ಭಾನುವಾರ, ಮೇ 22, 2022
21 °C

ಹೊಸ ಅರಣ್ಯ ಹಕ್ಕು ಕಾಯ್ದೆ ರಚಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮರಿ: ಅರಣ್ಯವಾಸಿಗಳಿಗೆ ಸಂವಿಧಾನಾತ್ಮಕ ರಕ್ಷಣೆ ನೀಡುವ ಅರಣ್ಯ ಹಕ್ಕು ಕಾಯ್ದೆ 2012ರ ಪರಿಷ್ಕೃತ ನಿಯಮಾವಳಿ ಪ್ರಕಾರ ಹೊಸದಾಗಿ ಅರಣ್ಯ ಸಮಿತಿ ರಚಿಸಿ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ಕಾರ್ಯಕರ್ತರು ತುಮರಿ ಗ್ರಾಮ ಪಂಚಾಯ್ತಿ ಎದುರು ಮಂಗಳವಾರ  ಪ್ರತಿಭಟನೆ ನಡೆಸಿದರು.ಒಕ್ಕೂಟದ ಅಧ್ಯಕ್ಷ ಮೋಹನ್ ಮಾತನಾಡಿ, ಕೇಂದ್ರ ಸರ್ಕಾರ 2006ರಲ್ಲಿ ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೆ ತಂದಿದೆ. ಆದರೆ, ಕರ್ನಾಟಕ ಸರ್ಕಾರ ಈ ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೆ ತರಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.ಒಕ್ಕೂಟದ ಕಾರ್ಯದರ್ಶಿ ಶ್ರೀಧರ ಮಾತನಾಡಿ, ಅರಣ್ಯ ಹಕ್ಕು ಕಾಯಿದೆಗೆ ಹೊಸ ತಿದ್ದುಪಡಿ ತರಲಾಗಿದೆ. ನೂತನ ನಿಯಮಾವಳಿಗಳ ಪ್ರಕಾರ ಸಮಿತಿ ಸದಸ್ಯರ ಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದವರಿಗೆ ಆದ್ಯತೆ ನೀಡಲಾಗಿದೆ.

ಅಧ್ಯಕ್ಷ ಸ್ಥಾನವೂ ಬುಡಕಟ್ಟು ಜನರಿಗೆ ಸಿಗಬೇಕಿದೆ ಎಂದರು. ಪಾರಂಪಾರಿಕ ಬುಡಕಟ್ಟು ಜನರಿಗೆ ಭೂಮಿಯ ಹಕ್ಕು ದೊರೆಯಲು ತಕ್ಷಣವೇ ಹೊಸ ಸಮಿತಿ ರಚಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮಿ ಶ್ರೀಪಾದ್ ಮನವಿ ಪತ್ರ ಸ್ವೀಕರಿಸಿದರು. ಗ್ರಾ.ಪಂ ಸದಸ್ಯ ಸಾಲೆಕೊಪ್ಪ ರಾಜಪ್ಪ ಹಾಜರಿದ್ದರು. ಚೌಡಪ್ಪ, ಚಂದ್ರು, ಚಂದ್ರಶೇಖರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.