ಗುರುವಾರ , ಜೂನ್ 24, 2021
29 °C

ಹೋಳಿ ಸಂಭ್ರಮಕ್ಕೆ ಕುತ್ತು ತಂದ ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಹೋಳಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮ ಪಡುತ್ತಿದ್ದ ಇಲ್ಲಿನ ನೂರಾರು ಮಕ್ಕಳು ಹಾಗೂ ಕೆಲ ಹಿರಿಯರಲ್ಲಿ ಅಲರ್ಜಿ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಘಟನೆ ಧಾರಾವಿಯಲ್ಲಿ ನಡೆದಿದೆ.ಶಾಸ್ತ್ರಿ ನಗರದವರಾದ ಇವರಲ್ಲಿ ಬಹುಪಾಲು ಮಂದಿ ದಕ್ಷಿಣ ಭಾರತದವರಾಗಿದ್ದಾರೆ. ಬಣ್ಣ ಎರಚಾಟದ ವೇಳೆ ಹಲವರಿಗೆ ವಾಕರಿಕೆ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು.ಮಕ್ಕಳಲ್ಲಿ ಹೆಚ್ಚಿನವರು 8-10 ವರ್ಷದೊಳಗಿನವರಾಗಿದ್ದು, ಸೂಕ್ತ ಚಿಕಿತ್ಸೆಯ ಬಳಿಕ ಕೆಲವರನ್ನು ಮನೆಗೆ ಕಳುಹಿಸಲಾಯಿತು. ದಾಖಲಾದವರ ಆರೋಗ್ಯ ಸ್ಥಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.ಈ ಮಕ್ಕಳು ಚರ್ಮದ ವಸ್ತುಗಳನ್ನು ತಯಾರಿಸುವ ಸಮೀಪದ ಕಾರ್ಖಾನೆಯಿಂದ ಬಣ್ಣ ಅಥವಾ `ಡೈ~ಗಳನ್ನು ಕದ್ದು ತಂದು ಎರಚಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಅವರ ಬಳಿ ಇದ್ದ ಡೈಯನ್ನು ವಶಪಡಿಸಿಕೊಳ್ಳಲಾಗಿದ್ದು, ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.