ಶನಿವಾರ, ಫೆಬ್ರವರಿ 27, 2021
19 °C

ಹೊಸಕೋಟೆ: ಅರಸು ರಥಯಾತ್ರೆಗೆ ಭವ್ಯ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಅರಸು ರಥಯಾತ್ರೆಗೆ ಭವ್ಯ ಸ್ವಾಗತ

ಹೊಸಕೋಟೆ: ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಅಂಗವಾಗಿ  ಕೋಲಾರ ಜಿಲ್ಲೆಯ ಮಾಲೂರಿನಿಂದ ಗುರುವಾರ ಪಟ್ಟಣಕ್ಕೆ ಬಂದ ಅರಸು ಅವರ ರಥಯಾತ್ರೆಗೆ ಪೂರ್ಣಕುಂಭದ ಸ್ವಾಗತ ನೀಡಲಾಯಿತು.ತಾಲ್ಲೂಕಿನ ಗಡಿ ಭಾಗವಾದ ಕಟ್ಟಿಗೇನಹಳ್ಳಿ ಬಳಿ ಶಾಸಕ ಎನ್.ನಾಗರಾಜು, ಜಿಲ್ಲಾಧಿಕಾರಿ ಎಸ್.ಪಾಲಯ್ಯ ರಥವನ್ನು ಬರ ಮಾಡಿಕೊಂಡರು.

ಜನಪದ ಕಲಾ ತಂಡಗಳೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿದ ರಥವನ್ನು ತಾಲ್ಲೂಕು ಕಚೇರಿ ಆವರಣಕ್ಕೆ ತರಲಾಯಿತು.ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎನ್.ನಾಗರಾಜು ಅರಸು ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟ ಧೀಮಂತ ನಾಯಕ ಎಂದು ಬಣ್ಣಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.