ಶಿವಮೊಗ್ಗ: ಎಂ.ಎಸ್ಸಿ ಸಂಖ್ಯಾಶಾಸ್ತ್ರ ಕೋರ್ಸ್ ಆರಂಭ, ಪದವಿ ತರಗತಿಗಳಲ್ಲಿ ಎನ್ಸಿಸಿ ವಿಷಯ ಪಠ್ಯಕ್ರಮ ಅಳವಡಿಕೆ, ಎಂ.ಎಸ್ಸಿ ಫ್ಯಾಷನ್ ಕಮ್ಯುನಿಕೇಷನ್ ಕೋರ್ಸ್ನ ಪಠ್ಯಕ್ರಮ, ಬಿ.ಇಡಿ ಪಠ್ಯಕ್ರಮದಲ್ಲಿ ಸೆಮಿಸ್ಟರ್ ಪದ್ಧತಿಯ ಪಠ್ಯಕ್ರಮಕ್ಕೆ ಗುರುವಾರ ನಡೆದ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸಭೆ ಕೆಲವು ತಿದ್ದುಪಡಿ ಸೂಚಿಸಿ ಅನುಮೋದನೆ ನೀಡಿತು.

ಪದವಿ ತರಗತಿಗಳಲ್ಲಿ ಎನ್ಸಿಸಿ ಪಠ್ಯಕ್ರಮ ಅಳವಡಿಕೆ ಕುರಿತಂತೆ ಕೇಂದ್ರದ ಮಾನವ ಸಂಪನ್ಮೂಲ ವಿಭಾಗ ಒಪ್ಪಿಗೆ ಸೂಚಿಸಿದೆ. ಹಾಗೆಯೇ, ಪದವಿಯಲ್ಲಿ ಮೂರು ವಿಷಯಗಳಲ್ಲಿ ಎನ್ಸಿಸಿ ಒಂದು ವಿಷಯವನ್ನು ಕಡ್ಡಾಯ ಬೋಧಿಸಬೇಕಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ.ಬಾರಿ ತಿಳಿಸಿದರು.

ಹಾಗೆಯೇ, ದೂರ ಶಿಕ್ಷಣ ವಿಭಾಗದಲ್ಲಿ ಎರಡು ವರ್ಷಗಳ ಎಂ.ಎಸ್ಸಿ ಫ್ಯಾಷನ್ ಕಮ್ಯುನಿಕೇಷನ್ ಕೋರ್ಸ್ ಆರಂಭಿಸಲಾಗುವುದು. ಅಲ್ಲದೇ, ಬಿ.ಇಡಿ ಪಠ್ಯಕ್ರಮದಲ್ಲಿ ಸೆಮಿಸ್ಟರ್ ಪದ್ಧತಿಯ ಪಠ್ಯಕ್ರಮಕ್ಕೆ ಕೆಲವು ತಿದ್ದುಪಡಿ ತಂದು ಅಳವಡಿಸಿಕೊಳ್ಳಲು ಬಾರಿ ಅವರು ಸಂಬಂಧಪಟ್ಟ ನಿಕಾಯಗಳ ಡೀನರುಗಳಿಗೆ ಸೂಚಿಸಿದರು.

ಹಿಂದಿನ ಸಭೆ ನಡಾವಳಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯ ಎಸ್.ಬಿ.ಮಹಾದೇವ್, ಸಾಗರದ ಗುರುಕುಲ ತರಬೇತಿ ಕೇಂದ್ರದಲ್ಲಿನ ಸರ್ಟಿಫಿಕೇಟ್ ಕೋರ್ಸ್ನ ಜತೆಗೆ ಕರಕುಶಲ ಕಲೆಯ ಪದವಿ ಕೋರ್ಸ್ ಆರಂಭಿಸಲು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ ಎಂಬ ಮಾಹಿತಿ ಅಜೆಂಡಾದಲ್ಲಿ ಇದೆ. ಆದರೆ, ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎಸ್.ಎ.ಬಾರಿ, ಕೇಂದ್ರ ಸರ್ಕಾರದ ಕರಕುಶಲ ಮತ್ತು ಗುಡಿಕೈಗಾರಿಕೆ ವಿಭಾಗದ ನೆರವಿನಿಂದ ಜಂಟಿ ಸಹಭಾಗಿತ್ವದಲ್ಲಿ ಈ ಕೋರ್ಸ್ ಆರಂಭಿಸಲಾಗುವುದು. ಸಾಕಷ್ಟು ಜಾಗದ ಲಭ್ಯತೆ ಇದೆ ಎಂಬ ಮಾಹಿತಿ ಇದೆ. ಆದರೆ, ಇನ್ನೂ ಕೂಲಂಕಷವಾದ ಚರ್ಚೆ ನಡೆಯಬೇಕಾಗಿದೆ. ಆ ಸಂದರ್ಭದಲ್ಲಿ ನಿಮ್ಮ ಸಲಹೆ- ಸಹಕಾರಗಳನ್ನು ಪಡೆಯಲಾಗುವುದು ಎಂದು ಅವರಿಗೆ ಸ್ಪಷ್ಟನೆ ನೀಡಿದರು.

