ಶುಕ್ರವಾರ, ಜೂನ್ 18, 2021
21 °C

‘ಆ್ಯಸಿಡ್‌ ದಾಳಿ ನಿಲ್ಲಿಸಿ’ ಹೋರಾಟಗಾರ್ತಿಗೆ ಅಮೆರಿಕದ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಐಎಎನ್‌ಎಸ್‌): ಅಮೆ­ರಿಕದ ವಿದೇಶಾಂಗ ಸಚಿವಾಲಯ ಅಸಾ­ಧಾ­ರಣ ಸಾಧನೆ ಮಾಡಿದ ಮಹಿಳೆ­­ಯರಿಗೆ ನೀಡುವ ಪ್ರಶಸ್ತಿಗೆ ಭಾರತದ ‘ಆ್ಯಸಿಡ್‌ ದಾಳಿ ನಿಲ್ಲಿಸಿ’ ಅಭಿ­ಯಾನದ ಸಂಚಾಲಕಿ ಲಕ್ಷ್ಮಿ ಪಾತ್ರರಾಗಿದ್ದಾರೆ.ಬುಧವಾರ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೆರಿಕದ ಪ್ರಥಮ ಮಹಿಳೆ ಮಿಶೆಲ್‌ ಒಬಾಮ ಭಾಗವಹಿಸಲಿದ್ದಾರೆ.

ತನ್ನ ಪ್ರೇಮಭಿಕ್ಷೆಯನ್ನು ತಿರಸ್ಕರಿಸಿ­ದ್ದ­ಕ್ಕಾಗಿ ಸ್ನೇಹಿತೆಯ ಸಹೋದರ 16 ವರ್ಷದ ಲಕ್ಷ್ಮಿ ಮೇಲೆ ಆ್ಯಸಿಡ್‌ ದಾಳಿ ನಡೆಸಿ­ದ್ದನು. ಇದರಿಂದ ಅಂದ­ ಕಳೆದು­ಕೊಂಡರೂ ಧೃತಿಗೆಡದ ಲಕ್ಷ್ಮಿ, ಭಾರತ­­ದಲ್ಲಿ ‘ಆ್ಯಸಿಡ್‌ ದಾಳಿ ನಿಲ್ಲಿಸಿ’ ಹೋರಾಟ ನಡೆಸಿದ್ದರು. ಅವರ ಹೋರಾಟದ ಫಲವಾಗಿ ಸುಪ್ರೀಂ­ಕೋರ್ಟ್‌, ಸರ್ಕಾರ­ಗಳಿಗೆ ಆ್ಯಸಿಡ್‌ ಮಾರಾಟ ನಿಷೇಧಿಸು­ವಂತೆ ಆದೇಶ ನೀಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.