ಸೋಮವಾರ, ಮಾರ್ಚ್ 1, 2021
31 °C
ಬ್ರಹ್ಮವಾರ: ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ- ಕ್ಷೀರಸೌಧ ಉದ್ಘಾಟನೆ

‘ಉಪ್ಪೂರಿನಲ್ಲಿ ಶೀಘ್ರವೇ ಡೈರಿ ಸ್ಥಾಪನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಉಪ್ಪೂರಿನಲ್ಲಿ ಶೀಘ್ರವೇ ಡೈರಿ ಸ್ಥಾಪನೆ’

ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿಯೇ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಉಪ್ಪೂರಿನಲ್ಲಿ ಸುಮಾರು ₨70ರಿಂದ 80ಕೋಟಿ ಅಂದಾಜಿನಲ್ಲಿ ಶೀಘ್ರವೇ ಡೈರಿ ಸ್ಥಾಪಿಸಲಾಗುವುದು ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಕೊಡವೂರು ಹೇಳಿದರು.ಉಪ್ಪೂರು ತೆಂಕಬೆಟ್ಟಿನ ಅಮ್ಮಂಜೆ ಯಲ್ಲಿ ಮಂಗಳವಾರ ಅವರು ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ ಕ್ಷೀರಸೌಧವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಮಂಗಳೂರು ಘಟಕದಿಂದ ಹಾಲಿನ ಉತ್ಪನ್ನಗಳನ್ನು ಉಡುಪಿ ಜಿಲ್ಲೆಗೆ ತಂದು ಮಾರಾಟ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿಯೇ ತಯಾರಿಸಿ ಮಾರಾಟ ಮಾಡುವ ಸಲುವಾಗಿ ಮತ್ತು ಮಣಿಪಾಲದ ಡೈರಿಯಲ್ಲಿ ಇದಕ್ಕೆ ಅವ ಕಾಶಗಳು ಕಡಿಮೆ ಇವೆ. ಅದಕ್ಕಾಗಿ ಉಪ್ಪೂರಿನಲ್ಲಿ ಘಟಕವನ್ನು ಸ್ಥಾಪಿಸ ಲಾಗುವುದು ಎಂದರು.ಈಗಾಗಲೇ ಈ ಯೋಜನೆಗಾಗಿ 6 ಎಕರೆ ಜಮೀನನ್ನು ಖರೀದಿ ಮಾಡ ಲಾಗಿದೆ. ಅತ್ಯಾಧುನಿಕ ಯಂತ್ರೋಪ ಕರಣಗಳನ್ನು ಬಳಸಿ ಉತ್ತಮ ಗುಣ ಮಟ್ಟದ  ಡೈರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಯಲ್ಲಿ ಒಟ್ಟು 672 ಹಾಲು ಉತ್ಪಾದಕರ ಸಂಘಗಳು ಇದ್ದು, ಅದರಲ್ಲಿ 395 ಸಂಘ ಗಳು ಸ್ವಂತ ಕಟ್ಟಡವನ್ನು ಹೊಂದಿವೆ. ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಗಳ ಸಹಕಾರದಿಂದ ಮತ್ತು ಸಂಘ ದೊಂದಿಗೆ ನಿರಂತರವಾಗಿ ಸದಸ್ಯರು ಸಂಪರ್ಕ ಇಟ್ಟುಕೊಂಡಿರುವುದರಿಂದ ಒಕ್ಕೂಟ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಗಣಕಯಂತ್ರ ಉದ್ಘಾಟಿಸಿದ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘ ಉಭಯ ಜಿಲ್ಲೆಗಳಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಕಲ್ಪಿಸಿಕೊಟ್ಟಿದೆ. ಹೈನುಗಾರಿಕೆ ಮತ್ತು ಕೃಷಿಯನ್ನು ಒಟ್ಟಿಗೆ ಮಾಡು ವುದರಿಂದ ನಮ್ಮಲ್ಲಿ ಕೃಷಿ ಇನ್ನೂ ಉಳಿ ದಿದೆ ಎಂದ ಅವರು ಯುವಕರನ್ನು ಸೆಳೆ ಯುವ ಕೆಲಸವಾಗಬೇಕು ಎಂದು ಹೇಳಿದರು.

ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಡಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಹಾಲು ಒಕ್ಕೂಟದ ನಿರ್ದೇಶಕರಾದ ಜಾನಕಿ ಹಂದೆ, ಅಶೋಕ್ ಕುಮಾರ್ ಶೆಟ್ಟಿ, ವ್ಯವಸ್ಥಾಪಕ  ನಿರ್ದೇಶಕ ಡಾ.ಬಿ.ವಿ ಸತ್ಯನಾರಾಯಣ, ಸಹಾಯಕ ವ್ಯವಸ್ಥಾಪಕ ಡಾ.ಶಿವಪ್ಪ, ನಿತ್ಯಾನಂದ ಭಕ್ತ, ಅಮು್ಮಂಜೆ ಚರ್ಚ್‌ನ ಧರ್ಮಗುರು ಫಾ.ಡೇವಿಡ್‌ ಕ್ರಾಸ್ತಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಅಶೋಕ್, ತಾಲ್ಲೂಕು ಪಂಚಾ ಯಿತಿ ಸದಸ್ಯೆ ವೆರೋನಿಕಾ ಕರ್ನೆಲಿಯೋ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಕ್ಷ ಎನ್‌. ರಮೇಶ್ ಶೆಟ್ಟಿ, ಉಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಮಣಿಪಾಲ ವಿಸ್ತ ರಣಾಧಿಕಾರಿ ಸತೀಶ್ ಯಡಿಯಾಳ್, ಕಟ್ಟಡ ಉಸ್ತುವಾರಿ ಸಮಿತಿಯ ಗೌರವಾ ಧ್ಯಕ್ಷ ಎ.ಕೃಷ್ಣ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಂಘದಿಂದ ಡೈರಿ ನಿರ್ಮಾಣಕ್ಕೆ ₨50ಸಾವಿರದ ಚೆಕ್‌ನ್ನು ನೀಡಲಾಯಿತು.ರೈತ ಕಲ್ಯಾಣ ಟ್ರಸ್ಟ್ ನಿಂದ ಕುಕ್ಕೆಹಳ್ಳಿ ಹಾಲು ಉತ್ಪಾದ ಕರ ಸಂಘದ ಸದಸ್ಯೆ ಲಕ್ಷ್ಮೀ ಶೆಟ್ಟಿ ಅವರಿಗೆ ₨20ಸಾವಿರ ಸಹಾಯಧನ ನೀಡಲಾಯಿತು.ಸಂಘದ ಕಾರ್ಯದರ್ಶಿ ಮಮತಾ ವರದಿ ವಾಚಿಸಿದರು. ಶರಣ್ಯ ಪ್ರಾರ್ಥಿಸಿ ದರು. ಸಂದೀಪ್ ಶೆಟ್ಟಿ ಸ್ವಾಗತಿಸಿದರು. ದ್ರವ್ಯ ಬಿ ಶೆಟ್ಟಿ ವಂದಿಸಿದರು. ವಿಸ್ತರಣಾಧಿಕಾರಿ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.