ಎನ್ಎಸ್ಎಸ್ ಶಿಬಿರದ ಕ್ಯಾಂಪ್ಗಳಿಗೆ ವಿಶ್ವವಿದ್ಯಾಲಯ ನಿಗದಿ ಮಾಡಿದ ರೂ35 ಸಾವಿರ ಕಡಿಮೆಯಾಗುತ್ತಿದೆ. ಇದನ್ನು ಹೆಚ್ಚಳ ಮಾಡಬೇಕು ಎಂದು ಸದಸ್ಯ ಪ್ರೊ.ಮುರುಳಿಧರ್ ಮನವಿ ಮಾಡಿದರು. ಬಾರಿ ಮಾತನಾಡಿ, ಇದನ್ನು ಸರ್ಕಾರ ನಿಗದಿಗೊಳಿಸಿದೆ; ನಿಮ್ಮ ಪ್ರಸ್ತಾವ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಚಿಕ್ಕಮಗಳೂರಿನಲ್ಲಿ ಪತ್ರಿಕೋದ್ಯಮ ವಿಷಯ, ಪದವಿ ತರಗತಿಗಳಲ್ಲಿ ಇನ್ನೂ ಅಳವಡಿಕೆಯಾಗಿಲ್ಲ. ಇದರ ಬಗ್ಗೆ ವಿಶ್ವವಿದ್ಯಾಲಯ ಕ್ರಮ ವಹಿಸಬೇಕು ಎಂದು ಸದಸ್ಯ ಬಿ.ಕುಮಾರೇಗೌಡ ಪ್ರಸ್ತಾಪಿಸಿದರು. ಚಿಕ್ಕಮಗಳೂರಿನಲ್ಲಿ ವಿವಿಯ ಸಂಯೋಜಿತ ಕಾಲೇಜು ಇಲ್ಲ. ಖಾಸಗಿ, ಸರ್ಕಾರಿ ಕಾಲೇಜುಗಳಲ್ಲಿ ಈ ವಿಷಯ ಅಳವಡಿಸಿಕೊಳ್ಳಿ ಎಂದು ವಿವಿ ಹೇಳಲು ಬರುವುದಿಲ್ಲ ಎಂದು ಬಾರಿ ಸ್ಪಷ್ಟನೆ ನೀಡಿದರು.

ಬೋಧಕ ಹುದ್ದೆ ಭರ್ತಿಗೆ ಕ್ರಮ: ದೂರ ಶಿಕ್ಷಣ ನಿರ್ದೇಶನಾಲಯಕ್ಕೆ ಕಾಯಂ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಭೆ ಸೂಚಿಸಿತು.

ಇಡೀ ರಾಜ್ಯದಲ್ಲಿ `ಡೆಕ್' ಅನುಮತಿ ಪಡೆದಿದ್ದು ಕುವೆಂಪು ವಿವಿ ದೂರ ಶಿಕ್ಷಣ ನಿರ್ದೇಶನಾಲಯ ಮಾತ್ರ. ಅದರ ಪ್ರಕಾರ ಈ ನಿರ್ದೇಶನಾಲಯಕ್ಕೆ ಕಾಯಂ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದುವರೆಗೂ ವಿಶ್ವವಿದ್ಯಾಲಯದ ಇತರೆ ಅಧಿಕಾರಿಗಳನ್ನೇ ಅಲ್ಲಿಗೆ ನಿಯೋಜನೆ ಮಾಡಲಾಗುತ್ತಿತ್ತು. ಈಗ ಸ್ವತಂತ್ರವಾಗಿ ದೂರ ಶಿಕ್ಷಣ ವಿಭಾಗ ನಿರ್ವಹಣೆ ಮಾಡಲು ಬೋಧಕ ಹುದ್ದೆ ಭರ್ತಿ ಮಾಡಿಕೊಳ್ಳಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.