ಸೋಮವಾರ, ಜನವರಿ 20, 2020
25 °C

‘ಅಂಬೇಡ್ಕರ್ ಪೂಜೆಯಿಂದ ಉಪಯೋಗವಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಂಬೇಡ್ಕರ್ ಅವರ ಮೂರ್ತಿ ಪೂಜೆಯಿಂದ  ಯಾವುದೇ ಉಪಯೋಗವಿಲ್ಲ’ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ನಾಯಕ್ ಅಭಿಪ್ರಾಯಪಟ್ಟರು.ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕ ರರ ಸಮನ್ವಯ ಸಮಿತಿಯು ಶುಕ್ರ ವಾರ ಏರ್ಪಡಿಸಿದ್ದ ಡಾ.ಬಿ. ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ ಮತ್ತು ಸಮನ್ವಯ ಸಮಿತಿ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.‘ಅಂಬೇಡ್ಕರ್ ವಿಚಾರ ಧಾರೆ ಪಾಲಿಸುವುದರಿಂದ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದರು. ಜಾನಪದ ಗಾಯಕ ಬಾನಂದೂರು  ಕೆಂಪಯ್ಯ, ಸಮಿ ತಿಯ ಅಧ್ಯಕ್ಷ ಡಿ.ಶಿವಶಂಕರ್ ಕಾರ್ಯಕ್ರಮದಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)