ಬೆಂಗಳೂರು: ‘ಅನುಭವದ ನೆಲೆಯಲ್ಲಿ ಹುಟ್ಟಿಕೊಳ್ಳುವ ಕಾವ್ಯ ಶಾಶ್ವತವಾಗಿ ಉಳಿಯುತ್ತದೆ’ ಎಂದು ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಅಭಿಪ್ರಾಯಪಟ್ಟರು. ಕರ್ನಾಟಕ ಸ್ವಾಭಿಮಾನಿ ವೇದಿಕೆಯು ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ನ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಲಕ್ಕೆ ತಕ್ಕಂತೆ ಕವಿತೆಯ ವಿಷಯಗಳು ಬದಲಾಗುತ್ತಿದ್ದು, ಸೃಜನಶೀಲತೆಯ ಹೊಸ ರೂಪ ಪಡೆಯುತ್ತಿವೆ’ ಎಂದು ವ್ಯಾಖ್ಯಾನಿಸಿದರು.
ಈ ಸಂದರ್ಭ ಪ್ರೊ. ಚಂದ್ರಶೇಖರ ಪಾಟೀಲ ಅವರ ‘ಚಂಪಾಲಹರಿ’, ನ್ಯಾಯಮೂರ್ತಿ ಮಹಿಪಾಲ ದೇಸಾಯಿ ಅವರ ‘ಕಹಅಲ್ ಜಿಬ್ರಾನ್: ಪ್ರವಾದಿ’, ಡಾ.ರಾಜಶೇಖರ ಮಠಪತಿ ಅವರ ‘ಇರುವಷ್ಟು ಕಾಲ ಇರುವಷ್ಟೇ ಕಾಲ’, ಡಾ.ಕೋ.ಶ್ರೀ ವಸಂತಕುಮಾರ ಅವರ ‘ಜೈನ ರಾಮಾಯಣ–ಭಾಗ 2’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಉಷಾ ಪಿ.ರೈ, ರಾಧಾ ಕುಲಕರ್ಣಿ, ಸುಜಾತ ವಿಶ್ವನಾಥ, ರೇಣುಕಾ ಹೆಳವರ, ಚಂದ್ರಶೇಖರ ಸಾಕೃವಂಶಿ ಅವರಿಂದ ಕವಿಗೋಷ್ಠಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.