ಶುಕ್ರವಾರ, ಏಪ್ರಿಲ್ 16, 2021
31 °C

ಹೊಸ ಮೈಲಿಗಲ್ಲು ತಲುಪಿದ ಮಾರುತಿ ಸುಜುಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ಪ್ರಮುಖ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ)  ಉತ್ಪಾದನೆಯಲ್ಲಿ 10 ದಶಲಕ್ಷ ಸಂಖ್ಯೆಯ ಮೈಲಿಗಲ್ಲನ್ನು ತಲುಪಿದೆ. ಉತ್ಪಾದನೆಯಲ್ಲಿ ಹೊಸ ಗಡಿ ತಲುಪಿದ 10 ದಶಲಕ್ಷದ   ‘ವ್ಯಾಗನ್-ಆರ್ ವಿಎಕ್ಸ್‌ಐ’ ಗುಡಗಾಂವ್ ತಯಾರಿಕಾ ಘಟಕದಿಂದ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.ಇದರೊಂದಿಗೆ ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ ಮೊದಲ ಭಾರತೀಯ ಕಾರು ತಯಾರಿಕಾ ಸಂಸ್ಥೆ  ಎನ್ನುವ ಹೆಗ್ಗಳಿಕೆಗೆ ಮಾರುತಿ ಸುಜುಕಿ ಇಂಡಿಯಾ ಪಾತ್ರವಾಗಿದೆ. ಟೋಯೊಟಾ, ಜನರಲ್ ಮೋಟಾರ್ಸ್, ಫೋಕ್ಸ್‌ವ್ಯಾಗನ್, ರೆನಾಲ್ಟ್, ಹೋಂಡಾ ಕಂಪೆನಿಗಳು ಈಗಾಗಲೇ ಈ ಗುರಿ  ತಲುಪಿವೆ.ಮಾರುತಿ ಸುಜುಕಿ 1983ರಲ್ಲಿ ಭಾರತದಲ್ಲಿ ಕಾರ್ಯರಂಭ ಮಾಡಿದ್ದು, ಭಾರತ ಸರ್ಕಾರ ಮತ್ತು ಜಪಾನಿನ ಸುಜುಕಿ ಮೋಟಾರ್ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಈ ಮೈಲಿಗಲ್ಲು ತಲುಪಿದ್ದೇವೆ. ಸಂಸ್ಥೆಯ ಸಂಸ್ಥಾಪಕರು ರೂಪಿಸಿದ ಭದ್ರ ತಳಪಾಯದ ಮೇಲೆ ನಾವು ಈ ಸಾಧನೆ ತಲುಪುತ್ತಿದ್ದೇವೆ’ ಎಂದು ‘ಎಂಎಸ್‌ಐ’ನ ವ್ಯವಸ್ಥಾಪಕ ನಿರ್ದೇಶಕ ಶಿಂಜೊ ನಕಾನಿಶಿ ತಿಳಿಸಿದ್ದಾರೆ.ಆದರೆ, ಜಪಾನ್‌ನಲ್ಲಿ ಭೂಕಂಪ ಹಾಗೂ ಸುನಾಮಿ ಸಂಭವಿಸಿರುವ ಹಿನ್ನೆಲೆಯಲ್ಲಿ, ಉತ್ಪಾದನೆಯು 1 ಕೋಟಿಗೆ ತಲುಪಿರುವ  ಐತಿಹಾಸಿಕ ಸಂಭ್ರಮಾಚರಣೆಯನ್ನು ಸಂಸ್ಥೆ ಸದ್ಯಕ್ಕೆ ಮುಂದೂಡಿದೆ. ‘ಎಂಎಸ್‌ಐ’ ಕಳೆದ ಆರು ವರ್ಷಗಳಲ್ಲಿ 5 ದಶಲಕ್ಷ ಕಾರುಗಳನ್ನು ತಯಾರಿಸಿದೆ. ಮೊದಲ ‘ಮಾರುತಿ 800’ ಮಾರುಕಟ್ಟೆಗೆ ಬಂದದ್ದು 1983 ಡಿಸೆಂಬರ್‌ನಲ್ಲಿ.1994ರಲ್ಲಿ ಸಂಸ್ಥೆಯು ಒಂದು ದಶಲಕ್ಷ ಉತ್ಪಾದನೆಯ ಮೈಲಿಗಲ್ಲನ್ನು ತಲುಪಿತು. 5 ದಶಲಕ್ಷ ಗುರಿ ತಲುಪಿದ್ದು 2005ರಲ್ಲಿ. ಸದ್ಯ   ದೇಶೀಯ ಮಾರುಕಟ್ಟೆಯಲ್ಲಿ ಶೇ 45ರಷ್ಟು ಪಾಲು ಹೊಂದಿರುವ ‘ಎಂಎಸ್‌ಐ’ ಪ್ರಯಾಣಿಕ ಕಾರುಗಳ 16 ಮಾದರಿಗಳನ್ನು ಹೊರತಂದಿದೆ. ಗುಡಗಾಂವ್ ಮತ್ತು ಮನೇಸರ್‌ನಲ್ಲಿರುವ ತಯಾರಿಕಾ ಘಟಕಗಳ ಮೂಲಕ ವಾರ್ಷಿಕ 12 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಸಂಸ್ಥೆ ಹೊಂದಿದೆ. ಮನೇಸರ್‌ನಲ್ಲಿರುವ ಹೆಚ್ಚುವರಿ ಘಟಕಗಳ ಮೂಲಕ ಉತ್ಪಾದನೆ ಗುರಿಯನ್ನು 17 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ ಎಂದು ನಕಾನಿಶಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.