ಭಾನುವಾರ, ಜೂನ್ 13, 2021
25 °C

ಹೋಟೆಲ್‌ ಮಾಲೀಕರ ಕತ್ತು ಕೊಯ್ದು ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಂಡಹಳ್ಳಿಯಲ್ಲಿ ಹೋಟೆಲ್ ಮಾಲೀಕ ರೊಬ್ಬರ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಬಿಹಾರ್ ಮೂಲದ ಆರ್.ಪಿ.ಸಿಂಗ್(46) ಕೊಲೆ ಯಾದವರು. ಆರ್.ಪಿ.ಸಿಂಗ್ ಕಳೆದ ಮೂರು ವರ್ಷ ಗಳಿಂದ ಹಿರಂಡಹಳ್ಳಿಯಲ್ಲಿ ಹೋಟೆಲ್ ನಡೆಸು ತ್ತಿದ್ದರು. ಹೋಟೆಲ್ ನಲ್ಲಿ ಒಬ್ಬ ನೇಪಾಳ ಹಾಗೂ ಇಬ್ಬರು ಬಿಹಾರ್ ಮೂಲದವರು ಕೆಲಸ ಮಾಡುತ್ತಿದ್ದರು. ಮಾಲೀಕ ಹಾಗೂ  ಕೆಲಸಗಾರರು ಹೋಟೆಲ್‌ನಲ್ಲಿಯೆ ಮಲಗುತ್ತಿದ್ದರು.ಮಂಗಳವಾರ ಎಂದಿನಂತೆ ಅವರು ಹೋಟೆಲ್ ವ್ಯವಹಾರ ನಡೆಸಿದ್ದರು. ಬುಧವಾರ ಹೋಟೆಲ್ ಮುಂಭಾಗದ ಸುಮಾರು 400 ಅಡಿ ದೂರದಲ್ಲಿನ ಪೊದೆಯಲ್ಲಿ ಆರ್.ಪಿ.ಸಿಂಗ್ ಅವರ ಶವ ಪತ್ತೆ ಯಾಗಿದೆ. ಅವರ ಕತ್ತನ್ನು ಹರಿತವಾದ ಆಯುಧ ದಿಂದ ಕೊಯ್ದು ಶವವನ್ನು ಚಾಪೆ, ಕಂಬಳಿಯಲ್ಲಿ ಸುತ್ತಿ ಹಾಕಿದ್ದರು. ಹೋಟೆಲ್‌ನಲ್ಲಿದ್ದ ಮೂವರು ಕೆಲಸಗಾರರು ನಾಪತ್ತೆಯಾಗಿರುವುದು ಅವರ ವಿರುದ್ಧದ ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಹುಶಃ ಹಣಕಾಸಿನ ವಿಚಾರದಲ್ಲಿ ಮಾಲೀಕ ಹಾಗು ಕೆಲಸಗಾರರ ಮಧ್ಯೆ ಜಗಳ ನಡೆದು ಮಂಗಳವಾರ ಮಧ್ಯರಾತ್ರಿ ಕೆಲಸ ಗಾರರು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀ ಸರು ಶಂಕಿಸಿದ್ದಾರೆ. ಹೋಟೆಲ್ ಕಟ್ಟಡದ ಮಾಲೀಕ ಕಾಳಪ್ಪ ಕೊಟ್ಟ ದೂರಿನ ಮೇರೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.ಒಡವೆ ಕಸಿದು ಪರಾರಿಯಾದ ದುಷ್ಕರ್ಮಿಗಳು

ಹೊಸಕೋಟೆ: ಸಹಾಯ ಮಾಡಲು ಹೋದ ವ್ಯಕ್ತಿ ಒಬ್ಬರನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಬೆದರಿಸಿ ಅವರ ಮೈಮೇಲಿದ್ದ ಚಿನ್ನದ ಒಡವೆಗಳನ್ನು ಕಸಿದು ಪರಾರಿಯಾದ ಘಟನೆ ಇಲ್ಲಿಗೆ ಸಮೀಪದ ಕಾಟಂನಲ್ಲೂರು ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಬೆಂಗಳೂರು ಕಾವಲ್ ಬೈರಸಂದ್ರದ ಲಕ್ಷ್ಮಣ್ ಸುಲಿಗೆಗೆ ಒಳಗಾದವರು. ಲಕ್ಷ್ಮಣ್ ಕುಟುಂಬ ಸಮೇತರಾಗಿ ಕಾಟಂನಲ್ಲೂರು ಬಳಿಯ ಸಪ್ತಗಿರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆಯುತ್ತಿದ್ದ ಆರತಕ್ಷತೆ ಸಮಾರಂಭಕ್ಕೆ ಬಂದಿದ್ದರು. ರಾತ್ರಿ 8.30ರ ಸಮಯದಲ್ಲಿ ಮಂಟಪದ ಸಮೀಪ ಕಾರನ್ನು ನಿಲ್ಲಿಸಿ ಮಂಟಪಕ್ಕೆ ಹೋಗುತ್ತಿದ್ದರು. ಆಗ ಮಂಟಪದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಬಿಳಿ ಬಣ್ಣದ ಮಾರುತಿ 800 ಕಾರನ್ನು ತಳ್ಳಿಕೊಂಡು ಹೋಗುತ್ತಿದ್ದು ಲಕ್ಷ್ನಣ್ ಅವರನ್ನು ಸಹಾಯಕ್ಕೆ ಕರೆದರು.

ಲಕ್ಷ್ಮಣ್ ಸ್ವಲ್ಪ ದೂರ ಅವರೊಂದಿಗೆ ಕಾರನ್ನು ತಳ್ಳಿಕೊಂಡು ಹೋಗುತ್ತಿದ್ದಾಗ ಅಪರಿಚಿತರು ಚಾಕು ವಿನಿಂದ ಬೆದರಿಸಿ ಅವರ ಮೈಮೇಲಿದ್ದ 4 ಚಿನ್ನದ ಉಂಗುರ, ಕತ್ತಿನಲ್ಲಿದ್ದ ಸರ ಕಸಿದು ಕಾರಿನೊಂದಿಗೆ ಪರಾರಿಯಾದರು. ಇದರ ಒಟ್ಟು ಮೌಲ್ಯ ಸುಮಾರು ₨1.77 ಲಕ್ಷ ಎನ್ನಲಾಗಿದೆ. ದುಷ್ಕ ರ್ಮಿಗಳು 25–30 ವರ್ಷ ವಯಸ್ಸಿನವ ರಾಗಿದ್ದು ಕನ್ನಡ ಮಾತನಾಡುತ್ತಿದ್ದರು ಎಂದು ಲಕ್ಷ್ಮಣ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ   ನಡೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.