪುರ ವಿಶೇಷ ರೈಲು ಮುಂದುವರಿಕೆ

ಬುಧವಾರ, ಮೇ 22, 2019
29 °C

ಹೈದರಾಬಾದ್-ಕೊಲ್ಲಾಪುರ ವಿಶೇಷ ರೈಲು ಮುಂದುವರಿಕೆ

Published:
Updated:

ಹುಬ್ಬಳ್ಳಿ: ಹೈದರಾಬಾದ್-ಕೊಲ್ಲಾಪುರ-ಹೈದರಾಬಾದ್ (ನಂ. 07143/07144) ವಿಶೇಷ ಎಕ್ಸ್‌ಪ್ರೆಸ್ ರೈಲು (ವಾರಕ್ಕೆ ನಾಲ್ಕು ಬಾರಿ) ಸಂಚಾರವನ್ನು ಅಕ್ಟೋಬರ್ 12ರವರೆಗೆ ಮುಂದುವರಿಸಲು ನೈರುತ್ಯ ರೈಲ್ವೆ ವಲಯ ಕಚೇರಿ ನಿರ್ಧರಿಸಿದೆ.ಪ್ರತಿ ಮಂಗಳವಾರ, ಬುಧವಾರ, ಶನಿವಾರ ಹಾಗೂ ಭಾನುವಾರ ದಿನಗಳಂದು ಈ ರೈಲು ಸಂಚರಿಸುತ್ತದೆ. ರಾತ್ರಿ 11.10ಕ್ಕೆ ಹೈದರಾಬಾದ್‌ನಿಂದ ಹೊರಡುವ ಈ ರೈಲು ಮರುದಿನ ಬೆಳಿಗ್ಗೆ ಯಾದಗಿರಿ (ಬೆಳಿಗ್ಗೆ 3.29), ನಾರಾಯಣಪೇಟೆ ರಸ್ತೆ (ಬೆ 3.49), ರಾಯಚೂರು (ಬೆ 4.54), ಗುಂತಕಲ್ (ಬೆ 7.49), ಬಳ್ಳಾರಿ (ಬೆ. 8.54), ತೋರಣಗಲ್ಲು (ಬೆ. 9.36), ಹೊಸಪೇಟೆ (ಬೆ 10.24), ಕೊಪ್ಪಳ (ಬೆ 11.04), ಗದಗ (ಮಧ್ಯಾಹ್ನ 12.01), ಹುಬ್ಬಳ್ಳಿ (ಮ 1.59), ಧಾರವಾಡ (ಮ 2.34), ಲೋಂಡಾ (ಸಂಜೆ 4.14), ಬೆಳಗಾವಿ (ಸಂಜೆ 5.30), ಘಟಪ್ರಭಾ (ರಾತ್ರಿ 7.29), ರಾಯಬಾಗ (ರಾ 7.59), ಮೀರಜ್ (ರಾ 9.20) ಮೂಲಕ  ರಾತ್ರಿ 10.45ಕ್ಕೆ ಕೊಲ್ಲಾಪುರ ನಿಲ್ದಾಣವನ್ನು ಸೇರಲಿದೆ.ಕೊಲ್ಲಾಪುರದಿಂದ ವಾಪಸು ಈ ರೈಲು ಪ್ರತಿ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ದಿನಗಳಲ್ಲಿ ಬೆಳಿಗ್ಗೆ 7.30ಕ್ಕೆ ಹೊರಡಲಿದೆ. ಮೀರಜ್ (ಬೆ 8.30), ರಾಯಬಾಗ (ಬೆ 9.48), ಘಟಪ್ರಭಾ (ಬೆ 10.33), ಬೆಳಗಾವಿ (ಬೆ 11.55), ಲೋಂಡಾ (ಮಧ್ಯಾಹ್ನ 1.18), ಧಾರವಾಡ (ಮ 3.05), ಹುಬ್ಬಳ್ಳಿ (ಸಂಜೆ 4.05), ಗದಗ (ಸ 5.23), ಕೊಪ್ಪಳ (ಸ 6.28), ಹೊಸಪೇಟೆ (ರಾತ್ರಿ 7.03), ತೋರಣಗಲ್ಲು (ರಾ 7.43), ಬಳ್ಳಾರಿ (ರಾ 9.30), ರಾಯಚೂರು (ರಾ 11.38), ನಾರಾಯಣ ಪೇಟೆ ರಸ್ತೆ (ಮಧ್ಯರಾತ್ರಿ 12.20), ಯಾದಗಿರಿ (ಮರುದಿನ ಬೆಳಿಗ್ಗೆ 1.38) ಮೂಲಕ ಬೆಳಿಗ್ಗೆ 6.45ಕ್ಕೆ ಹೈದರಾಬಾದ್ ನಿಲ್ದಾಣವನ್ನು ಸೇರುವುದು ಎಂದು ಪ್ರಕಟಣೆ ತಿಳಿಸಿದೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry