ಗದಗ: ಏಡ್ಸ್ ನಿಯಂತ್ರಣ ಹಾಗೂ ನಿರ್ಮೂಲನೆಗೆ ಸರ್ಕಾರದ ಜತೆ ಸಂಘ, ಸಂಸ್ಥೆಗಳು ಕೈಜೋಡಿಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಅರುಂಧತಿ ಕುಲಕರ್ಣಿ ಹೇಳಿದರು.

ನಗರದ ಒಕ್ಕಲಗೇರಿಯ ಸಮು ದಾಯ ಭವನದಲ್ಲಿ ಸುವರ್ಣ ಲೇಡಿಸ್ ಕ್ಲಬ್ ಏರ್ಪಡಿಸಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಏಡ್ಸ್ ಮೊದಲು ಕಾಣಿಸಿಕೊಂಡಿದ್ದು ಆಫ್ರಿಕಾ ದಲ್ಲಿ. ಅಂಕಿ ಅಂಶ ಪ್ರಕಾರ ಗದಗ ಜಿಲ್ಲೆ ಆರನೇ ಸ್ಥಾನದಲ್ಲಿದೆ. ರೋಗದ ಲಕ್ಷಣ ಗಳು ಕಾಣಿಸಿಕೊಂಡ ಬಳಿಕ ನೀಡುವ ಚಿಕಿತ್ಸೆ ಬಗ್ಗೆ ವಿವರಿಸಿದ ಅವರು, ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಜಾಗೃತ ರಾಗಬೇಕು ಎಂದು ತಿಳಿಸಿದರು.

ತೋಂಟದಾರ್ಯ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಶಿವರಾಜ ಮಾನ್ವಿ ಮಾತನಾಡಿ, ಸಮಾಜದಲ್ಲಿ ಉತ್ತಮ ಜೀವನ ನಡೆಸಿದರೆ ಇಂತಹ ರೋಗಗಳು ಹರಡದಂತೆ ತಡೆಯಬಹುದು ಎಂದರು.

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸೇವಾ ಪ್ರತಿನಿಧಿ ಲಕ್ಷ್ಮೀ ಗ್ರಾಮ ಪುರೋಹಿತ ಪ್ರಾಸ್ತವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮನಾಡಿದ ಕ್ಲಬ್ ಅಧ್ಯಕ್ಷೆ ಶೈಲಜಾ ಕವಲೂರ, ಎಚ್ಐವಿ ರೋಗಿಗಳನ್ನು ಅಸ್ಪ್ರಶ್ಯರಂತೆ ಕಾಣದೆ ಪ್ರೀತಿ, ವಿಶ್ವಾಸ, ಭರವಸೆ ನೀಡಬೇಕು. ಕ್ಲಬ್ ವತಿಯಿಂದ ಸಾಮಾಜಿಕ ಕಾರ್ಯ ಕ್ರಮಗಳನ್ನು ಹಾಕಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಲಾಗುವುದು ಎಂದರು.

ಸುಮಿತ್ರ ಪ್ರಾರ್ಥಿಸಿದರು, ಪ್ರಧಾನ ಕಾರ್ಯದರ್ಶಿ ವಿಜಯ ವೈದ್ಯ ಸ್ವಾಗತಿಸಿದರು.
ಪ್ರತಿಮಾ ಶೆಟ್ಟಿ ಪುಷ್ಪಾರ್ಪಣೆ ಮಾಡಿದರು. ಖಜಾಂಜಿ ಸುಮನ ಪಾಟೀಲ ನಿರೂಪಿಸಿದರು. ಕಲಾವತಿ ಅಲಬುರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.